ಮಡಿಕೇರಿ: ಇಲ್ಲಿನ ಅಶೋಕಪುರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ, ಗಣೇಶ ಮೂರ್ತಿಗಳ ವಿಸರ್ಜನೋತ್ಸವದ ಮೆರವಣಿಗೆಯು ಅದ್ದೂರಿಯಾಗಿ ಭಾನುವಾರ ರಾತ್ರಿ ನಗರದಲ್ಲಿ ನಡೆಯಿತು.

ಅಶೋಕಪುರ ಗಣೇಶ ಉತ್ಸವ ಸಮಿತಿ ವತಿಯಿಂದ ನಡೆದ ಭವ್ಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಭಾರಿ ಜನಸ್ತೋಮ ಸೇರಿತ್ತು. ನಗರದಲ್ಲಿ ಸಂಭ್ರಮ ಉಂಟು ಮಾಡಿತು. ಚಲನವಲನಗಳಿಂದ ಕೂಡಿದ್ದ ವೈಭವೋಪೇತ ಮಂಟಪದ ಅದ್ಭುತ ಪ್ರದರ್ಶನವನ್ನು ನಗರದ ಅಲ್ಲಲ್ಲಿ ಜನರು ಕಣ್ತುಂಬಿ ಕೊಂಡರು.

ಈ ಬಾರಿ ಪ್ರದರ್ಶನಕ್ಕೆ ‘ಗಣಪತಿಯಿಂದ ಸಿಂಧೂರಾಸುರ ವಧೆ’ ಪ್ರಸಂಗವನ್ನು ಆಯ್ದುಕೊಳ್ಳಲಾಗಿತ್ತು. ಗಣಪತಿಯ ಶೌರ್ಯ ಪ್ರದರ್ಶನ ಕಣ್ಣಿಗೆ ಕಟ್ಟುವಂತೆ ಮೂಡಿಬಂತು. ಒಟ್ಟು 14 ಕಲಾಕೃತಿಗಳು ಪ್ರದರ್ಶನದಲ್ಲಿದ್ದವು. ಈ ಎಲ್ಲ ಕಲಾಕೃತಿಗಳ ಪ್ರದರ್ಶನಗಳು ಜನಮನವನ್ನು ಸೂರೆಗೊಂಡವು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ (ಸುದರ್ಶನ ವೃತ್ತ), ಕೆಎಸ್ಆರ್ಟಿಸಿ ಬಸ್ಡಿಪೊ, ಜನರಲ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್ನಿಲ್ದಾಣ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮಂಟಪದ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.