ಮಡಿಕೇರಿ: ಭಾರತ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ದೀಪ್ ಮಾಲಾ ನೇತೃತ್ವದ ತಂಡವು ಈಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಮತ್ತು ಚುನಾವಣಾ ಪ್ರಕ್ರಿಯೆ ಬಗ್ಗೆ ಮಾಹಿತಿ ಹಂಚಿಕೊಂಡಿತು.

ತಂಡವು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಡೆಸಿದರು.

ತಂಡದಲ್ಲಿ ಅಧೀನ ಕಾರ್ಯದರ್ಶಿ ದೀಪ್ ಮಾಲಾ, ಸಹಾಯಕ ವಿಭಾಗಾಧಿಕಾರಿಗಳಾದ ಜ್ಯೋತ್ಸಾನಾ ಮಿಗ್ಲಾನಿ, ಶುಭಮ್ ಮಿಶ್ರಾ ಪ್ರಿನ್ಸ್ ರೈ, ಜಾವೇದ್ ಖಾನ್, ಅಂಕುರ್ ಮಲಿಕ್, ಪ್ರದೀಪ್ ಕೌರ್, ಆಯುಷಿ ನಾಯಕ್ ಮತ್ತು ಮೊಹಮ್ಮದ್ ಅರ್ಷದ್ ಇದ್ದರು. ಇವರು ಮತದಾನ ಕೇಂದ್ರಗಳಿಗೆ ಭೇಟಿ ನೀಡಿದರು.

‘ಭಾರತದ ವಿಶಿಷ್ಟ, ದೂರಸ್ಥ ಮತಗಟ್ಟೆಗಳಿಗೆ ಭೇಟಿ ನೀಡುವುದು’ ಎಂಬ ಈ ಯೋಜನೆಯು ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡುವುದರೊಂದಿಗೆ ಸವಾಲಿನ ಭೌಗೋಳಿಕ ಪ್ರದೇಶಗಳಲ್ಲಿ ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ’ ಎಂದು ಅವರು ಹೇಳಿದರು.

ಈ ಸಂಘಟಿತ ಪ್ರಯತ್ನವು, ಭೌಗೋಳಿಕ ಸ್ಥಳವನ್ನು ಲೆಕ್ಕಿಸದೆ, ಎಲ್ಲಾ ನಾಗರಿಕರಿಗೂ ಸಮಗ್ರ ಮತ್ತು ಪ್ರವೇಶಿಸಬಹುದಾದ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವ ಇಸಿಐನ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ವಿವರಿಸಿದರು.

ಕಾರುಗುಂದ ಮತ್ತು ಕುಂದಚೇರಿ ಹಾಗೂ ಕೋಪಟ್ಟಿ ಮತಗಟ್ಟೆಗಳಿಗೆ ಭೇಟಿ ನೀಡಿ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.