ಮಡಿಕೇರಿ: ಸಾಹಿತ್ಯ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಒಂದರ ಅಂತಃಸ್ವರೂಪ ಇನ್ನೊಂದರಲ್ಲಿ ವ್ಯಕ್ತವಾಗುವುದರಿಂದ ಒಂದು ಇನ್ನೊಂದಕ್ಕೆ ಪೂರಕವಾಗಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದರು.

ನಗರದ ರೆಡ್ ಬ್ರಿಕ್ಸ್ ಸಭಾಂಗಣದಲ್ಲಿ ಸಮರ್ಥ ಕನ್ನಡಿಗರು ಮತ್ತು ದಿ.ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ಜಂಟಿಯಾಗಿ ಈಚೆಗೆ ಆಯೋಜಿಸಿದ್ದ ಕನ್ನಡ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವದ ನಾನಾ ದೇಶಗಳಲ್ಲಿ ಭಾರತ ಇಂದು ವಿಜೃಂಭಿಸಲು ಪ್ರಮುಖ ಕಾರಣವೇ ನಮ್ಮ ಸಂಸ್ಕೃತಿಯಾಗಿದೆ. ಲಿಪಿಯ ಮೂಲಕ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಕಲೆಯನ್ನು ಮನುಷ್ಯ ರೂಢಿಸಿಕೊಂಡದ್ದು ಸಂಸ್ಕೃತಿಯ ವಿಕಾಸದಲ್ಲಿ ಬಹು ದೊಡ್ಡ ಹೆಜ್ಜೆಯಾಗಿದೆ. ನಮ್ಮ ಭಾಷೆ ಸಂಸ್ಕೃತಿ ಬೆಳೆಯಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು’ ಎಂದರು.

ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿದ ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಮಾತನಾಡಿ, ‘ಕೊಡಗು ಮತ್ತು ಮುಂಬೈ ನಡುವಿನ ಬಾಂಧವ್ಯ ಬಹಳ ಹಳೆಯದು. ಅದಕ್ಕೆ ಕನ್ನಡದ ಮೊದಲ ಗ್ರಂಥ ಕವಿರಾಜಮಾರ್ಗದಲ್ಲೇ ಆಧಾರ ಇದೆ. ಈ ಕಾರ್ಯಕ್ರಮ ಬಾಂಧವ್ಯದ ಬೆಸುಗೆಗೊಂದು ಸಂಕೇತವಾಗಿದೆ’ ಎಂದು ಹೇಳಿದರು.

ಹಿರಿಯ ಲೇಖಕ ಕಿಗ್ಗಾಲು ಗಿರೀಶ್ ಅವರ ಕೆಲವು ರಚನೆಗಳನ್ನು ಸುಬ್ರಾಯ ಸಂಪಾಜೆ ಗಮಕ ರೂಪದಲ್ಲಿ ಹಾಡಿದರು.

ಜಾನಪದ ಪರಿಷತ್ತಿನ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ‘ಕನ್ನಡಿಗರು ದೇಶದ ಯಾವುದೇ ಭಾಗದಲ್ಲಿದ್ದರೂ, ಕನ್ನಡ ಭಾಷೆಗೆ ಅವರೆಲ್ಲರ ಬಾಂಧವ್ಯ ಬೆಸೆಯುವ ಶಕ್ತಿಯಿದೆ. ಭಾಷೆ ಎಂಬುದು ಭಾವನೆಗಳನ್ನು ಬೆಸೆಯುವ ಕೊಂಡಿಯಂತಿದೆ. ಮುಂಬೈನ ಕನ್ನಡ ಪರ ಸಂಸ್ಥೆಯೊಂದು ದೂರದ ಮಡಿಕೇರಿಯಲ್ಲಿ ಕನ್ನಡ ಹಬ್ಬಕ್ಕೆ ಸಹಯೋಗ ನೀಡಿರುವುದೇ ಈ ಬೆಸುಗೆಗೆ ಸಾಕ್ಷಿಯಾಗಿದೆ’ ಎಂದು ಶ್ಲಾಘಿಸಿದರು.

ಶ್ರೀದೇವಿ ಸಿ.ರಾವ್ ಅವರು ತನ್ನ ದಿ. ಪತಿ ಚಂದ್ರಶೇಖರ ರಾವ್ ಹೆಸರಲ್ಲಿ ಟ್ರಸ್ಟ್ ಪ್ರಾರಂಭಿಸಿ ಆ ಮೂಲಕ ಮುಂಬೈನಲ್ಲಿ ಸಾಹಿತ್ಯಾಸಕ್ತರೊಂದಿಗೆ ವಿವಿಧ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಕೊಡಗಿಗೆ ಹೆಮ್ಮೆಯಾಗಿದೆ ಎಂದು ಹೇಳಿದರು.

ಟ್ರಸ್ಟ್ನ ಮುಖ್ಯಸ್ಥೆ ಶ್ರೀದೇವಿ ಸಿ. ರಾವ್ ಮಾತನಾಡಿ, ‘ಕನ್ನಡ ಸಾಹಿತ್ಯ ಸೇವೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತಮ್ಮ ಕೈಲಾದ ಸೇವೆಯನ್ನು ಪತಿ ಚಂದ್ರಶೇಖರ ರಾವ್ ಸ್ಮರಣಾರ್ಥ ಕೈಗೊಳ್ಳಲಾಗುವುದು’ ಎಂದರು.

‘ಹರಟೆ’ ಕೃತಿಯ ಬಗ್ಗೆ ಮುಂಬೈನ ಲೇಖಕಿ ಕುಸುಮಾ ಮಾತನಾಡಿದರೆ, ‘ನುಡಿ ತೇರು’ ಕೃತಿಯ ಬಗ್ಗೆ ಮಂಡ್ಯದ ಲೇಖಕಿ ಶ್ವೇತಾ ಮಾತನಾಡಿದರು. ವೇದಿಕೆಯಲ್ಲಿ ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ನ ಉಪಾಧ್ಯಕ್ಷ ಪ್ರತಾಪ್, ಕೊಡಗಿನ ಸಮರ್ಥ ಕನ್ನಡಿಗರು ಸಂಸ್ಥೆಯ ಪ್ರಧಾನ ಸಂಚಾಲಕಿ ಜಯಲಕ್ಷ್ಮಿ ಇದ್ದರು.

ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕರಾದ ಚಿತ್ರಾ ಆರ್ಯನ್, ಅರ್ಪಿತಾ ಸಂದೀಪ್ ಮತ್ತು ಶಾಂತಿ ಅಚ್ಚಯ್ಯ, ಸವಿತಾ ರಾಕೇಶ್, ಕಡ್ಲೇರ ತುಳಸಿ ಮೋಹನ್, ಮೂರ್ನಾಡಿನ ಸೌಮ್ಯ ಭಟ್, ‘ಶಿವ ತಾಂಡವ’ ನೃತ್ಯ ಪ್ರದರ್ಶಿತವಾಯಿತು. ಜನನಿ ಮತ್ತು ತಂಡದ ಆಕರ್ಷಕ ಕೋಲಾಟ ಪ್ರದರ್ಶನ ಜನಮನ ಮನಸೂರೆಗೊಂಡಿತು. ಶ್ರೀರಕ್ಷಾ ಪ್ರಭಾಕರ್ ಗಾಯನ ಪ್ರೇಕ್ಷಕರನ್ನು ಮನರಂಜಿಸಿತು. ಅವನಿಕಾ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಗೋಪಾಲ ತ್ರಾಸಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಲೇಖಕಿ ಸ್ಮಿತಾ ಅಮೃತರಾಜ್ ಕಾವ್ಯ ರಚನೆಯ ಬಗ್ಗೆ ಮಾತನಾಡಿ ಕವಿತೆ ವಾಚಿಸಿದರು. 10 ಕವಿಗಳು ಭಾಗವಹಿಸಿದ್ದ ಕವಿಗೋಷ್ಠಿಯನ್ನು ಕೃಪಾ ದೇವರಾಜ್ ನಿರ್ವಹಿಸಿದರು.

ಸಾಧಕರಿಗೆ ಸನ್ಮಾನ

ಕನ್ನಡ ಸೇವೆ ಹಾಗೂ ನಿರೂಪಣಾ ಕೌಶಲ್ಯಕ್ಕಾಗಿ ಮಡಿಕೇರಿಯ ಮುನೀರ್ ಅಹಮ್ಮದ್ ಅವರಿಗೆ ಸಮರ್ಥ ಕನ್ನಡಿಗರು ಸಂಸ್ಥೆ ‘ವಾಗ್ಭೂಷಣ’ ಪುರಸ್ಕಾರ ನೀಡಿ ಗೌರವಿಸಿತು. ಸಮಾಜ ಸೇವೆಗಾಗಿ ಪುಷ್ಪಾ ಕೃಷ್ಣಾನಂದ ಶೇಟ್ ಅವರಿಗೆ ‘ಸಮಾಜ ಸೇವಾ ರತ್ನ’ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗೋಪಾಲ ತ್ರಾಸಿ ಅವರಿಗೆ ‘ಕನ್ನಡ ಕಲಾ ರತ್ನ’ ಶಿಕ್ಷಣ ಮತ್ತು ಸಮಾಜಸೇವೆಗಾಗಿ ಶ್ರೀದೇವಿ ಸಿ ರಾವ್ ಅವರಿಗೆ ಸಮಾಜ ಸೇವಾ ರತ್ನ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕುಸುಮಾ ಅವರಿಗೆ ‘ಕನ್ನಡ ರತ್ನ’ ಚಿತ್ರಕಲೆಯಲ್ಲಿ ರಾಜ್ಯಮಟ್ಟದ ಸಾಧನೆಗೈದ ಸಾತ್ವಿಕ್ ಅಣ್ವೇಕರ್ ಅವರಿಗೆ ‘ಉದಯ ರವಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಬಡಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.