ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಡಿಗೆ: ಹುಲ್ಲುಗಾವಲಿಗೆ ಬೆಂಕಿ

Published 31 ಮಾರ್ಚ್ 2024, 5:35 IST
Last Updated 31 ಮಾರ್ಚ್ 2024, 5:35 IST
ಅಕ್ಷರ ಗಾತ್ರ

ಕುಶಾಲನಗರ: ಸಮೀಪದ ಕೂಡಿಗೆ ಕೃಷಿ ಫಾರಂ ಆವರಣದಲ್ಲಿರುವ ಜೆರ್ಸಿ ತಳಿ ಸಂವರ್ಧನ ಕೇಂದ್ರಕ್ಕೆ ಸೇರಿದ 10 ಎಕರೆ ಪ್ರದೇಶದಲ್ಲಿ ಬೆಳೆಸಲಾಗಿದ್ದ ಹುಲ್ಲುಗಾವಲು ಪ್ರದೇಶಕ್ಕೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಹಸುಗಳಿಗೆ ಬೆಳೆಸಿದ್ದ ಹುಲ್ಲು ಹಾಗೂ ಸಂಗ್ರಹ ಮಾಡಿದ್ದ ಒಣ ಹುಲ್ಲು ಸುಟ್ಟು ನಾಶವಾಗಿದೆ.

ಶನಿವಾರ ಸಂಜೆ ಆಕಸ್ಮಿಕವಾಗಿ ಉಂಟಾದ ಅಗ್ನಿ ಅನಾಹುತದಿಂದ ಹುಲ್ಲು ಸೇರಿದಂತೆ ಹುಲ್ಲುಗಾವಲಿಗೆ ಅಳವಡಿಸಿದ್ದ ನೀರು ಸರಬರಾಜು ಪೈಪ್‌ಗಳು ಸುಟ್ಟು ಹಾನಿಯಾಗಿದೆ. ಜರ್ಸಿ ಸಂವರ್ಧನ ಕೇಂದ್ರದ ಸಮೀಪದ ಜೋಳದ ಗುಡ್ಡೆಗೆ ಬೆಂಕಿ ಹಾಕಲಾಗಿದ್ದು, ಇದರ ಕಿಡಿ ಗಾಳಿಯಲ್ಲಿ ತೂರಿ ಬಂದು ಹುಲ್ಲುಗಾವಲಿಗೆ ಬಿದ್ದ ಪರಿಣಾಮ ಬೆಂಕಿಗೆ ಆಹುತಿಯಾಗಿದೆ.

ಸ್ಥಳಕ್ಕೆ ಕುಶಾಲನಗರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಿ ಹುಲ್ಲು ಸಂಪೂರ್ಣ ಸುಟ್ಟು ಹೋಗಿತ್ತು.

ಕುಶಾಲನಗರ ಸಮೀಪದ ಕೂಡಿಗೆ ಜೆರ್ಸಿ ಸಂವರ್ಧನ ಕೇಂದ್ರಕ್ಕೆ ಸೇರಿದ ಹುಲ್ಲುಗಾವಲಿಗೆ ಬೆಂಕಿ ಬಿದ್ದಿರುವುದು
ಕುಶಾಲನಗರ ಸಮೀಪದ ಕೂಡಿಗೆ ಜೆರ್ಸಿ ಸಂವರ್ಧನ ಕೇಂದ್ರಕ್ಕೆ ಸೇರಿದ ಹುಲ್ಲುಗಾವಲಿಗೆ ಬೆಂಕಿ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT