ಮಂಗಳವಾರ, ಅಕ್ಟೋಬರ್ 20, 2020
22 °C
ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ

ಮುಂಗಾರು | ದಕ್ಷಿಣ ಕೊಡಗು ವ್ಯಾಪ್ತಿ ಧಾರಾಕಾರ ಮಳೆ, ಮತ್ತಷ್ಟು ಚುರುಕು ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ‌ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರು ಮಳೆ ಆರಂಭಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಮಂಜಿನ ನಗರಿಯಾಗಿ ಬದಲಾಗಿದೆ. ಆಗ್ಗಾಗ್ಗೆ ಮಳೆಯೂ ಅಬ್ಬರಿಸುತ್ತಿದೆ. ಜೋರು ಗಾಳಿ ಬೀಸುತ್ತಿದೆ.

ಮುಂಗಾರು ಮಳೆಗೆ ಪ್ರತಿಯೊಬ್ಬರೂ ಕೊಡೆ, ಸ್ವೆಟರ್, ಗಂಬೂಟು, ಬಟ್ಟೆ ಒಣಗಲು ಬಳಂಜಿ... ಹೀಗೆ ನಾನಾ ರೀತಿಯಲ್ಲಿ ಮಳೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ಬಾರಿಯ ತೀವ್ರ ಅತಿವೃಷ್ಟಿಯಿಂದ ಜಿಲ್ಲೆಯ ಜನರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದರು. ಭತ್ತ, ಮುಸುಕಿನ ಜೋಳ, ಕಾಫಿ, ಏಲಕ್ಕಿ, ಕಾಳು ಮೆಣಸು, ಬಾಳೆ... ಹೀಗೆ ನಾನಾ ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳು ನಾಶವಾಗಿದ್ದವು. ಇದರಿಂದ ಜಿಲ್ಲೆಯ ಕೃಷಿಕರು ಚೇತರಿಸಿಕೊಳ್ಳುವುದೇ ಕಷ್ಟಸಾಧ್ಯವಾಗಿತ್ತು. ಈಗ ಮತ್ತೊಂದು ಮುಂಗಾರು ಜಿಲ್ಲೆಗೆ ಪ್ರವೇಶಿಸಿದ್ದು ಜಿಲ್ಲೆಯ ಜನರಲ್ಲೂ ಆತಂಕ ತಂದಿದೆ.

ಜಿಲ್ಲೆಯಲ್ಲಿ ಜನವರಿಯಿಂದ ಮೇ ಅಂತ್ಯದ ತನಕ ವಾಡಿಕೆ ಮಳೆ 245.50 ಮಿ.ಮೀ. 2016ರಲ್ಲಿ 158.20 ಮಿ.ಮೀ ಮಳೆಯಾಗಿತ್ತು. ಅದೇ 2017ರಲ್ಲಿ 305.04 ಮಿ.ಮೀ ಮಳೆಯಾಗಿದ್ದು, 2018ರ ಇದೇ ಅವಧಿಯಲ್ಲಿ 423.68 ಮಿ.ಮೀ ಮಳೆ ಸುರಿದಿತ್ತು. ಈ ವರ್ಷ ಇದೇ ಅವಧಿಯಲ್ಲಿ 146.92 ಮಿ.ಮೀ ಮಳೆಯಾಗಿದೆ.

ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ ತಾಲ್ಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 253.60 ಮಿ.ಮೀ. 2019ರ ಜನವರಿಯಿಂದ ಮೇ ಅಂತ್ಯದವರೆಗೆ 167.76 ಮಿ.ಮೀ ಮಳೆ ಆಗಿದೆ. 2018ರಲ್ಲಿ 614.74 ಮಿ.ಮೀ ಮಳೆಯಾಗಿದೆ. 2017ರಲ್ಲಿ 344.29 ಮಿ.ಮೀ ಮಳೆಯಾಗಿತ್ತು. 2016ರ ಇದೇ ಅವಧಿಯಲ್ಲಿ 234.75 ಮಿ.ಮೀ. ಮಳೆಯಾಗಿತ್ತು. 

ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 211.30 ಮಿ.ಮೀ. 2019ರ ಜನವರಿಯಿಂದ ಮೇ ಅಂತ್ಯದವರೆಗೆ 87.62 ಮಿ.ಮೀ ಮಳೆ ಆಗಿದೆ. 2018ರಲ್ಲಿ 343.70 ಮಿ.ಮೀ ಮಳೆಯಾಗಿದೆ. 2017ರ ಇದೇ ಅವಧಿಯಲ್ಲಿ 266.25 ಮಿ.ಮೀ ಮಳೆಯಾಗಿತ್ತು. ಹಾಗೆಯೇ 2016ರ ಇದೇ ಅವಧಿಯಲ್ಲಿ 122.33 ಮಿ.ಮೀ ಮಳೆ ಆಗಿತ್ತು. 

ವಿರಾಜಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 271.60 ಮಿ.ಮೀ ಆಗಿದ್ದು, 2019ರ ಜನವರಿಯಿಂದ ಮೇ ಅಂತ್ಯದವರೆಗೆ 185.35 ಮಿ.ಮೀ ಮಳೆಯಾಗಿದೆ. 2018ರಲ್ಲಿ 312.60 ಮಿ.ಮೀ ಮಳೆಯಾಗಿದ್ದು 2017ರ ಇದೇ ಅವಧಿಯಲ್ಲಿ 304.56 ಮಿ.ಮೀ ಮಳೆ ಸುರಿದಿತ್ತು. 2016ರ ಇದೇ ಅವಧಿಯಲ್ಲಿ 117.55 ಮಿ.ಮೀ ಮಳೆಯಾಗಿತ್ತು.

24 ಗಂಟೆ ಅವಧಿಯಲ್ಲಿ ಎಷ್ಟು ಮಳೆ:

ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಯಾದಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 18.27 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 85.52 ಮಿ.ಮೀ ಮಳೆ ಸುರಿದಿತ್ತು. ಜನವರಿಯಿಂದ ಇಲ್ಲಿ ತನಕ ಮಳೆ 224.02 ಮಿ.ಮೀ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 847.01 ಮಿ.ಮೀ ಮಳೆಯಾಗಿತ್ತು. 

ಹೋಬಳಿವಾರು ವಿವರ:

ಮಡಿಕೇರಿ ಕಸಬಾ 9.60, ನಾಪೋಕ್ಲು 20, ಸಂಪಾಜೆ 10.60, ಭಾಗಮಂಡಲ 33.60, ವಿರಾಜಪೇಟೆ ಕಸಬಾ 55.60, ಹುದಿಕೇರಿ 24, ಶ್ರೀಮಂಗಲ 15.60, ಪೊನ್ನಂಪೇಟೆ 17.30, ಅಮ್ಮತ್ತಿ 72, ಬಾಳೆಲೆ 10, ಸೋಮವಾರಪೇಟೆ ಕಸಬಾ 1.80, ಶನಿವಾರಸಂತೆ 1.80, ಶಾಂತಳ್ಳಿ 6.60, ಕುಶಾಲನಗರ 6.40, ಸುಂಟಿಕೊಪ್ಪ 7.10 ಮಿ.ಮೀ ಮಳೆಯಾಗಿದೆ. 

ಹಾರಂಗಿ ನೀರಿನ ಮಟ್ಟ:

ಹಾರಂಗಿ ಜಲಾಶಯದ ಗರಿಷ್ಠಮಟ್ಟ 2,859 ಅಡಿ. 2,805.01 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 2,815.28 ಅಡಿ ನೀರಿತ್ತು. ಈಗ ಒಳಹರಿವು 153 ಕ್ಯುಸೆಕ್ ಆಗಿದ್ದು, ಕಳೆದ ವರ್ಷ ಇದೇ ದಿನ ಒಳಹರಿವು 7,260 ಕ್ಯುಸೆಕ್ ಇತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು