ಮಡಿಕೇರಿ: ಕನ್ನಡ ಸಾಹಿತ್ಯ ಅಮೂಲ್ಯ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಪರಿಷ್ಕರಿಸಿ, ಮುದ್ರಿಸಿ ಸಂರಕ್ಷಿಸಿದವರು ಮಾತ್ರವಲ್ಲ ಆ ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೂ ಉಳಿಯುವಂತೆ ಮಾಡಿದವರು ಫಕೀರಪ್ಪ ಗುರುಬಸಪ್ಪ ಹಳಕಟ್ಟಿ. ಅವರ ದೂರದೃಷ್ಟಿ ಮತ್ತು ಮೌಲ್ಯಗಳು ಇಂದಿಗೂ, ಪ್ರತಿಯೊಬ್ಬರಿಗೂ ಮಾದರಿ ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಉಪನ್ಯಾಸಕ ಮಾರುತಿ ದಾಸಣ್ಣವರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ಗಾಂಧಿಭವನದಲ್ಲಿ ಬುಧವಾರ ಫ.ಗು.ಹಳಕಟ್ಟಿ ಅವರ ಜನ್ಮದಿನದ ಪ್ರಯುಕ್ತ ನಡೆದ ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಚನಗಳ ಸಂಶೋಧನೆ, ಸಂಗ್ರಹಣೆ, ಪರಿಷ್ಕರಣೆ, ಮುದ್ರಣ, ಪ್ರಕಾಶನ, ಪ್ರಚಾರ, ಪ್ರಸಾರ ಹಾಗೂ ಇಂಗ್ಲೀಷ್ ಭಾಷೆಗೆ ವಚನಗಳ ಅನುವಾದ ಮಾಡಿ ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿದವರು ಫ.ಗು.ಹಳಕಟ್ಟಿ ಎಂದು ಅವರು ಹೇಳಿದರು.

ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂಗ್ರಹ ಹಾಗೂ ಮುದ್ರಣಕ್ಕಾಗಿಯೇ ವಕೀಲ ವೃತ್ತಿಯನ್ನು ಬಿಟ್ಟು ವಚನ ಸಂಗ್ರಹಕ್ಕೆ ಬದುಕು ಮೀಸಲಿಟ್ಟರು. ಅನೇಕ ಬಾರಿ ಸೈಕಲ್ ಏರಿ ಊರೂರು ಅಲೆದರು, ತಾಳೆ ಗರಿ, ಓಲೆಕಟ್ಟುಗಳನ್ನು ಸಂಗ್ರಹಿಸಿ ಪುಸ್ತಕ ಮುದ್ರಣಕ್ಕೆ ಮುಂದಾದರು. ಇದರಿಂದ ಆರ್ಥಿಕ ತೊಂದರೆಗೂ ಸಿಲುಕಿದ್ದರು. ಆದರೂ ಯಾವುದನ್ನು ಲೆಕ್ಕಿಸದೆ ಜೀವನವನ್ನೇ ವಚನ ಸಾಹಿತ್ಯ ಸಂಗ್ರಹಕ್ಕೆ ಮೀಸಲಿಟ್ಟ ಅಪ್ರತಿಮ ಫ.ಗು.ಹಳಕಟ್ಟು ಎಂದು ವಿವರಿಸಿದರು.

ಅವರು ಅಂದೇ ಸಹಕಾರ ಬ್ಯಾಂಕುಗಳನ್ನು, ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದರು. ಸ್ವಾತಂತ್ರ್ಯ ಚಳವಳಿ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಅವರು ಭಾಗಹಿಸಿದ್ದರು. ಕರ್ನಾಟಕ ಏಕೀಕರಣ ರಾಜ್ಯ ಸಮ್ಮೇಳನದ ಅಧ್ಯಕ್ಷರಾಗಿ, 1926ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು ಎಂದು ಸ್ಮರಿಸಿದರು.

ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬ್ಲಾಸಂ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಮಣಜೂರು ಮಂಜುನಾಥ್ ಭಾಗವಹಿಸಿದ್ದರು.

‘250ಕ್ಕೂ ಅಧಿಕ ವಚನಕಾರರನ್ನು ಬೆಳಕಿಗೆ ತಂದರು’

ಸುಮಾರು 250ಕ್ಕೂ ಅಧಿಕ ವಚನಕಾರರನ್ನು ಬೆಳಕಿಗೆ ತಂದವರು ಫ.ಗು.ಹಳಕಟ್ಟಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ತಿಳಿಸಿದರು. ಅದುವರೆಗೆ ಕವಿ ಚರಿತೆಕಾರರು ಕೇವಲ 50 ವಚನಕಾರರನ್ನು ಗುರುತಿಸಿದ್ದರು. ಇವರು 250ಕ್ಕೂ ಹೆಚ್ಚು ವಚನಕಾರರನ್ನು ಗುರುತಿಸಿದರು. ಮಾತ್ರವಲ್ಲ 1920ರ ಹೊತ್ತಿಗೆ ಒಂದು ಸಾವಿರ ವಚನಗಳ ಕಟ್ಟು ಸಂಗ್ರಹಿಸಿದರು. ಜೊತೆಗೆ ಹರಿಹರನ ರಗಳೆಗಳನ್ನು ಸಂಪಾದಿಸಿ ಪ್ರಕಟಿಸಿದರು. ಮನೆ ಮಾರಾಟ ಮಾಡಿ ‘ಹಿತ ಚಿಂತಕ ಮುದ್ರಣಾಲಯ’ ಎಂಬ ಮುದ್ರಣಾಲಯ ಸ್ಥಾಪಿಸಿದರು ಎಂದು ಅವರು ಹೇಳಿದರು. ಅವರು ‘ಶಿವಾನುಭವ’ ಎಂಬ ಮಾಸಿಕ ಪತ್ರಿಕೆ ಹಾಗೂ ‘ನವಕರ್ನಾಟಕ’ ಎಂಬ ವಾರಪತ್ರಿಕೆಯನ್ನು ಆರಂಭಿಸಿದರು. ಅವರ ಕೃತಿ ‘ವಚನ ಸಾಹಿತ್ಯ ಸಾರ’ದಲ್ಲಿ ಅಮೂಲ್ಯ ವಚನಗಳಿವೆ. ಜೊತೆಗೆ ಶೂನ್ಯ ಸಂಪಾದನೆ ಪ್ರದೀಪಿಕೆ ಶಬ್ದಕೋಶ ಹರಿಹರನ ರಗಳೆ ಮೊದಲಾದ ಅತ್ಯಮೂಲ್ಯ ಕೃತಿಗಳನ್ನು ಅವರು ರಚಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.