ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ

Published 17 ಮಾರ್ಚ್ 2024, 7:04 IST
Last Updated 17 ಮಾರ್ಚ್ 2024, 7:04 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ಮೈಸೂರಿನ ವಿವೇಕ ಫೌಂಡೇಷನ್ ಸಹಯೋಗದೊಂದಿಗೆ ಉಚಿತ ಮಾನಸಿಕ ಆರೋಗ್ಯ, ಮರೆವಿನ ಕಾಯಿಲೆ, ವ್ಯಸನ ಹಾಗೂ ಇತರ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಶಿಬಿರದಲ್ಲಿ 100 ಕ್ಕೂ ಹೆಚ್ಚುಮಂದಿ ತಪಾಸಣೆ ನಡೆಸಿಕೊಂಡರು. ಮೈಸೂರಿನ ಆರೋಗ್ಯ ತಜ್ಞರು ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಸ್ವಾಮೀಜಿ, ‘ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ತಜ್ಞರು ಬಂದು ಉಚಿತವಾಗಿ ನಡೆಸುವ ಶಿಬಿರದಲ್ಲಿ ಅಗತ್ಯವಿರುವವರು ತಪಾಸಣೆ ನಡೆಸಿಕೊಳ್ಳಬೇಕು. ಮುಂದೆ ಪ್ರತಿ ತಿಂಗಳ 4ನೇ ಶನಿವಾರ ಶಿಬಿರ ನಡೆಸಲಾಗುವುದು’ ಎಂದು ತಿಳಿಸಿದರು.

ರಾಮಕೃಷ್ಣ ಶಾರದಾಶ್ರಮ ಸೇವಾ ಆಸ್ಪತ್ರೆಯ ಮುಖ್ಯಸ್ಥ ಡಾ.ಕಾರ್ಯಪ್ಪ, ವಿವೇಕ ಆಸ್ಪತ್ರೆಯ ಮನೋವೈದ್ಯ ಸುಹಾಸ್ ಭಾರ್ಗವ್, ಮನೋವಿಜ್ಞಾನಿ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT