ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಿಗೆ : ಹಾರಂಗಿ ನದಿ ದಂಡೆಯಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷ

Last Updated 16 ಡಿಸೆಂಬರ್ 2019, 13:48 IST
ಅಕ್ಷರ ಗಾತ್ರ

ಕುಶಾಲನಗರ : ಸಮೀಪದ ಕೂಡಿಗೆ ಕೊಡಗು ಸೈನಿಕ ಶಾಲೆಯ ಬಳಿಯ ಹಾರಂಗಿ ನದಿ ದಂಡೆಯಲ್ಲಿ ಭಾನುವಾರ ಕಾಡಾನೆಗಳ ಹಿಂಡು‌ ಪ್ರತ್ಯಕ್ಷಗೊಂಡ ಹಿನ್ನಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದರು.

ಕಾಡಾನೆಗಳನ್ನು ಗಮನಿಸಿದ ಈ ಭಾಗದ ಗ್ರಾಮಸ್ಥರು ಭಯಭೀತರಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅವುಗಳನ್ನು ಹಾರಂಗಿ ನದಿಯನ್ನು ದಾಟಿ ಬೆಂಡೆಬೆಟ್ಟದ ಕಡೆಗೆ ಅಟ್ಟಿಸಿದ್ದಾರೆ. ಅದರೆ ಒಂದು ಅನೆ ಮಾತ್ರ ನದಿಯನ್ನು ದಾಟದೆ ಸತಾಯಿಸಿದ‌ ಕಾರಣ ಅಧಿಕಾರಿ ಹಾಗೂ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ನದಿಯ ದಂಡೆಯಲ್ಲಿ ಮಲ್ಲೇನಹಳ್ಳಿಯ ವರಗೆ ತೆರಳಿದ ಒಂಟಿ‌ ಸಲಗವನ್ನು ಹಿಂಬಾಲಿಸಿದ ಅರಣ್ಯ ಇಲಾಖೆಯವರು ಪಟಾಕಿ ಸಿಡಿಸಿ ಮಲ್ಲೇನಹಳ್ಳಿ ಬಳಿಯಿಂದ ಹಾರಂಗಿ ನದಿಯನ್ನು ದಾಟಿಸಿ ಬೆಂಡೆಬೆಟ್ಟದ ಕಡೆಗೆ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು.

ಈ ಸಂದರ್ಭ ಹುದುಗೂರು ಉಪ ವಲಯ ಅರಣ್ಯ ಅಧಿಕಾರಿ ಸತೀಶ್ ಕುಮಾರ್, ಹಾಗೂ ಸಿಬ್ಬಂದಿ ತಂಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT