ಮಡಿಕೇರಿ: ಈಗ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕುಶಾಲನಗರ– ಪಿರಿಯಾಪಟ್ಟಣ ರಾಷ್ಟ್ರೀಯ ಹೆದ್ದಾರಿ ಪ್ಯಾಕೇಜ್–2 ಕಾಮಗಾರಿ ಆರಂಭವಾಗಿದ್ದು, ಇನ್ನೆರಡು ವರ್ಷದಲ್ಲಿ ನಾಲ್ಕುಪಥದ ರಸ್ತೆ ನಿರ್ಮಾಣವಾಗಲಿದೆ.

ಇದಕ್ಕಾಗಿ ₹ 585.54 ಕೋಟಿ ವೆಚ್ಚದಲ್ಲಿ ಕುಶಾಲನಗರದ ಬಸವನಹಳ್ಳಿಯಿಂದ ಪಿರಿಯಾಪಟ್ಟಣದ ಹೆಮ್ಮಿಗೆಯವರೆಗೆ ಒಟ್ಟು 22.07 ಕಿ.ಮೀ ಉದ್ದದ ರಸ್ತೆ ನಿರ್ಮಾಣವಾಗಲಿದೆ. ಈ ರಸ್ತೆಯಿಂದ ಬೆಂಗಳೂರಿಗೆ ತೆರಳುವವರು ಸರಾಗವಾಗಿ ಮಾತ್ರವಲ್ಲ ವೇಗವಾಗಿ ತೆರಳಬಹುದು. ಇದರಿಂದ ಪ್ರಯಾಣದ ಅವಧಿಯೂ ಕಡಿಮೆಯಾಗಲಿದೆ. ಆದರೆ, ಈ ದೊಡ್ಡದಾದ ರಸ್ತೆಯೇ ಮುಂದೊಂದು ದಿನ ಮಡಿಕೇರಿ– ಸುಂಟಿಕೊಪ್ಪದ ನಿವಾಸಿಗಳಿಗೆ ಪೆಡಂಭೂತವಾಗಿ ಕಾಡುವ ಸಾಧ್ಯತೆಗಳು ಗೋಚರಿಸುತ್ತಿವೆ. ಇದರ ನಿವಾರಣೆಗೆ ಕೇಂದ್ರ ಸರ್ಕಾರ ತನ್ನ ಬಜೆಟ್ನಲ್ಲಿ ಈಗಲೇ ದೂರದೃಷ್ಟಿಯ ಯೋಜನೆಯನ್ನು ಸಿದ್ಧಪಡಿಸಬೇಕಿದೆ.

ಈಗ ಇರುವ 2 ಪಥದ ಹೆದ್ದಾರಿಯಲ್ಲೇ ಲಕ್ಷದಷ್ಟು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿ ವಾರಾಂತ್ಯ, ಕ್ರಿಸ್ಮಸ್, ದಸರಾ ರಜೆ, ವರ್ಷಾಂತ್ಯ ಹಾಗೂ ಬೇಸಿಗೆ ರಜೆಯ ಅವಧಿಯಲ್ಲಿ ಸ್ಥಳೀಯರು ಮನೆಯಿಂದ ಹೊರಗೆ ಬರಲಾರದಷ್ಟು ಸಂಚಾರದಟ್ಟಣೆ ಉಂಟಾಗುತ್ತಿದೆ. ಇನ್ನು 2 ಪಥದ ಹೆದ್ದಾರಿ 4 ಪಥವಾದರೆ ಹೆಚ್ಚಿನ ಸಂಖ್ಯೆಯಲ್ಲಿ ಮಾತ್ರವಲ್ಲ ಭಾರಿ ವೇಗದಲ್ಲಿ ವಾಹನಗಳು ಕೊಡಗು ಜಿಲ್ಲೆಗೆ ಬರುತ್ತವೆ. ಆದರೆ, ಬಸವನಹಳ್ಳಿಯಿಂದ ಮುಂದಕ್ಕೆ ದ್ವಿಪಥದ ಕಿರಿದಾದ ರಸ್ತೆಯಲ್ಲಿ ಅವು ಸಾಗಬೇಕಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ.

ಇದರ ನಿವಾರಣೆಗೆ ಈ ದ್ವಿಪಥದ ಹೆದ್ದಾರಿಯ ವಿಸ್ತರಣೆ ಪರಿಸರದ ದೃಷ್ಟಿಯಿಂದ ಸಾಧುವಲ್ಲ. ಆದರೆ, ಸಂಚಾರದಟ್ಟಣೆ ಉಂಟಾಗದಂತೆ ತಡೆಯಲು ಪರ್ಯಾಯ ಯೋಜನೆಗಳನ್ನು ಪರಿಸರಕ್ಕೆ ಪೂರಕವಾಗಿ ಕಾರ್ಯಗತಗೊಳಿಸಬೇಕಿದೆ. ಅದಕ್ಕೆಂದೇ ಒಂದಿಷ್ಟು ಹಣ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಮೀಸಲಿಟ್ಟರೆ ಖಂಡಿತವಾಗಿಯೂ ಮುಂದೆ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ.

ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲೇ ಮಡಿಕೇರಿಯಲ್ಲಿ ಉಂಟಾಗುವ ಸಂಚಾರದಟ್ಟಣೆಯನ್ನು ನಿಭಾಯಿಸುವುದು ಪೊಲೀಸರಿಗೆ ಕಷ್ಟಸಾಧ್ಯವಾಗಿದೆ. ಇನ್ನು ನಾಲ್ಕು ಪಥದ ಹೆದ್ದಾರಿ ಸಿದ್ದವಾದರೆ ಮತ್ತಷ್ಟು ವಾಹನದಟ್ಟಣೆ ಉಂಟಾಗುತ್ತದೆ. ಅದಕ್ಕಾಗಿ ಮಡಿಕೇರಿನಗರದಲ್ಲಿ ಸುದರ್ಶನ ವೃತ್ತದಿಂದ ಮಂಗಳೂರು ರಸ್ತೆಯವರೆಗಾದರೂ ಒಂದು ಮೇಲ್ಸೇತುವೆ ನಿರ್ಮಾಣವಾಗಬೇಕಿದೆ ಎಂದು ನಾಗರಿಕರು ಅಭಿಪ್ರಾಯಪಡುತ್ತಾರೆ. ಈ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಹಣವನ್ನು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ನಲ್ಲೆ ತೆಗೆದಿರಿಸಬೇಕಿದೆ.

ಮಡಿಕೇರಿ ನಗರದೊಳಗೆ ಬಹುಮಹಡಿ ವಾಹನ ನಿಲುಗಡೆ ತಾಣ ಇಲ್ಲ. ವಾಹನ ನಿಲುಗಡೆಗೆ ಪ್ರವಾಸಿಗರ ಇನ್ನಿಲ್ಲದ ಪರದಾಟ ಅನುಭವಿಸುತ್ತಾರೆ. ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸುವುದು ಸ್ಥಳೀಯ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದ ಕೆಲಸಗಳೇ ಆದರೂ ಕೇಂದ್ರ ಸರ್ಕಾರ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಮಡಿಕೇರಿಯನ್ನು ವಿಶೇಷವಾಗಿ ಪರಿಗಣಿಸಿ, ಯಾವುದಾದರೂ ಒಂದು ಯೋಜನೆ ವ್ಯಾಪ್ತಿಗೆ ತಂದು ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸಬೇಕು ಎಂಬುದು ಬಹುಜನರ ಒತ್ತಾಯವೂ ಆಗಿದೆ.

ದೂರದೃಷ್ಟಿಯ ಯೋಜನೆಯನ್ನು ಈಗಲೆ ಜಾರಿಗೊಳಿಸಲಿ ಕೊಡಗನ್ನು ಕೇಂದ್ರ ಸರ್ಕಾರ ವಿಶೇಷವಾಗಿ ಪರಿಗಣಿಸಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲಿ

ಈಗಲೇ ಎಚ್ಚೆತ್ತುಕೊಳ್ಳಿ ಹೆದ್ದಾರಿ ಸುಧಾರಿಸಿ ರಾಷ್ಟ್ರೀಯ ಹೆದ್ದಾರಿ 4 ಪಥವಾದ ಬಳಿಕ ಬಸವನಹಳ್ಳಿಯಿಂದ ಮಡಿಕೇರಿವರೆಗೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಅಧಿಕ. ಹಾಗಾಗಿ ಅದಕ್ಕಾಗಿ ಹೆದ್ದಾರಿ ಸುಧಾರಿಸುವಂತಹ ಸಾಧ್ಯವಿರುವ ಪರ್ಯಾಯ ಮಾರ್ಗಗಳನ್ನು ಕಂಡು ಕೊಳ್ಳಬೇಕು. ಮಾತ್ರವಲ್ಲ ಮಡಿಕೇರಿಯ ಸುದರ್ಶನ ವೃತ್ತದಿಂದ ತಾಳತ್ತಮನೆಯವರೆಗೆ ಮೇಲ್ಸೇತುವೆ ನಿರ್ಮಿಸಬೇಕು. ಆಗಮಾತ್ರ ವಾಹನದಟ್ಟಣೆಯನ್ನು ತಡೆಯಲು ಸಾಧ್ಯ. ಅದಕ್ಕಾಗಿ ಈಗಿನ ಬಜೆಟ್ನಲ್ಲೇ ಗಮನ ಹರಿಸಬೇಕು ನವೀನ್ ಅಂಬೇಕಲ್ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.