ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮರ ಅಕ್ರಮ ಸಾಗಾಟ; 4 ಪ್ರಕರಣ ದಾಖಲು

Published 22 ಆಗಸ್ಟ್ 2024, 5:27 IST
Last Updated 22 ಆಗಸ್ಟ್ 2024, 5:27 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮರಗಳ್ಳತನದ 4 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಸೋಮವಾರಪೇಟೆ ಅರಣ್ಯ ವಲಯದ ಅಧಿಕಾರಿಗಳು ಒಟ್ಟು 8 ಮಂದಿ ಆರೋಪಿಗಳನ್ನು, ಒಂದು ಆಟೊ, ಒಂದು ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ.

ಮಾದಾಪುರ ಶಾಖೆಯ ಯಡವಾರೆ ಗ್ರಾಮದ ತಿಮ್ಮಯ್ಯ ಎಂಬುವರಿಗೆ ಸೇರಿದ ಜಾಗದಲ್ಲಿದ್ದ 3 ಹಲಸಿನ ಮರಗಳನ್ನು ಕಡಿದು 17 ನಾಟಾಗಳನ್ನಾಗಿ ಪರಿವರ್ತಿಸಿದ್ದನ್ನು ವಶಪಡಿಸಿಕೊಂಡಿದ್ದಾರೆ. ಅರೋಪಿಗಳಾದ ಯಡವಾರೆ ಸಿ.ಎಂ.ತಿಮ್ಮಯ್ಯ, ಯಡವಾರೆ ಅಶೋಕ್ ಪೂಜಾರಿ ಅವರನ್ನು ಬಂಧಿಸಲಾಗಿದೆ.

ಶಾಂತಳ್ಳಿ ಶಾಖೆಯ ಕಲ್ಕಂದೂರು ಗ್ರಾಮದ ಎಂ.ಎನ್.ಚಂದ್ರಶೇಖರ್ ಅವರಿಗೆ ಸೇರಿದ ಜಾಗದಲ್ಲಿ ಒಂದು ನಂದಿಮರ ಕಡಿದು ನಾಟಾವನ್ನಾಗಿ ಪರಿವರ್ತಿಸಿ ಸಂಗ್ರಹಿಸಿದ್ದ ಪ್ರಕರಣದಲ್ಲಿ ಮರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಮಾಟ್ನಳ್ಳಿ ಗ್ರಾಮದ ಚಂದ್ರಶೇಖರ್ ಎಂಬುವರನ್ನು ಬಂಧಿಸಲಾಗಿದೆ.

ಕೊವರ್ ಕೊಲ್ಲಿ ಜಂಕ್ಷನ್‌ನಲ್ಲಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ 30 ಬಿಲ್ವಾರ ಮರದ ತುಂಡುಗಳನ್ನು ಸಾಗಿಸುತ್ತಿದ್ದಾಗ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅರೋಪಿಗಳಾದ ಕರ್ಕಳ್ಳಿ ಗ್ರಾಮದ ಕೆ.ಕೆ.ಇಬ್ರಾಹಿಂ, ಹಾನಗಲ್ಲು ಗ್ರಾಮದ ಎಚ್.ಜಿ.ಸುಜಿತ್ ಎಂಬುವರನ್ನು ಬಂಧಿಸಲಾಗಿದೆ.

ಕರ್ಕಳ್ಳಿ ಬಾಣೆಯ ಬಿ.ರವಿ ಅವರ ಪೀಠೋಪಕರಣ ಘಟಕದ ಹತ್ತಿರ ಪ್ಯಾಸೆಂಜರ್ ವಾಹನದಲ್ಲಿ 3 ಬೀಟೆ ಮರದ ನಾಟಗಳನ್ನು ಸಾಗಾಣೆ ಮಾಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಲಾಗಿದೆ. ಅರೋಪಿಗಳಾದ ಕರ್ಕಳ್ಳಿ ಗ್ರಾಮದ ಪಿ.ಮಣಿಕಂಠ, ಜನತಾ ಕಾಲೊನಿಯ ಎಲ್.ಅಣ್ಣಪ್ಪ, ಕರ್ಕಳ್ಳಿ ಬಾಣೆಯ ಬಿ.ರವಿ ಎಂಬುವವರನ್ನು ಬಂಧಿಸಲಾಗಿದೆ. ಅರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತೊಬ್ಬ ಆರೋಪಿ ಹಾನಗಲ್ಲು ಬಾಣೆಯ ಎಚ್.ಈ.ಅರುಣ ತಲೆ ಮರೆಸಿಕೊಂಡಿದ್ದಾನೆ.

ಡಿ.ಸಿ.ಎಫ್. ವಿ.ಭಾಸ್ಕರ್, ಎಸಿಎಫ್ ಗೋಪಾಲ ಅವರ ಮಾರ್ಗದರ್ಶನದಲ್ಲಿ ಆರ್.ಎಫ್.ಓ ಶೈಲೆಂದ್ರ ಕುಮಾರ್, ಡಿ.ಆರ್.ಎಫ್.ಒ ನಾರಾಯಣ ಮೌಲ್ಯ, ಸತೀಶ್ ಕುಮಾರ್, ಸಿಬ್ಬಂದಿ ಚಂದ್ರಶೇಖರ್, ವಿಶ್ವ, ನಾರಾಯಣ, ವಿಜಯ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT