ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಸೆಮಿಫೈನಲ್‌ ಪ್ರವೇಶಿಸಿದ ನಾಲ್ಕು ತಂಡ

Published 7 ಮಾರ್ಚ್ 2024, 5:26 IST
Last Updated 7 ಮಾರ್ಚ್ 2024, 5:26 IST
ಅಕ್ಷರ ಗಾತ್ರ

ಸೋಮವಾರಪೇಟೆ: ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿಯಿಂದ ಜಾತ್ರೋತ್ಸವ ಅಂಗವಾಗಿ ಬಿಜಿಎಸ್ ಶಾಲಾ ಮೈದಾನದಲ್ಲಿ ಬುಧವಾರ ನಡೆದ ಮುಕ್ತ ಫುಟ್‌ಬಾಲ್ ಪಂದ್ಯಾವಳಿಯ ಸೆಮಿಫೈನಲ್‌ಗೆ ಬಿಎಫ್‌ಸಿಸಿ ಬೀಟಿಕಟ್ಟೆ, ಟೀಮ್ ಶುಂಠಿ, ನಿಶಾಂತ್ ಕಾಫಿ ಶನಿವಾರಸಂತೆ, ಟೀಮ್ ಕೂಗೇಕೋಡಿ ತಂಡ ತಲುಪಿವೆ.

ಕ್ವಾಟರ್ ಫೈನಲ್‌ನಲ್ಲಿ ನಿಶಾಂತ್ ಕಾಫಿ ತಂಡ, ವಿಜಯನಗರ ಬಾಯ್ಸ್ ತಂಡವನ್ನು 5-4 ಗೋಲುಗಳ ಅಂತರದಲ್ಲಿ ಸೋಲಿಸಿತು. ಇನ್ನೊಂದು ಪಂದ್ಯದಲ್ಲಿ ಬಿಎಫ್‌ಸಿಸಿ ಬೀಟಿಕಟ್ಟೆ ತಂಡ, ನೀಲ್ ಶಾಂತ್ ಬಾಯ್ಸ್ ಬೀಟಿಕಟ್ಟೆ ತಂಡದ ವಿರುದ್ಧ 4-3 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಟೀಮ್ ಕೂಗೇಕೋಡಿ ತಂಡ ಗೌಡಳ್ಳಿ ಪ್ರೌಢಶಾಲಾ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಟೀಮ್ ಶುಂಠಿ ತಂಡ ಎಫ್.ಸಿ.ಗೌಡಳ್ಳಿ ಎ ವಿರುದ್ಧ 2-0 ಗೋಲಿನ ಅಂತರದಲ್ಲಿ ಗೆಲುವು ಸಾಧಿಸಿತು.

ತಾಲ್ಲೂಕು ವೈದ್ಯಾಧಿಕಾರಿ ಇಂದೂಧರ್ ಟೂರ್ನಿಕ್ಕೆ ಚಾಲನೆ ನೀಡಿದರು. ಕೀಡಾ ಸಮಿತಿ ಅಧ್ಯಕ್ಷ ಎಸ್.ಬಿ.ಗುರುಪ್ರಸಾದ್, ಉಪಾಧ್ಯಕ್ಷ ಸುಮಂತ್ ಕೂಗೂರು, ಕಾರ್ಯದರ್ಶಿ ಸಿ.ಈ.ವೆಂಕಟೇಶ್, ಪ್ರಮುಖರಾದ ಕೆ.ಜಿ.ದಿನೇಶ್, ಮೊಗಪ್ಪ, ಮುತ್ತಣ್ಣ, ಮಹೇಶ್ ಎಚ್.ಪಿ.ಪುಷ್ಪ, ಮಮತ ಲೋಕೇಶ್, ದೈಹಿಕ ಶಿಕ್ಷಣ ಶಿಕ್ಷಕ ಗೌಡಳ್ಳಿ ಪ್ರವೀಣ್, ನವೀನ್ ಅಜ್ಜಳ್ಳಿ ಇದ್ದರು.

ತೀರ್ಪುಗಾರರಾಗಿ ಕರಣ್, ಸಾಂದೀಲ್, ಶೇಷಪ್ಪ, ಮೆಲ್ವಿನ್, ಸಂಜಯ್ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT