ಮಡಿಕೇರಿ: ಇಲ್ಲಿ ನಡೆದ ‘ಬೆಳಕಿನ ದಸರೆ’ ನೂರಾರು ಮಂದಿ ವ್ಯಾಪಾರಸ್ಥರಲ್ಲೂ ‘ಬೆಳಕು’ ಮೂಡಿಸಿತು. ಹೊರಜಿಲ್ಲೆ, ಹೊರರಾಜ್ಯಗಳಿಂದ ಬಂದಿದ್ದ ಅನೇಕ ಮಂದಿ ವ್ಯಾಪಾರಸ್ಥರು ರಸ್ತೆಬದಿಯಲ್ಲೇ ಭರ್ಜರಿ ವ್ಯಾಪಾರ ನಡೆಸಿದರು. ಒಂದಿಷ್ಟು ಹಣ ಸಂಪಾದಿಸಿ ತಮ್ಮ ತಮ್ಮ ಊರುಗಳತ್ತ ತೆರಳಿದರು.

ಈ ದೃಶ್ಯಗಳಿಗೆ ಕಳೆದೊಂದು ವಾರದಿಂದ ನಡೆದ ಮಡಿಕೇರಿ ದಸರೆ ಕಾರಣವಾಯಿತು. ಕೇವಲ ಕರಗೋತ್ಸವ, ಅದ್ದೂರಿ ದಶಮಂಟಪಗಳ ಶೋಭಾಯಾತ್ರೆಗಷ್ಟೇ ಮಡಿಕೇರಿ ದಸರೆ ಹೆಸರಾಗಿಲ್ಲ. ಬದಲಿಗೆ, ದೇಶದಲ್ಲೇ ವ್ಯಾಪಾರಿಗಳ ಗಮನ ಸೆಳೆದಿದೆ ಎಂಬುದಕ್ಕೆ ದಸರೆಯ ಅವಧಿಯಲ್ಲಿ ಇಲ್ಲಿಗೆ ಬಂದಿದ್ದ ಹೊರರಾಜ್ಯದ ವ್ಯಾಪಾರಿಗಳೇ ಸಾಕ್ಷಿ.

ಹೆಚ್ಚಿನವರು ಮಕ್ಕಳ ಆಟಿಕೆಗಳನ್ನು ಹೊತ್ತು ತಂದಿದ್ದರು. ಮತ್ತೆ ಹಲವರು ಚೀನಾ ದೇಶದ ಆಟಿಕೆ, ವಿವಿಧ ಬಗೆಯ ಪರಿಕರಗಳನ್ನು ವ್ಯಾಪಾರಕ್ಕೆ ತಂದಿದ್ದರು. ಅವೆಲ್ಲವೂ ಭರ್ಜರಿ ವ್ಯಾಪಾರ ಕಂಡಿತು.

ವಿಶೇಷವಾಗಿ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದ ಗಾಂಧಿ ಮೈದಾನ ಇರುವ ರಾಜಾಸೀಟ್ ರಸ್ತೆಯ ಎರಡೂ ಬದಿಯಲ್ಲಿ ಈ ಬಗೆಯ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಕಳೆದ ವರ್ಷದವರೆಗೂ ಇಲ್ಲಿ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುವುದಕ್ಕೆ ಅವಕಾಶ ನೀಡಲಾಗುತ್ತಿತ್ತು. ಸಂಚಾರ ದಟ್ಟಣೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಈ ಬಾರಿ ಅವಕಾಶ ನೀಡಿರಲಿಲ್ಲ. ಆದರೆ, ಈ ಜಾಗವನ್ನು ಹೊರರಾಜ್ಯ ಮತ್ತು ಹೊರಜಿಲ್ಲೆಯಿಂದ ವ್ಯಾಪಾರಸ್ಥರು ತುಂಬಿದ್ದರು.

ಇದರಲ್ಲಿ ಮಕ್ಕಳ ಆಟಿಕೆಗಳು, ಮನೆಯಲ್ಲಿಡಬಹುದಾದ ಗೊಂಬೆಗಳು, ಗೃಹಲಂಕಾರಿಕ ವಸ್ತುಗಳು ಇದ್ದವು. ಲೈಟ್ ಇರುವ ತಲೆಯ ಮೇಲೆ ಧರಿಸುವ ಎರಡು ಕೊಂಬುಗಳು, ಲೈಟ್ ಇರುವ ಬಲೂನ್ಗಳು ಚಿಣ್ಣರನ್ನು ಬಹುವಾಗಿ ಸೆಳೆದವು. ಮೊಬೈಲ್ ಸ್ಕ್ರೀನ್ ಅನ್ನು ‘ಮಿನಿ ಟಿವಿ’ಯಂತೆ ದೊಡ್ಡದಾಗಿ ತೋರಿಸುವ ‘ಮೊಬೈಲ್ ಸ್ಕ್ರೀನ್ ಎನ್ಲಾಜರ್’ಗಳಾದ ‘ಮೊಬೈಲ್ ಫೋನ್ ವಿಡಿಯೊ ಆ್ಯಂಪ್ಲಿಫೈಯರ್’ಗಳು ಯುವಕ, ಯುವತಿಯರನ್ನೂ ಸೆಳೆದವು.

ಕಿವಿಗೆ ಧರಿಸುವ ವಿವಿಧ ನಮೂನೆಯ ಓಲೆಗಳು, ರಿಂಗ್ಗಳು ಯುವತಿಯರಿಗೆ ಅಚ್ಚುಮೆಚ್ಚಾಗಿತ್ತು. ಮತ್ತೊಂದೆಡೆ, ದೆಹಲಿಯಿಂದ ಬಂದಿದ್ದ ವ್ಯಾಪಾರಿಯೊಬ್ಬರು ಕೇರಳದಿಂದ ತಂದಿದ್ದ ಬಟ್ಟೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದರು.

ಕೊಳಲು, ವಿವಿಧ ಶಬ್ದಗಳನ್ನು ಹೊಮ್ಮಿಸುವ ಪೀಪಿಗಳ ಮಾರಾಟವೂ ಇತ್ತು. ‘ಪೀಪಿ’ ಮಾರಾಟ ನಿಷೇಧವಾಗಿದೆಯಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವ್ಯಾಪಾರಿಯೊಬ್ಬರು, ‘ಅದು ಕರ್ಕಶ ಧ್ವನಿಯನ್ನು ದೊಡ್ಡದಾಗಿ ಹೊಮ್ಮಿಸುವ ಪೀಪಿ ಸರ್. ಈಗ ನಾವು ತಂದಿರುವುದು ಕಡಿಮೆ ಶಬ್ದ ಹೊಮ್ಮಿಸುವಂತದ್ದು’ ಎಂದು ಹೇಳಿದರು.

ಒಂದು ವಾರಕ್ಕೂ ಹೆಚ್ಚು ಕಾಲ ಮಡಿಕೇರಿಯಲ್ಲಿ ವ್ಯಾಪಾರಿಗಳು ಮಕ್ಕಳ ಆಟಿಕೆಯೇ ಹೆಚ್ಚು ಮಾರಾಟ ಚಿಣ್ಣರನ್ನು ಆಕರ್ಷಿಸಿದ ವಿವಿಧ ನಮೂನೆಯ ಬಲೂನ್ಗಳು

ಪ್ರತಿ ವರ್ಷ ಮಡಿಕೇರಿ ದಸರೆಗೆ ಬರುತ್ತೇವೆ. ನಮ್ಮ ಸಂಬಂಧಿಕರು ಮೈಸೂರು ದಸರೆಯಲ್ಲಿದ್ದಾರೆ. ಇಲ್ಲೂ ನಮಗೆ ಹೆಚ್ಚಿನ ವ್ಯಾಪಾರವಾಗುತ್ತದೆ
ರಫೀಕ್ ದೆಹಲಿಯಿಂದ ಬಂದಿದ್ದ ವ್ಯಾಪಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.