ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ವಿಕೋಪದ ಅಧ್ಯಯನ: ಜಿಲ್ಲಾಡಳಿತಕ್ಕೆ ವರದಿ

ಪೊನ್ನಂಪೇಟೆ ಕೂರ್ಗ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳ ಸಂಶೋಧನೆ
Last Updated 28 ಜೂನ್ 2019, 19:30 IST
ಅಕ್ಷರ ಗಾತ್ರ

ಮಡಿಕೇರಿ: ‘ಪೊನ್ನಂಪೇಟೆ ಕೂರ್ಗ್‌ ತಾಂತ್ರಿಕ ಕಾಲೇಜಿನ (ಸಿಐಟಿ) ವಿದ್ಯಾರ್ಥಿಗಳು ಕೊಡಗಿನ ಪ್ರಕೃತಿ ವಿಕೋಪದ ಸಂಶೋಧನೆ ನಡೆಸಿದ್ದು ಆ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಿದ್ದಾರೆ’ ಎಂದು ಕೊಡವ ಎಜುಕೇಷನ್‌ ಸೊಸೈಟಿ ಕಾರ್ಯದರ್ಶಿ ರಾಕೇಶ್ ಪೂವಯ್ಯ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಲೇಜಿನ ಅಂತಿಮ ವರ್ಷದ 4 ಎಂಜಿನಿಯರ್‌ ವಿದ್ಯಾರ್ಥಿಗಳು ಕಳೆದ ಆಗಸ್ಟ್‌ನಲ್ಲಿ ನಡೆದ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ, ವಿಕೋಪಕ್ಕೆ ಸಂಬಂಧಿಸಿದ ಕಾರಣಗಳು ಹಾಗೂ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಶೋಧನೆ ವರದಿ ತಯಾರಿ ಮಾಡಿದ್ದಾರೆ’ ಎಂದು ಹೇಳಿದರು.

ವಿದ್ಯಾರ್ಥಿ ಪುನೀತ್ ವಿಶ್ವಾಸ್‌, ಬಿ.ರವಿಕುಮಾರ್‌, ಎನ್‌.ಎ.ಆನ್ಯಾ, ಟಿ.ಸ್ವರೂಪ್‌ ಅವರು ಜಿಲ್ಲಾಡಳಿತ ಹಾಗೂ ಶಿಕ್ಷಣ ಸಂಸ್ಥೆ ಮೂಲಕ ಅಧ್ಯಯನ ನಡೆಸಿ 16 ಅಂಶಗಳ ವರದಿಯನ್ನು ಸಿದ್ಧಪಡಿಸಿ ಕಾಲೇಜಿಗೆ ಉತ್ತಮ ಹೆಸರು ತರುವಲ್ಲಿ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.

ಸಂಶೋಧನೆ ವಿದ್ಯಾರ್ಥಿ ಪುನೀತ್ ವಿಶ್ವಾಸ್‌ ಮಾತನಾಡಿ, ಮಳೆಯಿಂದ ಕೊಡಗಿನ 105 ಕಡೆಗಳಲ್ಲಿ ಭೂಕುಸಿತಗಳು ಸಂಭವಿಸಿತ್ತು. ಈ ಪ್ರದೇಶಗಳ 80 ಕಡೆ ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದಾರೆ ಎಂದು ಹೇಳಿದರು.

ಭೂಕುಸಿತ ಸಂಭವಿಸಿ ಹೆಚ್ಚು ಅನಾಹುತಗಳಾಗುವ ಇಗ್ಗೋಡ್ಲು, ಮದೆನಾಡು, ಮಕ್ಕಂದೂರು, ಕಾಟಕೇರಿ, ಮೊಣ್ಣಂಗೇರಿ ಪ್ರದೇಶದ ಮಣ್ಣಿನ ಪರೀಕ್ಷೆ ಪಡೆದು, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅದರ ವರದಿ ಬಂದ ನಂತರ ವಿದ್ಯಾರ್ಥಿಗಳೇ ಸೇರಿ ಭೂಕುಸಿತಕ್ಕೆ ಸಂಬಂಧಿಸಿದ ಕಾರಣಗಳನ್ನು ಪತ್ತೆ ಹಚ್ಚಲಾಗಿದೆ. ಇದರ ಸಂಪೂರ್ಣ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ವರದಿಯ ಪ್ರಮುಖ ಅಂಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಕಾರಣ ಮಳೆ ನೀರು ಮಣ್ಣಿನೊಡನೆ ಬೆರೆತು ದ್ರವ ರೂಪದಲ್ಲಿ ಹೊರ ಬಂದಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜನವಸತಿ ಮಾತ್ರವಲ್ಲದೇ ಅರಣ್ಯ ಪ್ರದೇಶಗಳಲ್ಲೂ ಭೂಕುಸಿತ ಸಂಭಂದಿಸಿದಕ್ಕೆ ವಿವಿಧ ಕಾರಣಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪಿ.ಸಿ.ಕವಿತಾ ಮಾತನಾಡಿ, ತಾಂತ್ರಿಕ ವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ ಬೆಳೆಸಬೇಕು ಎಂಬ ಉದ್ದೇಶದಿಂದ ಅಧ್ಯಯನ ನಡೆಸಲು ಸಂಸ್ಥೆ ಸಹಕಾರ ನೀಡಿತ್ತು. ಅದರಂತೆ ಉತ್ತಮ ವರದಿಯನ್ನೇ ತಯಾರಿಸಿ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂಸ್ಥೆ ನಿರಾಶ್ರಿತರ ಶಿಕ್ಷಣಕ್ಕೆ ನೆರವು ನೀಡಿತ್ತು. ವಿದ್ಯಾರ್ಥಿಗಳ ಸಹಕಾರದಿಂದ ಪ್ರಗತಿಯ ಹಾದಿಯಲ್ಲಿ ಕಾಲೇಜು ಮುಂದಾಗುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮೋದ್‌ ಗಣಪತಿ, ವಿದ್ಯಾರ್ಥಿಗಳಾದ ಬಿ.ರವಿಕುಮಾರ್‌, ಎನ್‌.ಎ.ಆನ್ಯಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT