ಮಡಿಕೇರಿ: ಜೀವದ ಹಂಗು ತೊರೆದು ದಟ್ಟ ಅಡವಿಗಳಲ್ಲಿ ಕಾರ್ಯನಿರ್ವಹಿಸಿ, ಹುತಾತ್ಮರಾದವರ ಸ್ಮರಣೆಗೆ ಅರಣ್ಯ ಇಲಾಖೆ ಸಜ್ಜಾಗಿದೆ. ಸೆ.11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಡೆಯಲಿದ್ದು, ಎಲ್ಲೆಡೆ ಅವರನ್ನು ಸ್ಮರಿಸಲಾಗುತ್ತಿದೆ. 1966ರಿಂದ ಇಲ್ಲಿಯರೆಗಿನ ಒಟ್ಟು 62 ಹುತಾತ್ಮರನ್ನು ಇಲ್ಲಿನ ಅರಣ್ಯ ಭವನದಲ್ಲಿ ಸ್ಮರಿಸಲಾಗುತ್ತಿದ್ದು, ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಗುತ್ತದೆ.

ಈ ಹುತಾತ್ಮರ ಪೈಕಿ ಕೊಡಗು ಜಿಲ್ಲೆಯಲ್ಲಿ ಹುತಾತ್ಮರಾದ 6 ಮಂದಿ ಇದ್ದಾರೆ. ಇವರೊಂದಿಗೆ ಬೆಳಗಾವಿ, ಚಾಮರಾಜನಗರ, ಕೊಳ್ಳೇಗಾಲ, ಹಾಸನ, ಚಿಕ್ಕಮಗಳೂರು, ಶಿರಸಿ, ಸಾಗರ, ಭದ್ರಾ, ಧಾರವಾಡ, ಹುಣಸೂರು, ಶಿವಮೊಗ್ಗ, ಹಳಿಯಾಳ ಸೇರಿದಂತೆ ರಾಜ್ಯ ವಿವಿಧ ವನ್ಯಜೀವಿ ವಲಯದಲ್ಲಿ ಹುತಾತ್ಮರೂ ಇದ್ದಾರೆ.

ಅರಣ್ಯ ರಕ್ಷಕರು, ಅರಣ್ಯ ವೀಕ್ಷಕ, ವನಪಾಲಕ, ವಲಯ ಅರಣ್ಯಾಧಿಕಾರಿ, ಡಿ ಗ್ರೂಪ್ ನೌಕರ, ಆನೆ ಕಾವಾಡಿಗ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಪಶು ವೈದ್ಯ ನಿರ್ದೇಶಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ, ನಿರ್ದೇಶಕರು, ಗಸ್ತು ಅರಣ್ಯ ಪಾಲಕರು, ದಿನಗೂಲಿ ನೌಕರರು, ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರು, ಹೊರಗುತ್ತಿಗೆ ನೌಕರರು ಸಹ ಹುತಾತ್ಮರಾಗಿದ್ದಾರೆ.

ಕಾಡಾನೆ ದಾಳಿಗಳ ದಾಳಿ, ಕಾಡುಕಳ್ಳರ ಗುಂಡೇಟು, ವಿವಿಧ ವನ್ಯಜೀವಿಗಳ ದಾಳಿ ಸೇರಿದಂತೆ ಅನೇಕ ಬಗೆಯ ಆಪತ್ತಿನಲ್ಲಿ ನಿತ್ಯವೂ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ದಟ್ಟ ಅರಣ್ಯದಲ್ಲಿ ಗಸ್ತು ಕಾರ್ಯ ನಡೆಸುತ್ತಿರುತ್ತಾರೆ. ಇವರ ಅನುಪಮ ಸೇವೆಯನ್ನು ಈ ಮೂಲಕ ಸ್ಮರಿಸಲಾಗುತ್ತದೆ.

ಅರಣ್ಯಪಡೆಯ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಅವರು ಮಂಗಳವಾರವಷ್ಟೇ 62 ಮಂದಿ ಅರಣ್ಯ ಹುತಾತ್ಮರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇವರಲ್ಲಿ ಮಡಿಕೇರಿ ವಿಭಾಗಲ್ಲಿ ಇಬ್ಬರು, ನಾಗರಹೊಳೆ ವಿಭಾಗದ ಮೂವರು ಹಾಗೂ ವಿರಾಜಪೇಟೆ ವಲಯದ ಒಬ್ಬರು ಸೇರಿದ್ದಾರೆ.

ಮಡಿಕೇರಿ ವಲಯದಲ್ಲಿ 1983ರಲ್ಲಿ ಅರಣ್ಯ ವೀಕ್ಷಕ ಕೆ.ಎಂ.ಪೃತುಕುಮಾರ್, ವಿರಾಜಪೇಟೆಯ ವಲಯದಲ್ಲಿ 1997ರಲ್ಲಿ ಅರಣ್ಯ ರಕ್ಷಕ ಕೆ.ಎಸ್.ವಿಠಲ್, ನಾಗರಹೊಳೆ ವಲಯದಲ್ಲಿ 2013ರಲ್ಲಿ ಅರಣ್ಯ ವೀಕ್ಷಕ ಟಿ.ಸುರೇಶ್, ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಎಸ್.ಮಣಿಕಂದನ್, 2020ರಲ್ಲಿ ಅರಣ್ಯ ವೀಕ್ಷಕ ಜಿ.ಗುರುರಾಜ್, 2023ರಲ್ಲಿ ಕುಶಾಲನಗರ ವಲಯದಲ್ಲಿ ಹೊರಗುತ್ತಿಗೆ ನೌಕರ ವೈ.ಎಂ.ಗಿರೀಶ ಹುತಾತ್ಮರಾಗಿದ್ದಾರೆ.

ಮಡಿಕೇರಿಯಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಇಂದು

ಮಡಿಕೇರಿ: ಅರಣ್ಯ ಇಲಾಖೆಯ ಕೊಡಗು ವೃತ್ತದ ವತಿಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯು ಸೆ. 11ರಂದು ಬೆಳಿಗ್ಗೆ 9 ಗಂಟೆಗೆ ನಗರದ ಅರಣ್ಯ ಭವನದ ಆವರಣದಲ್ಲಿ ನಡೆಯಲಿದೆ.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಅಭಿಷೇಕ್, ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಪಿ.ಅಭಯಂಕರ್, ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೈಯದ್ ಅಹಮದ್ ಷಾ ಹುಸೈನಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಸೆಂದಿಲ್ ಕುಮಾರ್ ತಹಶೀನ್ ಬಾನು ದವಡಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ಗುತ್ತಿಗೆ ದಿನಗೂಲಿ ನೌಕರರನ್ನು ಸಮಾನವಾಗಿ ಪರಿಗಣಿಸಿ’

ಕಳ್ಳಬೇಟೆ ತಡೆ ಶಿಬಿರದಲ್ಲಿ ಕೆಲಸ ಮಾಡುವವರು ಸೇರಿದಂತೆ ಗುತ್ತಿಗೆ ಹೊರಗುತ್ತಿಗೆ ಹಾಗೂ ದಿನಗೂಲಿ ನೌಕರರು ಅರಣ್ಯ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅವರು ಬದುಕಿದ್ದಾಗ ವೇತನ ಭತ್ಯೆಗಳ ವಿಚಾರದಲ್ಲಿ ಕಾಯಂ ನೌಕರರಂತೆ ಸಮಾನವಾಗಿ ಪರಿಗಣಿಸುತ್ತಿಲ್ಲ. ಕನಿಷ್ಠ ಪಕ್ಷ ಅವರು ಅರಣ್ಯ ಸಂರಕ್ಷಣೆ ವಿಷಯದಲ್ಲಿ ಹುತಾತ್ಮರಾದಾಗಲೂ ಸಮಾನವಾಗಿ ಪರಿಗಣಿಸಿ. ಕಾಯಂ ನೌಕರರಿಗೆ ಸಿಗುವಷ್ಟೇ ಪರಿಹಾರದ ಹಣ ಹಾಗೂ ಅವಲಂಬಿತರಿಗೆ ಉದ್ಯೋಗ ನೀಡಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ವನ್ಯಜೀವಿ ಘಟಕಗಳ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಸಂಕೇತ್ಪೂವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಅರಣ್ಯ ಸಂರಕ್ಷಣೆಯಲ್ಲಿ ಶಾಶ್ವತ ಅಂಗವಿಕಲರಾದ ದಿನಗೂಲಿ ನೌಕರರಿಗೆ ಉತ್ತಮ ಪರಿಹಾರ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.