ಮಡಿಕೇರಿ: ವಿರಾಜಪೇಟೆ ಮತ್ತು ಕೇರಳ ಸಂಪರ್ಕಿಸುವ ರಸ್ತೆಗೆ ಮಾಕುಟ್ಟ ಚೆಕ್ಪೋಸ್ಟ್ ಸಮೀಪ ಶುಕ್ರವಾರ ರಾತ್ರಿ ಉರುಳಿ ಬಿದ್ದಿದ್ದ ಭಾರಿ ಗಾತ್ರದ ಮರವನ್ನು ತಡರಾತ್ರಿ ಕಾರ್ಯಾಚರಣೆ ಕೈಗೊಂಡ ಸಿಬ್ಬಂದಿ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮರದಲ್ಲಿ ಹೆಚ್ಚಿನ ಜೇನುಗೂಡುಗಳು ಇದ್ದ ಕಾರಣ ಜೇನ್ನೋಣಗಳ ಕಾಟವೂ ಅತಿಯಾಗಿತ್ತು. ಇದರಿಂದ ಎರಡೂ ಬದಿಯಲ್ಲಿದ್ದ ವಾಹನ ಸವಾರರು ಪರದಾಡಿದರು. ಸ್ಥಳಕ್ಕೆ ಬಂದ ರಕ್ಷಣಾ ತಂಡ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು. ಇದರಲ್ಲಿ ಕೇರಳ ರಾಜ್ಯದ ರಕ್ಷಣಾ ತಂಡವೂ ಭಾಗಿಯಾಗಿತ್ತು. ಒಟ್ಟು 20ಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿದ್ದರು.

ಯಥೇಚ್ಛವಾಗಿ ಹಾರಾಡುತ್ತಿದ್ದ ಜೇನ್ನೊಣಗಳು ಕಾರ್ಯಾಚರಣೆಗೆ ಅಡ್ಡಿಯಾಗಿದ್ದವು. ಅದಕ್ಕಾಗಿ ಬೆಂಕಿ ಹೊತ್ತಿಸಿ ಹೊಗೆ ಬರುವಂತೆ ಮಾಡಿ ಜೇನ್ನೊಣಗಳನ್ನು ಚದುರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.