ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅ.17ರಂದು ಕಾವೇರಿ ತೀರ್ಥೋದ್ಭವ

Last Updated 16 ಸೆಪ್ಟೆಂಬರ್ 2022, 18:33 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಅಕ್ಟೋಬರ್ 17ರಂದು ಸಂಜೆ 7.21ಕ್ಕೆ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ‌.

ಈವರೆಗೆ ಬೆಳಿಗ್ಗೆ ಆಗುತ್ತಿದ್ದ ತೀರ್ಥೋದ್ಭವ ಈ ಬಾರಿ ಸಂಜೆ ಆಗುತ್ತಿರುವುದು ವಿಶೇಷ.

ಸೆ.27ರಿಂದ ಆರಂಭವಾಗುವ ತುಲಾ ಸಂಕ್ರಮಣದ ಧಾರ್ಮಿಕ ಕಾರ್ಯಕ್ರಮಗಳು ಅ.17ರಂದು ಕೊನೆಗೊಳ್ಳಲಿದೆ. ಮಡಿಕೇರಿ ದಸರಾ ಉತ್ಸವ ಸೆ.26ರಂದು ನಾಲ್ಕು ಶಕ್ತಿ ದೇವತೆಗಳ ಕರಗದ ಮೆರವಣಿಗೆ ಮೂಲಕ ಆರಂಭವಾಗಲಿದೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ನೇತೃತ್ವದ ಸಭೆಯಲ್ಲಿಈ ಕುರಿತು ಚರ್ಚೆ ನಡೆದು ಅನುಮೋದನೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT