ನಾಪೋಕ್ಲು (ಕೊಡಗು ಜಿಲ್ಲೆ): ಪೊನ್ನೋಲತಂಡ ತಂಡದವರು ಕೊಡವ ಕೌಟುಂಬಿಕ ಹಾಕಿ ಉತ್ಸವದ ಟೂರ್ನಿಯಲ್ಲಿ ಸೋಮವಾರ ಗೆಲುವು ಸಾಧಿಸಿದರು.
ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪೊನ್ನೋಲತಂಡ 6–4 ಗೋಲುಗಳಿಂದ ಕುಟ್ಟಂಡ (ಅಮ್ಮತ್ತಿ) ತಂಡದ ಎದುರು ಗೆದ್ದಿತು.
ಮದ್ರೀರ ತಂಡ 3-0ರಿಂದ ಪಾಲೆಂಗಡ ತಂಡವನ್ನು ಮಣಿಸಿತು. ಮದ್ರೀರ ತಂಡದ ಗಣಪತಿ ಅವರು ಟೂರ್ನಿಯ ಮೊದಲ ಹ್ಯಾಟ್ರಿಕ್ ಗೋಲು ಹೊಡೆದರು.
ಪುಲಿಯಂಡ ತಂಡವು 6-0 ರಲ್ಲಿ ಓಡಿಯಂಡ ತಂಡದ ಎದುರು ಜಯಿಸಿದರೆ, ಕಂಜಿತಂಡ ತಂಡವು 4-3 ಗೋಲುಗಳಿಂದ ಟೈ ಬ್ರೇಕರ್‌ನಲ್ಲಿ ಚೋಕಂಡ ತಂಡವನ್ನು ಪರಾಭವಗೊಳಿಸಿತು.
ಇನ್ನುಳಿದ ಪಂದ್ಯಗಳಲ್ಲಿ; ವಾಟೇರಿರ ತಂಡ 4-0ಯಿಂದ ನಂದಿನೆರವಂಡ ವಿರುದ್ಧ; ನಾಗಂಡ 1-0 ರಿಂದ ಕುಪ್ಪಂಡ ತಂಡದ ಎದುರು ಗೆದ್ದಿತು. ತಂಬುಕುತ್ತಿರ 2-0 ಅಂತರದಿಂದ ಬಾದುಮಂಡ ತಂಡವನ್ನು ಮಣಿಸಿತು.
ಕುಂಚೆಟ್ಟಿರ ತಂಡ 4-0 ರಲ್ಲಿ ಕೈಬುಲಿರ ತಂಡದ ಎದುರು, ಚೊಟ್ಟೇರ ತಂಡ 5-4ರಿಂದ ಬಟ್ಟೀರ ತಂಡದ ಎದುರು, ಕೇತಿರ ತಂಡ 5-4 ಅಂತರದಿಂದ ಮಾಣಿಪಂಡ ತಂಡದ ಎದುರು, ಕೋದಂಡ ತಂಡವು 5-0 ರಲ್ಲಿ ಆದೆಂಗಡ ತಂಡದ ಎದುರು, ಆಲೆಮಾಡ ತಂಡ 5-2 ಅಂತರದಿಂದ ಅರಮಣಮಾಡ ತಂಡದ ಎದುರು, ಅಪ್ಪುಮಣಿಯಂಡ ತಂಡ 3- 1 ಅಂತರದಿಂದ ಕೀತಿಯಂಡ ತಂಡದ ಎದುರು ಜಯಿಸಿದವು. ನಾಪಂಡ, ತಿರೋಡಿರ, ಅಪ್ಪಾರಂಡ, ಮಾದಂಡ, ಮೂಡೇರ, ಕಾಂಗೀರ, ನಂಬುಡಮಾಡ, ಪಟ್ಟ ಮಾಡ, ಐಚಂಡ ತಂಡಗಳು ವಾಕ್ ಓವರ್ ಮೂಲಕ ಮುಂದಿನ ಸುತ್ತು ಪ್ರವೇಶಿಸಿದವು.
ಕೇತಿರ ತಂಡದ ಪರವಾಗಿ ಐವರು ಆಟಗಾರ್ತಿಯರು ಕಣಕ್ಕೆ ಇಳಿದಿದ್ದು ವಿಶೇಷ. ಬಟ್ಟೀರ ತಂಡದ ಪರವಾಗಿ ಕಣಕ್ಕಿಳಿದಿದ್ದ ಆಟಗಾರ್ತಿಯೊಬ್ಬರು ವಿರಾಮದ ವೇಳೆಗೆ ತಮ್ಮ ಮಗುವಿಗೆ ಹಾಲುಣಿಸಿ ಮತ್ತೆ ಮೈದಾನಕ್ಕೆ ಇಳಿದಿದ್ದು ಎಲ್ಲರ ಗಮನ ಸೆಳೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.