ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಾಳೆ

Published 30 ಸೆಪ್ಟೆಂಬರ್ 2023, 5:24 IST
Last Updated 30 ಸೆಪ್ಟೆಂಬರ್ 2023, 5:24 IST
ಅಕ್ಷರ ಗಾತ್ರ

ನಾಪೋಕ್ಲು: ನೆಲಜಿ ಗ್ರಾಮದ ಅಂಬಲ ಮಹಿಳಾ ಸಮಾಜ ಪುರುಷರು ಹಾಗೂ ಮಹಿಳೆಯರಿಗಾಗಿ ಜಿಲ್ಲಾಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಭಾನುವಾರ(ಅ.1) ಬೆಳಿಗ್ಗೆ 9:30ಕ್ಕೆ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಅಪ್ಪುಮಣಿಯಂಡ ಡೇಸಿ ಸೋಮಣ್ಣ ಹೇಳಿದರು.

 ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ ಸ್ಪರ್ಧೆಯನ್ನು ಶಾಸಕ ಡಾ.ಮಂತರ್ ಗೌಡ ಹಾಗೂ ಶಾಂತೆಯಂಡ ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದು ಕಾಫಿ ಬೆಳೆಗಾರರಾದ ಮಂಡಿರ ಜಯ ದೇವಯ್ಯ ಕೋವಿ ಪೂಜೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮುಳಿಯ ಜ್ಯುವೆಲ್ಲರಿ ಚೇರ್ ಮ್ಯಾನ್ ಮುಳಿಯ ಕೇಶವ ಪ್ರಸಾದ್, ಕಾಫಿ ಬೆಳೆಗಾರರಾದ ಎಳ್ತಂಡ ಬೋಪಣ್ಣ, ದಿ ತಾಮರ ರೆಸಾರ್ಟಿನ ಮ್ಯಾನೇಜರ್ ಕಲಿಯಾಟಂಡ ಗಿರೀಶ್ ಸುಬ್ಬಯ್ಯ, ಕಾಫಿ ಬೆಳೆಗಾರ ಕೋಟೆರ ಸುರೇಶ್ ,ತಾಜ್ ಪ್ರಾಜೆಕ್ಟ್ ನಿವೃತ್ತ ಇಂಜಿನಿಯರ್ ಕೈಬುಲಿರ ಬೆಲ್ಲು ಅಯ್ಯಪ್ಪ ಉಪಸ್ಥಿತರಿರುವರು’ ಎಂದರು.

‘ಸಮಾರೋಪ ಸಮಾರಂಭ ಅದೇ ದಿನ ಮಧ್ಯಾಹ್ನ 4.30 ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಗ್ರಾಮಾಂತರ ಸರ್ಕಲ್ ಇನ್ ಸ್ಪೆಕ್ಟರ್ ಪೆಮ್ಮಚಂಡ ಅನುಪ್ ಮಾದಪ್ಪ, ಕಾಫಿ ಬೆಳೆಗಾರರಾದ ಬೊಳ್ಳಚೆಟ್ಟೀರ ಸುರೇಶ್, ಮಂಡಿರ ಜಯದೇವಯ್ಯ, ನಿವೃತ್ತ ಸುಬೇದಾರ್ ಮೇಜರ್ ಬಾಳೆಯಡ ಅಪ್ಪಣ್ಣ, ನಿವೃತ್ತ ನಬಾರ್ಡ್ ಎಜಿಎಂ ಮುಂಡಂಡ ಸಿ. ನಾಣಯ್ಯ, ಕಾಫಿ ಬೆಳೆಗಾರರಾದ ಕೋಟೆರ ಪುಷ್ಪ ಚಂಗಪ್ಪ ಪಾಲ್ಗೊಳ್ಳುವರು’ ಎಂದು ತಿಳಿಸಿದರು.

‘ಕ್ರೀಡಾಕೂಟಕ್ಕೆ ಟ್ರೋಫಿ ಮತ್ತು ನಗದು ದಾನಿಗಳಾಗಿ ಮನವಟ್ಟಿರ ಕಮಲ ಮತ್ತು ಮಕ್ಕಳು, ಮಾಳೆಯಂಡ ಮೀನಾ ಯಶೋಧ, ಮಾಳೆಯಂಡ ಪ್ರಕಾಶ್, ಮನವಟ್ಟಿರ ಸಾಬು ಉತ್ತಪ್ಪ, ಮಹಿಳಾ ಸಮಾಜ, ಮಚ್ಚಂಡ ಕಂಠಿ ಬೋಪಣ್ಣ ಮತ್ತು ಮಗಳು, ಮುಕ್ಕಾಟಿರ ಶ್ವೇತಾ ಮತ್ತು ಮಕ್ಕಳು, ಅಂಜಪರವಂಡ ಅನಿಲ್ ಮಂದಣ್ಣ ಮತ್ತು ಮಕ್ಕಳು ಸಹಕರಿಸಿದ್ದಾರೆ’ ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸುವರು ಅ.1ರಂದು ಭಾನುವಾರ ಬೆಳಿಗ್ಗೆ 11.30 ಗಂಟೆ ಒಳಗೆ ಕಡ್ಡಾಯವಾಗಿ ಟೋಕನ್ ಪಡೆದುಕೊಳ್ಳಬೇಕು. ನಂತರ ಬಂದವರನ್ನು ಪರಿಗಣಿಸಲಾಗುವುದಿಲ್ಲ’ ಎಂದು ತಿಳಿಸಿದರು.

 ಸಲಹಾ ಸಮಿತಿ ಅಧ್ಯಕ್ಕೆ ಮಣವಟ್ಟಿರ ಕಮಲ ಬೆಳ್ಳಪ್ಪ, ಮಹಿಳಾ ಸಮಾಜದ ಕಾರ್ಯದರ್ಶಿ ಮುಕ್ಕಾಟಿರ ಶ್ವೇತಾ ರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT