ಮಂಗಳವಾರ, ಮಾರ್ಚ್ 28, 2023
30 °C
ಮತ್ತಿಗೋಡು ಶಿಬಿರದಿಂದ ವೀರನಹೊಸಹಳ್ಳಿಗೆ ಪಯಣ

ದಸರಾ ಉತ್ಸವಕ್ಕೆ ಹೊರಟ ‘ಅಭಿಮನ್ಯು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದದಲ್ಲಿ ಪಾಲ್ಗೊಳ್ಳಲು ಅಂಬಾರಿ ಆನೆ ಅಭಿಮನ್ಯು,  ಗೋಪಾಲಸ್ವಾಮಿ ಹಾಗೂ ಅಶ್ವತ್ಥಾಮ ಆನೆಗಳು ಭಾನುವಾರ ನಾಗರಹೊಳೆ ಮತ್ತಿಗೋಡು ಶಿಬಿರದಿಂದ ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಗೆ ಪ್ರಯಾಣ ಬೆಳೆಸಿದವು.

ಬೆಳಿಗ್ಗೆ ಮಾವುತರು ಆನೆಗಳನ್ನು ತೊಳೆದು ಸರಳವಾಗಿ ಶೃಂಗರಿಸಿದ್ದರು. ಮಧ್ಯಾಹ್ನ 3 ಗಂಟೆ ವೇಳೆಗೆ ಅವುಗಳಿಗೆ ಪೂಜೆ ಸಲ್ಲಿಸಿ ಶಿಬಿರದಿಂದ ಬೀಳ್ಕೊಡಲಾಯಿತು. ಅಭಿಮನ್ಯು ಆನೆ ಮಾವುತ ವಸಂತ, ಕಾವಾಡಿ ರಾಜು, ಗೋಪಾಲಸ್ವಾಮಿ ಆನೆಯ ಮಾವುತ ಗಣೇಶ್, ಕಾವಾಡಿ ಸೃಜನ್, ಅಶ್ವತ್ಥಾಮ ಆನೆಯ ಮಾವುತ ತಿಮ್ಮ, ಕಾವಾಡಿ ರಮೇಶ್ ಆನೆಯೊಂದಿಗೆ ಪ್ರಯಾಣ ಬೆಳೆಸಿದರು.

ಈ ಮೂರು ಆನೆಗಳು ಸೋಮವಾರ ಇತರ ಆನೆಗಳೊಂದಿಗೆ ಕೂಡಿಕೊಂಡು ಮೈಸೂರಿಗೆ ಪ್ರಯಾಣ ಬೆಳೆಸಲಿವೆ ಎಂದು ಮತ್ತಿಗೋಡು ಸಾಕಾನೆ ಶಿಬಿರದ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ತಿಳಿಸಿದರು.

ಸಾಕಾನೆ ಶಿಬಿರದ ಆನೆ ಮಾವುತರ ಮತ್ತು ಕಾವಾಡಿಗಳ ಕುಟುಂಬಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು