ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಪಿಎಸ್‌‌‌ಐ ಮಂಜುನಾಥ್

Published 8 ಜೂನ್ 2024, 13:44 IST
Last Updated 8 ಜೂನ್ 2024, 13:44 IST
ಅಕ್ಷರ ಗಾತ್ರ

ನಾಪೋಕ್ಲು: ‘ವಾಹನ ಚಾಲನಾ ಪರವಾನಗಿ, ಸೂಕ್ತ ದಾಖಲೆ ಇಲ್ಲದೇ ವಾಹನ ಚಲಾಯಿಸಬಾರದು’ ಎಂದು ನಾಪೋಕ್ಲು ಪೊಲೀಸ್ ಠಾಣೆ ಪಿಎಸ್‌‌‌ಐ ಮಂಜುನಾಥ್ ಹೇಳಿದರು.

ಸಮೀಪದ ಚೆರಿಯಪರಂಬುವಿನ ಮೈದಾನದಲ್ಲಿ ವಾಹನ ಸವಾರರನ್ನು ಉದ್ಧೇಶಿಸಿ ಮಾತನಾಡಿದ ಅವರು,‘ಜೀವ ಅಮೂಲ್ಯವಾದುದು. ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಕಾನೂನುಗಳನ್ನು ಗೌರವಿಸಬೇಕು’ ಎಂದರು.

‘ವಾಹನ ಸವಾರರನ್ನು ತಪಾಸಣೆ ಮಾಡಿ ಹೆಲ್ಮೆಟ್ ಹಾಕದೇ ಚಲಾಯಿಸಿದವರಿಗೆ, ವಿಮೆ ಇಲ್ಲದ, ಸೀಟ್ ಬೆಲ್ಟ್ ಇಲ್ಲದೆ ಚಾಲನೆ ಮಾಡಿದವರಿಗೆ, ಬೈಕ್‌‌ಗಳಲ್ಲಿ ಎರಡಕ್ಕಿಂತ ಹೆಚ್ಚು ಮಂದಿ ಕುಳಿತು ಸಾಗಿದವರಿಗೆ ತಿಳುವಳಿಕೆ ಮೂಡಿಸಿ, ಎಚ್ಚರಿಕೆ ನೀಡಲಾಯಿತು. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು, ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರಿ ವಾಹನಗಳಿಗೆ ಜನಸಾಮಾನ್ಯರಿಗೆ ಅಡ್ಡಿಪಡಿಸುವುದು, ಅಪ್ರಾಪ್ತ ಯುವಕರು ವಾಹನ ಚಾಲನೆ ಮಾಡುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT