ಮಡಿಕೇರಿ: ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ಹಾಗೂ ಬೆಟ್ಟದ ಸಾಲಿನ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್‌ಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವು ಅರಳಿದ್ದು, ಬೆಟ್ಟದ ಶ್ರೇಣಿ ನೀಲಿಮಯವಾಗಿ ಕಂಗೊಳಿಸುತ್ತಿದೆ. ಸಂಘಜೀವಿಯಾಗಿ ಅರಳುವ ಹೂವು ಅಪರೂಪಕ್ಕೊಮ್ಮೆ ಅರಳಿ ಕಾಫಿ ನಾಡಿನ ಬೆಟ್ಟಗಳ ಅಂದ ಹೆಚ್ಚಿಸುತ್ತಿವೆ.

ವಾರಾಂತ್ಯ ಕರ್ಫ್ಯೂ ಕಾರಣಕ್ಕೆ ವಾರದ ಮಧ್ಯದಲ್ಲೂ ಪ್ರವಾಸಿಗರು ಬಂದು ನೀಲಿ ಬೆಟ್ಟದ ಅಂದವನ್ನು ಸವಿದು, ಸೆಲ್ಫಿ ತೆಗೆದುಕೊಂಡು
ಸಂಭ್ರಮಿಸುತ್ತಿದ್ದಾರೆ. ಹೂವು ಅರಳಿ ಒಂದು ವಾರವಾಗಿದ್ದು, ಇನ್ನೂ ಕೆಲವು ದಿನಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದು.

ಪಶ್ಚಿಮಘಟ್ಟದ ಸಾಲಿನ ಕೋಟೆಬೆಟ್ಟ, ಪುಷ್ಪಗಿರಿ, ಕುಮಾರ ಪರ್ವತದಲ್ಲಿ ಹೂವುಗಳು ಅರಳುವುದುಂಟು. ಕಳೆದ ಸೆಪ್ಟೆಂಬರ್‌ನಲ್ಲಿ ಕೋಟೆಬೆಟ್ಟದಲ್ಲಿ 7 ವರ್ಷಗಳ ಬಳಿಕ ಹೂವು ಅರಳಿ ಸೌಂದರ್ಯ ಹೊರಚೆಲ್ಲಿತ್ತು.

‘ಗುರ್ಗಿ’ ಎಂಬ ಹೆಸರುಳ್ಳ ಇದು ‘ಪ್ರೇಮದ ಹೂವು’ ಎಂದೂ ಪ್ರಸಿದ್ಧಿ. ‘ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಿದ್ದಾಗ ಮಾತ್ರ ಅರಳುತ್ತವೆ’ ಎನ್ನುತ್ತಾರೆ ಹಿರಿಯರು. ಕಾಂಡಗಳಲ್ಲಿ ಔಷಧೀಯ ಗುಣಗಳಿರುವುದು ವಿಶೇಷ. 250 ಜಾತಿಯ ನೀಲಕುರಿಂಜಿ ಪೈಕಿ 46 ಜಾತಿಯ ಹೂವುಗಳು ಭಾರತದಲ್ಲಿ ಕಂಡುಬರುತ್ತವೆ. ಕೆಲವು ಜಾತಿಯ ಹೂವುಗಳು ಪ್ರತಿ 5, 7, 12, 14 ವರ್ಷಗಳಿಗೊಮ್ಮೆ ಅರಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.