ಮಡಿಕೇರಿ: ಗ್ರಂಥಾಲಯಗಳನ್ನು ಬಳಸುವ ಮೂಲಕ ಬೆಳೆಸಬೇಕು ಎಂದು ಲೇಖಕಿ, ಅನುವಾದಕಿ ದೀಪಾಭಾಸ್ತಿ ಹೇಳಿದರು.

ಇಲ್ಲಿನ ಕೈಗಾರಿಕಾ ಬಡಾವಣೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದಲ್ಲಿ ಅವರು ಮಾತನಾಡಿದರು.

‘ಈ ಜಿಲ್ಲಾ ಕೇಂದ್ರ ಗ್ರಂಥಾಲಯ ನನಗೆ 2ನೇ ಮನೆಯಿದ್ದಂತೆ ಎಂದ ಅವರು, ‘ಗ್ರಂಥಾಲಯದ ಸಂಬಂಧದಿಂದಾಗಿ ನನ್ನ ಸಾಹಿತ್ಯ ಜ್ಞಾನ ಹೆಮ್ಮರವಾಯಿತು’ ಎಂದು ಹೇಳಿದರು.

ಓದುವ ಪ್ರವೃತ್ತಿಯನ್ನು ಬೆಳೆಸುವಲ್ಲಿ ಈ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರೇರಣೆಯಾಯಿತು ಎಂದರು.

‘2184 ಎಂಬ ತನ್ನ ಗ್ರಂಥಾಲಯ ನೋಂದಣಿ ಸಂಖ್ಯೆಯನ್ನೂ ಉಲ್ಲೇಖಿಸಿದ ದೀಪಾಭಾಸ್ತಿ, ಅನೇಕ ಪುಸ್ತಕಗಳಲ್ಲಿ ತಾನು ಆ ಪುಸ್ತಕ ಓದಿರುವ ಕುರುಹಾಗಿ ಈ ಸಂಖ್ಯೆಯನ್ನು ಗಮನಿಸಬಹುದು’ ಎಂದೂ ಹೇಳಿದರು.

ಸಪ್ತಾಹದ ಮೂಲಕ ಗ್ರಂಥಾಲಯಗಳಿಗೆ ಹೆಚ್ಚಿನ ಓದುಗರು ದೊರಕಲಿ. ಹೊಸ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ತರಿಸುವ ನಿಟ್ಟಿನಲ್ಲಿ ಸರ್ಕಾರ ಗ್ರಂಥಾಲಯಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿ ನೀಡಲಿ ಎಂದು ಸಲಹೆ ನೀಡಿದರು.

ಜಾನಪದ ಪರಿಷತ್ತಿನ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಟಿ.ಅನಿಲ್ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟಿಸಿ ಮಾತನಾಡಿ, ‘ಗ್ರಂಥಾಲಯಗಳು ಓದುಗರ ಪಾಲಿಗೆ ಆಲಯ ಇದ್ದಂತೆ. ಗ್ರಂಥಗಳ ಗುಡಿಯೇ ಆಗಿರುವ ಗ್ರಂಥಾಲಯಗಳು ಓದುಗರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿಕೊಂಡು ಬಂದಿವೆ. ವಿದ್ಯಾರ್ಥಿಗಳಲ್ಲಿಯೂ ಓದುವ ಅಭ್ಯಾಸಕ್ಕೆ ಗ್ರಂಥಾಲಯಗಳು ಕಾರಣವಾಗಬೇಕು. ಗ್ರಂಥಾಲಯಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳು ಸಾಹಿತ್ಯ ಕೃತಿಗಳನ್ನು, ದಿನಪತ್ರಿಕೆಗಳನ್ನು ಓದಬೇಕು’ ಎಂದರು.

ಸಾಹಿತಿ ಸುಬ್ರಾಯ ಸಂಪಾಜೆ ಮಾತನಾಡಿ, ‘ಮಡಿಕೇರಿಯಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಸಾಕಷ್ಟು ಮಹತ್ವವಿದೆ. ಇಲ್ಲಿನ ಗ್ರಂಥಾಲಯ ಸಿಬ್ಬಂದಿಗಳು ಸ್ನೇಹಪರರು ಎಂಬುದೇ ಹೆಚ್ಚು ಓದುಗರನ್ನು ಈ ಗ್ರಂಥಾಲಯ ಹೊಂದಲು ಕಾರಣವಾಗಿದೆ’ ಎಂದು ಹೇಳಿದರು.

ಸಹಾಯಕ ಗ್ರಂಥಪಾಲಕ ವಿಜಯ್ ನಾಗ್ ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಗ್ರಂಥಾಲಯ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಓದುಗರಾದ ದಕ್ಷಿಣಮೂರ್ತಿ ಅವರಿಗೆ ಸದಸ್ಯತ್ವ ಕಾರ್ಡ್ ನೀಡುವ ಮೂಲಕ ಗಣ್ಯರು ಚಾಲನೆ ನೀಡಿದರು. ಭಾರತದ ಗ್ರಂಥಾಲಯ ಚಳವಳಿಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅನೇಕ ಓದುಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘35 ಸಾವಿರ ಪುಸ್ತಕ 5500 ಓದುಗರು’

ಜಿಲ್ಲಾ ಮುಖ್ಯ ಗ್ರಂಥಪಾಲಕಿ ಸುರೇಖಾ ಮಾತನಾಡಿ ‘ಪ್ರಸ್ತುತ ಗ್ರಂಥಾಲಯದಲ್ಲಿ 35 ಸಾವಿರ ಪುಸ್ತಕಗಳಿದ್ದು 5500 ಓದುಗ ಸದಸ್ಯರಿದ್ದಾರೆ. 7 ದಿನಗಳ ಗ್ರಂಥಾಲಯ ಸಪ್ತಾಹದ ಸಂದರ್ಭ ಮತ್ತಷ್ಟು ಸದಸ್ಯರನ್ನು ನೋಂದಣಿ ಮಾಡಿಸಿಕೊಳ್ಳುವ ಗುರಿಯಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನದಲ್ಲಿ ಜಿಲ್ಲೆಯಾದ್ಯಂತ 10 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.