ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿದೆ. ಆರಂಭದಲ್ಲಿ ಕೇವಲ ಬೆರಳೆಣಿಕೆಯಷ್ಟಿದ್ದ ವಿಮೆ ಪಡೆದ ರೈತರ ಸಂಖ್ಯೆ ಕಳೆದ ವರ್ಷ 600 ದಾಟಿದೆ.

ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ವಿವಿಧ ಬಗೆಯ ಪ್ರಕೃತಿ ವಿಕೋಪಗಳು ಸೇರಿದಂತೆ ಹಲವು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರಿಗೆ ಇದರಿಂದ ವಿಮೆಯ ರಕ್ಷಣೆ ಸಿಗುತ್ತದೆ. ನಷ್ಟದ ಪ್ರಮಾಣ ಇಳಿಕೆಯಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯವು ಫಸಲ್ ವಿಮಾ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ಕಾರಣ ಎನಿಸಿದೆ.

ಈ ಬಾರಿ ಮೇ ತಿಂಗಳಿನಲ್ಲಿ ಜುಲೈ ತಿಂಗಳಿನಲ್ಲಿ ಬರುವಂತಹ ಮಳೆ ಸುರಿಯಿತು. ನಂತರ, ಜೂನ್ ತಿಂಗಳಿನಲ್ಲಿಯೂ ಭಾರಿ ಪ್ರಮಾಣದ ಗಾಳಿ, ಮಳೆಯಾಯಿತು. ಇವೆಲ್ಲವೂ ಸಹ ಹವಾಮಾನ ಬದಲಾವಣೆ ಅಥವಾ ಹವಾಮಾನ ವೈಪರೀತ್ಯ ಎನಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಫಸಲ್ ವಿಮಾ ಯೋಜನೆಯಡಿ ನೋಂದಾಯಿಸುವುದು ಸೂಕ್ತ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಎಷ್ಟು ವಿಮೆ? ಎಷ್ಟು ಕಂತು?

ಫಸಲ್ ವಿಮಾ ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ಭತ್ತ ಮತ್ತು ಮುಸುಕಿನ ಜೋಳವನ್ನು ಸೇರ್ಪಡೆ ಮಾಡಲಾಗಿದೆ. ನೀರಾವರಿ ಭೂಮಿಯ ಭತ್ತವಾಗಿದ್ದರೆ ವಿಮಾ ಮೊತ್ತ ಪ್ರತಿ ಹೆಕ್ಟೇರ್ಗೆ ₹ 93,250. ಇದಕ್ಕೆ ಕಂತು ₹ 1,865. ಒಂದು ಎಕರೆಗೆ ₹ 746 ಪಾವತಿಸಬೇಕಿದೆ. ಮಳೆಯಾಶ್ರಿತದಲ್ಲಿ ಭತ್ತ ಬೆಳೆದಿದ್ದರೆ ಪ್ರತಿ ಹೆಕ್ಟೇರ್ಗೆ ₹ 63,750 ವಿಮಾ ಮೊತ್ತವಿದ್ದು, ₹ 1,275 ವಿಮಾ ಕಂತು ಇದೆ. ಒಂದು ಎಕರೆಗೆ ₹ 510 ಪಾವತಿಸಬೇಕಿದೆ. ಈ ಎರಡಕ್ಕೂ ಆಗಸ್ಟ್ 16 ಕೊನೆಯ ದಿನ.

ಮಳೆಯಾಶ್ರಿತ ಭೂಮಿಯಲ್ಲಿ ಮುಸುಕಿನ ಜೋಳಕ್ಕೆ ಪ್ರತಿ ಹೆಕ್ಟೇರ್ಗೆ ₹ 56,500 ವಿಮಾ ಮೊತ್ತವಿದ್ದು, ₹ 1,130 ವಿಮಾ ಕಂತು ಇದೆ. ಒಂದು ಎಕರೆಗೆ ₹ 452 ವಿಮಾ ಕಂತು ಪಾವತಿಸಬೇಕಿದೆ. ನೋಂದಣಿಗೆ ಜುಲೈ 31 ಕೊನೆಯ ದಿನ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವವರ ಸಂಖ್ಯೆ ಕೊಡಗಿನಲ್ಲಿ ಇಳಿಕೆ ಕಾಣುತ್ತಿದ್ದರೂ, ಈಗ ಜಿಲ್ಲೆಯಲ್ಲಿ ಅಂದಾಜು 15 ಸಾವಿರಕ್ಕೂ ಅಧಿಕ ರೈತರಿದ್ದು, ಭತ್ತ ಹಾಗೂ ಮುಸುಕಿನ ಜೋಳ ಬೆಳೆಯುತ್ತಿದ್ದಾರೆ. ಇಷ್ಟು ಜನರ ಪೈಕಿ ಕಳೆದ ವರ್ಷ ಫಸಲ್ ವಿಮಾ ಯೋಜನೆಯಡಿ ನೋಂದಣಿಯಾದವರು ಕೇವಲ 623 ಮಾತ್ರ. ಆದರೆ, ಇವರಲ್ಲಿ ಅರ್ಧದಷ್ಟು ಮಂದಿ ಅಂದರೆ 323 ಮಂದಿ ವಿಮೆ ಹಣ ಪಡೆದುಕೊಂಡಿದ್ದಾರೆ.

‘ಫಸಲ್ ವಿಮೆ ಮಾಡಿಸಿ ನಷ್ಟದಿಂದ ಹೊರಬನ್ನಿ’

ಫಸಲ್ ವಿಮಾ ಯೋಜನೆ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ‘ಇಂದಿನ ಹವಾಮಾನ ವೈಪರೀತ್ಯವನ್ನು ಗಮನಿಸಿದರೆ ಎಲ್ಲ ರೈತರು ಫಸಲ್ ವಿಮಾ ಯೋಜನೆಯಡಿ ನೋಂದಣಿಯಾಗುವುದು ಒಳಿತು ಎನಿಸುತ್ತದೆ. ಏಕೆಂದರೆ ಮೇ ತಿಂಗಳಿನಲ್ಲಿ ಮುಂಗಾರು ಮಳೆ ಜೂನ್ನಲ್ಲೂ ಬಿರುಸಿನ ಮಳೆಯಾಗಿದೆ. ಒಂದು ವೇಳೆ ಬೆಳೆ ಚೆನ್ನಾಗಿ ಬಂದು ಕೊಯ್ಲೂ ಸಹ ಆಗಿ ಜಮೀನಿನಲ್ಲಿ ಬಿಟ್ಟಿರುವಾಗ ಮಳೆ ಬಂದು ಹಾಳಾದರೂ ವಿಮಾ ಮೊತ್ತ ಬರುತ್ತದೆ. ಮಾತ್ರವಲ್ಲ ಕಳೆದ 7 ವರ್ಷದಲ್ಲಿ ಬೆಳೆದ ಸರಾಸರಿ ಪ್ರಮಾಣಕ್ಕಿಂತ ಕಡಿಮೆ ಬೆಳೆ ಬಂದರೂ ಉಳಿಕೆ ಹಣವೂ ಫಸಲ್ ವಿಮಾ ಯೋಜನೆಯಲ್ಲಿ ಸಿಗುತ್ತದೆ. ಹಾಗಾಗಿ ಎಲ್ಲ ರೈತರು ತ್ವರಿತವಾಗಿ ಫಸಲ್ ವಿಮಾ ಯೋಜನೆಯಡಿ ನೋಂದಣಿಯಾಗಿ’ ಎಂದು ಅವರು ಹೇಳುತ್ತಾರೆ.

ಪರಿಹಾರ ಯಾವುದಕ್ಕೆ?

ಬಿತ್ತನೆ ನಾಟಿ ವೈಫಲ್ಯ ಮಧ್ಯಂತರ ಬೆಳೆ ನಷ್ಟ ಇಳುವರಿ ಕೊರತೆ ಸ್ಥಳೀಯ ವಿಪತ್ತುಗಳು ನೈಸರ್ಗಿಕ ವಿಕೋಪಗಳು ಪ್ರತಿಕೂಲ ಹವಾಮಾನದಿಂದ ಇಳುವರಿ ನಷ್ಟ ಹಾಗೂ ಕಟಾವು ನಂತರ ನಷ್ಟಗಳನ್ನೂ ಪರಿಗಣಿಸಿ ವಿಮಾ ಪರಿಹಾರ ದೊರಕುತ್ತದೆ. ಬೆಳೆ ಮುಳುಗಡೆ ಭೂಕುಸಿತ ಆಲಿಕಲ್ಲು ಮಳೆ ಚಂಡಮಾರುತ ಈ ಅವಘಡಗಳು ಸಂಭವಿಸಿದ 72 ಗಂಟೆಗಳ ಒಳಗೆ ಬೆಳೆನಷ್ಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ವಿಮಾಸಂಸ್ಥೆಗೆ ನೀಡಬೇಕು. ಆರ್ಟಿಸಿಯೊಂದಿಗೆ ಅರ್ಜಿಯನ್ನು ಬ್ಯಾಂಕಿನಲ್ಲಿ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ನಿಗದಿತ ವಿಮಾ ಕಂತು ಪಾವತಿಸಿ ನೋಂದಣಿಯಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.