ವಿರಾಜಪೇಟೆ: ಇಲ್ಲಿನ ನಗರ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 7.9 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಹುಣುಸೂರಿನ ಅನೀಸ್ ಅಹ್ಮದ್ ಹಾಗೂ ಚೇತನ್ ಪಿ. ಬಂಧಿತ ಆರೋಪಿಗಳು. ಆರೋಪಿಗಳು ಸುಮಾರು 7.872 ಗ್ರಾಂ ತೂಕದ ಗಾಂಜಾವನ್ನು 4 ಪ್ಯಾಕೇಟ್ಗಳಲ್ಲಿ ಕಾರೊಂದರಲ್ಲಿ ಸಮೀಪದ ಪೆರುಂಬಾಡಿ ಚೆಕ್ಪೋಸ್ಟ್ ಮೂಲಕ ಕೇರಳಕ್ಕೆ ಸಾಗಿಸುವ ಸಂದರ್ಭ ಪೋಲಿಸರು ಕಾರ್ಯಾಚರಣೆ ನಡೆಸಿದ್ದಾರೆ. ಸಮೀಪದ ಪೆರುಂಬಾಡಿಯಲ್ಲಿ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ಗಾಂಜಾವನ್ನು ವಶಕ್ಕೆ ಪಡೆದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಮೊಬೈಲ್ ಪೋನ್ ಅನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಡಿವೈಎಸ್ಪಿ ಮಹೇಶ್ ಕುಮಾರ್ ಮತ್ತು ಸಿಪಿಐ ಅನೂಪ್ ಮಾದಪ್ಪ ಅವರ ಮಾರ್ಗದರ್ಶನದಲ್ಲಿ, ನಗರ ಠಾಣೆಯ ಎಸ್ಐ ಪ್ರಮೋದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್ಐ ಮಂಜುನಾಥ್ ಟಿ.ಪಿ, ಸಿಬ್ಬಂದಿ ಧರ್ಮ, ಗಿರೀಶ್, ಜೋಸ್ ನಿಶಾಂತ್, ಕುಮಾರ, ಹೇಮಂತ್ ಕುಮಾರ್, ಶಿವಕುಮಾರ್, ಶಿವಶರಣಪ್ಪ ಅವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.