ಮಡಿಕೇರಿಗೆ ಕ್ರಿಸ್‌ಮಸ್ ರಜೆಯ ಪ್ರಯುಕ್ತ ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದ ಸಂಚಾರ ದಟ್ಟಣೆ ಉಂಟಾಯಿತು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯಲ್ಲಿ ಸೋಮವಾರ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು
‘ವೇ ಸೈಡ್ ಫೆಸಿಲಿಟಿಸ್’ (ರಸ್ತೆಬದಿ ಸೌಕರ್ಯಗಳ) ಅನ್ನು ಕೊಡಗಿನಲ್ಲಿ ಪ್ರವಾಸಿಗರಿಗೆ ಕಲ್ಪಿಸಬೇಕಿದೆ. ಹೆದ್ದಾರಿ ಹಾಗೂ ರಸ್ತೆ ಬದಿ ಅಲ್ಲಲ್ಲಿ ಕಸ ಹಾಕಲು ವ್ಯವಸ್ಥೆ ಕುಡಿಯುವ ನೀರನ ವ್ಯವಸ್ಥೆ ಶೌಚಾಲಯ ಊಟ ಸೇವಿಸಲು ಸ್ಥಳಾವಕಾಶಗಳನ್ನು ಕಲ್ಪಿಸಬೇಕಿದೆ. ಇದರೊಂದಿಗೆ ಹೊಸ ಪ್ರವಾಸಿ ತಾಣಗಳ ಅಭಿವೃದ್ಧಿಯನ್ನು ಮಾಡಿ ಬರುವ ಪ್ರವಾಸಿಗರು 5 ತಾಲ್ಲೂಕುಗಳಿಗೂ ಹಂಚಿಕೆಯಾಗುವಂತೆ ಮಾಡಬೇಕಿದೆ
ನಾಗೇಂದ್ರ ಪ್ರಸಾದ್ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ.
ವಾಹನ ನಿಲುಗಡೆಗೆ ತುರ್ತಾಗಿ ಆಗಲೇಬೇಕಿದೆ. ಶೌಚಾಲಯ ಕುಡಿಯುವ ನೀರು ಬೇಕು ವಾಹನ ನಿಲುಗಡೆಗೆ ಜಾಗ ಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದಲೂ ಇದೆ. ಆದರೆ ಯಾವುದೂ ಆಗಿಲ್ಲ. ಕನಿಷ್ಠ ವರ್ಷಕ್ಕೆ ಒಂದರಿಂದ ಎರಡು ಸಮಸ್ಯೆಗಳನ್ನು ನಿವಾರಣೆ ಮಾಡಬೇಕಿದೆ. ಈ ವರ್ಷ ವಾಹನ ನಿಲುಗಡೆ ಸಮಸ್ಯೆ ನಿವಾರಣೆಯನ್ನು ಪ್ರಧಾನವಾಗಿ ಹಾಗೂ ಅದ್ಯತೆಯ ವಿಷಯವಾಗಿ ಪರಿಗಣಿಸಿ
ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಕೂರ್ಗ್ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ
ಸುಮಾರು 300 ವಾಹನಗಳನ್ನು ನಿಲುಗಡೆ ಮಾಡಲು ಅವಕಾಶ ಇರುವಂತಹ ಕಾವೇರಿ ಕಲಾಕ್ಷೇತ್ರದ ಕಾಮಗಾರಿ ಈ ತಿಂಗಳಿನಲ್ಲೇ ಆರಂಭವಾಗಲಿದೆ. ಇದು ₹ 9.5 ಕೋಟಿ ಮೊತ್ತದ ಕಾಮಗಾರಿಯಾಗಿದ್ದು ಇದರಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದರಿಂದ ಮಡಿಕೇರಿ ನಗರದಲ್ಲಿ ವಾಹನ ನಿಲುಗಡೆಗೆ ಅವಕಾಶ ಸಿಗಲಿದೆ. ಇದರಿಂದ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗಲಿದೆ.