ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಕೊಡಗು: ಅಳಿವಿನತ್ತ ಸಾಗುತ್ತಿವೆ ಪಾರಂಪರಿಕ ತಾಣಗಳು!

ಕೊಡಗು ಜಿಲ್ಲೆಯಲ್ಲಿ ಸಂರಕ್ಷಿತ ಸ್ಮಾರಕವೆಂದು ಘೋಷಣೆಯಾಗಿರುವುವುದು ಕೇವಲ 7 ಮಾತ್ರ
Published : 18 ಏಪ್ರಿಲ್ 2025, 7:36 IST
Last Updated : 18 ಏಪ್ರಿಲ್ 2025, 7:36 IST
ಫಾಲೋ ಮಾಡಿ
Comments
ಉಳಿವಿಗೆ ಏದುಸಿರು ಬಿಡುತ್ತಿರುವ ಮಡಿಕೇರಿಯಲ್ಲಿರು ರಾಜರ ಗದ್ದುಗೆಗಳು
ಉಳಿವಿಗೆ ಏದುಸಿರು ಬಿಡುತ್ತಿರುವ ಮಡಿಕೇರಿಯಲ್ಲಿರು ರಾಜರ ಗದ್ದುಗೆಗಳು
ನಂಜರಾಯಪಟ್ಟಣದಲ್ಲಿ ಅಳಿವಿನಂಚಿನಲ್ಲಿರುವ ವೀರಭದ್ರೇಶ್ವರ ದೇವಾಲಯ
ನಂಜರಾಯಪಟ್ಟಣದಲ್ಲಿ ಅಳಿವಿನಂಚಿನಲ್ಲಿರುವ ವೀರಭದ್ರೇಶ್ವರ ದೇವಾಲಯ
ಮಡಿಕೇರಿಯ ಹೊರವಲಯದಲ್ಲಿ ಬ್ರಿಟಿಷರ ಗೋರಿಗಳು ಹೂತು ಹೋಗಿದ್ದು ಕಣ್ಮರೆಯಾಗುವ ಹಂತದಲ್ಲಿವೆ
ಮಡಿಕೇರಿಯ ಹೊರವಲಯದಲ್ಲಿ ಬ್ರಿಟಿಷರ ಗೋರಿಗಳು ಹೂತು ಹೋಗಿದ್ದು ಕಣ್ಮರೆಯಾಗುವ ಹಂತದಲ್ಲಿವೆ
ಸ್ಟೀಫನ್‌ ನ್ಯೂಕಮ್‌ ಎಂಬುವವರು ಏಪ್ರಿಲ್ 14 1911ರಲ್ಲಿ ಸಮಾಧಿಯಾಗಿರುವ ಗೋರಿ ಮಡಿಕೇರಿಯ ಹೊರವಲಯದಲ್ಲಿ ಅವಸಾನದ ಅಂಚಿನಲ್ಲಿದೆ.
ಸ್ಟೀಫನ್‌ ನ್ಯೂಕಮ್‌ ಎಂಬುವವರು ಏಪ್ರಿಲ್ 14 1911ರಲ್ಲಿ ಸಮಾಧಿಯಾಗಿರುವ ಗೋರಿ ಮಡಿಕೇರಿಯ ಹೊರವಲಯದಲ್ಲಿ ಅವಸಾನದ ಅಂಚಿನಲ್ಲಿದೆ.
ಪುರಾತತ್ವ ಸಂಗ್ರಹಾಲಯಗಳು, ಪರಂಪರೆ ಇಲಾಖೆಯಡಿ 3 ಪಾರಂಪರಿಕ ತಾಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಡಿ 4 ತಾಣ ಘೋಷಿಸಲು ಪ್ರಸ್ತಾವ ಸಲ್ಲಿಸಿರುವುದು 20 ತಾಣ
ಸ್ಮಾರಕ ದತ್ತು ಯೋಜನೆಯಡಿ ನಾಲ್ಕುನಾಡು ಅರಮನೆಯನ್ನು ದತ್ತು ತೆಗೆದುಕೊಳ್ಳಲು ಫೌಂಡೇಷನ್‌ ಒಂದು ಮುಂದೆ ಬಂದಿದ್ದು ಪ್ರಕ್ರಿಯೆಗಳು ನಡೆಯುತ್ತಿವೆ.
ಬಿ.ಪಿ.ರೇಖಾ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್
ಅಧಿಕಾರಿಗಳಲ್ಲಿ ಅರಿವಿನ ಕೊರತೆ!
ಪಾರಂಪರಿಕ ತಾಣಗಳೆಂದರೆ ಕ್ರಿಸ್ತಪೂರ್ವಕ್ಕೆ ಸೇರಿದ ಕಟ್ಟಡಗಳಷ್ಟೇ ಆಗಿರಬೇಕಿಲ್ಲ. 100 ವರ್ಷ ಪೂರೈಸಿದ ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದೇ ವ್ಯಾಖ್ಯಾನಿಸಲಾಗುತ್ತದೆ. ಅದಕ್ಕೆ ಏನಾದರೂ ಐತಿಹಾಸಿಕ ಧಾರ್ಮಿಕ ಸಾಮಾಜಿಕ ಮಹತ್ವ ಇದ್ದರೆ ಅದನ್ನು ಸಂರಕ್ಷಿಸಲಾಗುತ್ತದೆ. ಈ ಕುರಿತು ಅರಿವು ಇಲಾಖೆಯ ಅಧಿಕಾರಿಗಳಲ್ಲೇ ಇಲ್ಲದಿರುವುದು ವಿಪರ್ಯಾಸ. ಏಕೆಂದರೆ ಯಾವುದೇ ಒಂದು ಇಲಾಖೆಯೂ ಸಹ ಇದುವರೆಗೂ ತಮ್ಮ ಇಲಾಖಾ ವ್ಯಾಪ್ತಿಯ ಇಂತಹ ಕಟ್ಟಡ ನೂರು ವರ್ಷ ಪೂರೈಸಿದ್ದು ಅದನ್ನು ಪಾರಂಪರಿಕ ಕಟ್ಟಡ ಎಂದು ಘೋಷಿಸಿ ಎಂಬ ಪ್ರಸ್ತಾವವನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಸಲ್ಲಿಸಿಲ್ಲ. ಉದಾಹರಣೆಗೆ ಮಡಿಕೇರಿಯಲ್ಲಿರುವ ಸುದರ್ಶನ ಅತಿಥಿ ಗೃಹ ಜಿಲ್ಲೆಯಲ್ಲಿರುವ ಅನೇಕ ಶಾಲೆಗಳು ನಗರಸಭೆ ವ್ಯಾಪ್ತಿಯಲ್ಲಿನ ಕಟ್ಟಡಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿನ ಸೇತುವೆಗಳು ಹೀಗೆ ಅನೇಕ ತಾಣಗಳಿಗೆ ನೂರಿನ್ನೂರು ವರ್ಷಗಳು ತುಂಬಿವೆ. ಹಾಗಿದ್ದರೂ ಅವುಗಳ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.
ಪ್ರಸ್ತಾವದಲ್ಲೂ ಇರದ ಪಾರಂಪರಿಕ ತಾಣಗಳು!
ಜಿಲ್ಲೆಯಲ್ಲಿರುವ ಅನೇಕ ಸ್ಮಾರಕಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಂರಕ್ಷಿತ ಪಾರಂಪರಿಕ ತಾಣವೆಂದು ಘೋಷಿಸಿಲ್ಲ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯೂ ಘೋಷಿಸಿಲ್ಲ ಮಾತ್ರವಲ್ಲ ಪ್ರಸ್ತಾವದಲ್ಲೂ ಅನೇಕ ಸ್ಮಾರಕಗಳಿಗೆ ಸ್ಥಾನ ನೀಡಿಲ್ಲ. ವಿರಾಜಪೇಟೆಯ ದೊಡ್ಡಗಡಿಯಾರ ಕುಶಾಲನಗರದ ಹಳೆಯ ಸೇತುವೆ ಮಡಿಕೇರಿ ಹೊರವಲಯದಲ್ಲಿರುವ ರಾಜಾಸೀಟ್‌ನಿಂದ ತೆಗೆದ ಬ್ರಿಟಿಷರ ಗೋರಿಗಳು ಶತಮಾನಗಳನ್ನು ಕಂಡಿರುವ ಅನೇಕ ಚರ್ಚ್‌ಗಳು ದೇಗುಲಗಳು ಮಂಟಪಗಳು ಹೀಗೆ ಇನ್ನೂ ಅನೇಕ ತಾಣಗಳನ್ನು ಹೆಸರಿಸಬಹುದು. ಇವುಗಳ ಸಂರಕ್ಷಣೆಗೆ ಜಿಲ್ಲಾಡಳಿತ ತುರ್ತು ಗಮನ ನೀಡಬೇಕಿದೆ. ಆಗ ಮಾತ್ರವೇ ವಿಶ್ವ ಪಾರಂಪರಿಕ ದಿನಾಚರಣೆಗೂ ಅರ್ಥ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT