ಸಂತ್ರಸ್ತರ ರಕ್ಷಣೆ: 16 ಮಂದಿಗೆ ಪ್ರಶಸ್ತಿ

7

ಸಂತ್ರಸ್ತರ ರಕ್ಷಣೆ: 16 ಮಂದಿಗೆ ಪ್ರಶಸ್ತಿ

Published:
Updated:
Deccan Herald

ಮಡಿಕೇರಿ: ತಾಲ್ಲೂಕಿನ ಜೋಡುಪಾಲದಲ್ಲಿ ಪ್ರಕೃತಿ ವಿಕೋಪದ ವೇಳೆ ಸಂತ್ರಸ್ತರ ರಕ್ಷಣೆ ಮಾಡಿದ 16 ಮಂದಿ ಯುವಕರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಜಮೀರ್ ಅಹಮದ್ ‘ತೆಕ್ಕಿಲ್ ಎಕ್ಸಲೆನ್ಸ್’ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಅರಂತೋಡಿನ ತೆಕ್ಕಿಲ್ ಗ್ರಾಮಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಈಚೆಗೆ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಂಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಿದ ಎಸ್‌ಕೆಎಸ್ಎಸ್ಎಫ್ ಹಾಗೂ ಬಜರಂಗದಳದ ಯುವಕರನ್ನು ಸನ್ಮಾನಿಸಲಾಯಿತು.

ಎಸ್‌ಕೆಎಸ್ಎಸ್ಎಫ್‌ನ ತಾಜುದ್ದೀನ್ ಟರ್ಲಿ, ಜಮಾಲುದ್ದೀನ್ ಬೆಳ್ಳಾರೆ, ಎಸ್. ತಾಜುದ್ದೀನ್, ಎಸ್.ಎಂ. ಮುನೀರ್, ಕೆ.ಎಂ.ಅನ್ವರ್, ಸರ್ಫುದ್ದೀನ್, ಅಜಾರುದ್ದೀನ್, ಅಯೂಫ್, ಮುಬಾರಕ್, ಆರಿಫ್ ಬೆಳ್ಳಾರೆ, ಅಬ್ದುಲ್ ಶಫೀಕ್ ಬೆಳ್ಳಾರೆ, ಕೆ.ಎಂ. ಅಬ್ದುಲ್ ಖಾದರ್ ಹಾಗೂ ಬಜರಂಗದಳದ ಕೆ.ಎಸ್. ಮನೋಹರ್, ಬಿಪಿನ್ ಕಲ್ಲುಗುಂಡಿ, ವಿಜಯ, ದಿನೇಶ್ ಕಲ್ಲುಗುಂಡಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಸಂತ್ರಸ್ತರಿಗೆ ನೆರವಾದ ಸಂಘ ಸಂಸ್ಥೆಗಳಿಗೂ ಪ್ರಮಾಣ ಪತ್ರ ವಿತರಿಸಿದರು.

ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚ್ಚೂರು ಮೋನು, ಸದಸ್ಯ ಕೆಪಿಸಿಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಗ್ರಾಮಸ್ಥರಾದ ಪಿ.ಎ. ಮಹಮ್ಮದ್, ರಘು, ಟಿ.ಎಂ. ಜಾವೇದ್, ಸಿದ್ದಿಕ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !