ವಿಜಯನಗರ ನಿವಾಸಿ ಮಂಜುನಾಥ್ ಹಾಗೂ ಸುಜಾತಾ ದಂಪತಿ ಪುತ್ರ, ಕುಶಾಲನಗರದ ಎಂ.ಜಿ.ಎಂ. ಕಾಲೇಜಿನ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಹೇಮಂತ್ (19) ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದರು. ಕಾಲೇಜಿಗೆ ತೆರಳಿ ಸಂಜೆ 6 ಗಂಟೆಗೆ ಮನೆಗೆ ವಾಪಸ್ಸಾಗಿ, ಸ್ನಾನ ಮಾಡುವ ಸಲುವಾಗಿ ಬಿಸಿ ನೀರು ಕಾಯಿಸಿಕೊಳ್ಳಲು ಪಾತ್ರೆಯೊಂದರಲ್ಲಿ ತಣ್ಣೀರು ತುಂಬಿ ವಿದ್ಯುತ್ ಚಾಲಿತ ಹೀಟರ್ ಹಾಕಿದ್ದರು.