ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಹಾಕಿ: ಚೊದುಮಂಡ ತಂಡಕ್ಕೆ ಭರ್ಜರಿ ಜಯ

ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿ
Published 1 ಏಪ್ರಿಲ್ 2024, 5:59 IST
Last Updated 1 ಏಪ್ರಿಲ್ 2024, 5:59 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು): ಚೊದುಮಂಡ ತಂಡವು ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯಲ್ಲಿ ಭಾನುವಾರ ಅನ್ನೇರಕಂಡ ತಂಡದ ವಿರುದ್ಧ 6-0 ಗೋಲುಗಳಿಂದ ಜಯ ದಾಖಲಿಸುವ ಮೂಲಕ ಮುಂದಿನ ಸುತ್ತಿಗೆ ಮುನ್ನಡೆಯಿತು.

ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಲೀಗ್‌ ಸುತ್ತಿನ ಪಂದ್ಯದಲ್ಲಿ ಚೊದುಮಂಡ ಪರ ಉತ್ತಮ ಪ್ರದರ್ಶನ ತೋರಿದ ನಿಖಿಲ್ ಕಾವೇರಪ್ಪ ಭರ್ಜರಿ 5 ಗೋಲು ಗಳಿಸಿದರು. ಗಗನ್ ಗಣಪತಿ ಒಂದು ಗೋಲು ಹೊಡೆದರು.

ಮತ್ತೊಂದು ಪಂದ್ಯದಲ್ಲಿ ಗುಮ್ಮಟ್ಟಿರ ತಂಡವು 3–1 ಅಂತರದಿಂದ ಅಯ್ಯಮಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ವಿಜೇತ ತಂಡದ ಪರ ಗುಮ್ಮಟಿರ ದೇವಮ್ಮ ಮಹಿಳಾ ಗೋಲ್‌ಕೀಪರ್ ಆಗಿ ಗಮನ ಸೆಳೆದರು.

ಉದಿಯಂಡ, ಅನ್ನಾಡಿಯಂಡ, ಚೋದುಮಂಡ, ಕನ್ಂಬೀರ, ಕುಕ್ಕೇರ, ಅಲ್ಲಾಪಿರ, ಗುಮ್ಮಟಿರ, ಕವಾಡಿಚಂ, ಕೂಡಂಡ ಸೇರಿದಂತೆ ಒಟ್ಟು 17 ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದವು.

ದಿನದ ಫಲಿತಾಂಶ: ಉದಿಯಂಡ ತಂಡವು ನಾಟೋಳಂಡ ವಿರುದ್ಧ 2-0 ಅಂತರದಿಂದ; ಅನ್ನಾಡಿಯಂಡ ತಂಡ 3–2 ಅಂತರದಿಂದ ಬೊಳ್ಳೇರ ವಿರುದ್ಧ; ಪೂದ್ರಿ ಮಾಡ ತಂಡ 3–1ರಿಂದ ಕುಕ್ಕೆರ ಎದುರು; ಕವಾಡಿಚಂಡ ತಂಡ 3-1 ಅಂತರದಿಂದ ಪಾರುವಂಗಡ ವಿರುದ್ಧ ಗೆಲುವು ಸಾಧಿಸಿದವು.

ಅನ್ನಾಡಿಯಂಡ ಮತ್ತು ಬೊಳ್ಳೇರ ತಂಡಗಳ ನಡುವಿನ ಪಂದ್ಯದ ರೋಚಕ ಕ್ಷಣ
ಅನ್ನಾಡಿಯಂಡ ಮತ್ತು ಬೊಳ್ಳೇರ ತಂಡಗಳ ನಡುವಿನ ಪಂದ್ಯದ ರೋಚಕ ಕ್ಷಣ

ಕೂಡಂಡ ತಂಡ 4-0ರಿಂದ ಬೊಪ್ಪಡಂಡ ವಿರುದ್ಧ; ತಿರೋಡಿರ ತಂಡವು ಬೊಳ್ಳಿ ಮಂಡ ವಿರುದ್ಧ 4-0ರಿಂದ; ಚೌರೀರ (ಹೊದ್ದೂರು) ತಂಡವು ತಾತ ಪಂಡ ವಿರುದ್ಧ 2-0ರಿಂದ; ಪುಲ್ಲಂಗಡ ತಂಡವು 1–0ರಿಂದ ಕಟ್ಟೆರ ತಂಡವನ್ನು ಮಣಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT