ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಸಮೀಪ ಒಂಟಿ ಮನೆಯೊಂದರಲ್ಲಿ ವಾಸವಿದ್ದ ನಾಲ್ವರನ್ನು ಕೊಲೆ ಮಾಡಲಾಗಿದೆ.

ಗೌರಿ, ಕಾಳ, ನಾಗಿ ಹಾಗೂ ಕಾವೇರಿ ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ.

ಗೌರಿ, ಕಾಳ ಎಂಬುವವರ ಮಗಳಾದ ನಾಗಿ, ಪತಿ ಗಿರೀಶ ಎಂಬುವವನೊಂದಿಗೆ ವಾಸವಿದ್ದರು. ಇವರ ಪುತ್ರಿ ಕಾವೇರಿ ಎಂದು ಹೇಳಲಾಗುತ್ತಿದೆ. ಗಿರೀಶ ಎಂಬಾತ ನಾಪತ್ತೆಯಾಗಿದ್ದಾನೆ.

ಸದ್ಯ ಈ ಕುಟುಂಬದ ಕುರಿತು ಖಚಿತ ಮಾಹಿತಿಯನ್ನು ಪಡೆಯಲಾಗುತ್ತಿದೆ. ಮಧ್ಯಾಹ್ನವಾದರೂ ಕೂಲಿ ಕೆಲಸಕ್ಕೆ ಬಂದಿಲ್ಲದಿರುವುದನ್ನು ಗಮನಿಸಿ ಮನೆಯ ಬಳಿ ಬಂದ ಇತರ ಕಾರ್ಮಿಕರು ಮಾಹಿತಿ ನೀಡಿದರು. ಸ್ಥಳಕ್ಕೆ ಬಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಧಾವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.