ಶನಿವಾರ, ನವೆಂಬರ್ 28, 2020
18 °C

ಆಸ್ತಿ ವಿವಾದ: ಸೊಸೆಗೆ ಮಾವನಿಂದಲೇ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ಸಮೀಪದ ಶಾಂತಳ್ಳಿ ಹೋಬಳಿಯ ಬೆಟ್ಟದಕೊಪ್ಪ ಗ್ರಾಮದಲ್ಲಿ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮಾವನೇ ಸೊಸೆಗೆ ಗುಂಡಿಕ್ಕಿರುವ ಘಟನೆ ಗುರುವಾರ ನಡೆದಿದೆ.

ತೀರ್ಥ (36) ಗಾಯಗೊಂಡವರು. ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ಹಸುವನ್ನು ಹೊರಗೆ ಕಟ್ಟುವ ವಿಚಾರಕ್ಕೆ ಮಾವ ಮತ್ತು ಸೊಸೆ ನಡುವೆ ಮಾತಿನ ಚಕಮಕಿ ನಡೆದಿದೆ.

ಕೋಪಗೊಂಡ ಅಯ್ಯಪ್ಪ ಅವರು ಮನೆಯಲ್ಲಿದ್ದ ಒಂಟಿನಳಿಕೆ ಕೋವಿಯಿಂದ ಗುಂಡು ಹಾರಿಸಿದ್ದಾರೆ. ಎಡ ಎದೆಯ ಭಾಗ ಹಾಗೂ ಪಕ್ಕೆಗೆ ಗಾಯಗೊಂಡಿರುವ ತೀರ್ಥ ಅವರನ್ನು ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ನನ್ನ ಅಪ್ಪನೇ ಹೆಂಡತಿಗೆ ಗುಂಡು ಹೊಡೆದಿದ್ದಾರೆ’ ಎಂದು ತೀರ್ಥ ಅವರ ಪತಿ ಹೂವಯ್ಯ ನೀಡಿದ ದೂರಿನ ಅನ್ವಯ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು