ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಜಪೇಟೆ: ಮಹಿಳೆಯಂತೆ ವೇಷ ಧರಿಸಿ ಸಂಬಂಧಿಯ ಚಿನ್ನಾಭರಣ ಕಳವು

Published 30 ಮೇ 2024, 13:14 IST
Last Updated 30 ಮೇ 2024, 13:14 IST
ಅಕ್ಷರ ಗಾತ್ರ

ವಿರಾಜಪೇಟೆ: ಮಹಿಳೆಯಂತೆ ಬುರ್ಖಾ ಧರಿಸಿ ವೇಷಮರೆಸಿಕೊಂಡು ಒಬ್ಬಂಟಿಯಾಗಿದ್ದ ತನ್ನ ಸಂಬಂಧಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದ  ಆರೋಪಿಯನ್ನು ಇಲ್ಲಿನ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸಮೀಪದ ಐಮಂಗಲ ಗ್ರಾಮದ ಕೊಮ್ಮೆತೋಡುವಿನಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಹ್ಯಾರಿಸ್ ಎಂಬಾತನೆ ಬಂಧಿತ ಆರೋಪಿ. ಮೇ 20 ರಂದು ಆರೋಪಿಯು ಹೆಂಗಸಿನಂತೆ ವೇಷ ಧರಿಸಿಕೊಂಡು ವಿರಾಜಪೇಟೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಾಗಿರುವ 97 ವರ್ಷದ ಸೋದರತ್ತೆ ಖತೀಜ ಎಂಬುವವರ ಕುತ್ತಿಗೆಯಿಂದ ಸುಮಾರು 16 ಗ್ರಾಂ ತೂಕದ ಚಿನ್ನದ ಆಭರಣವನ್ನು ಕಸಿದುಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT