ಮಡಿಕೇರಿ- ಮೈಸೂರು ಹೆದ್ದಾರಿ ಜಲಾವೃತ: ಭಾಗಮಂಡಲ ದೇಗುಲದಲ್ಲಿ ನೀರು

ಮಡಿಕೇರಿ: ಕೊಡಗಿನಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಮೈಸೂರು- ಮಡಿಕೇರಿ ಹೆದ್ದಾರಿ ಜಲಾವೃತಗೊಂಡಿದೆ.
ಗೋಣಿಕೊಪ್ಪಲಿನ ಬಹುತೇಕ ಮನೆಗಳಿಗೆ ಲಕ್ಷ್ಮಣತೀರ್ಥ ಪ್ರವಾಹದ ನೀರು ನುಗ್ಗಿದೆ. ಕಾವೇರಿ ನೀರು, ಮೈಸೂರು- ಮಡಿಕೇರಿ ಹೆದ್ದಾರಿ ಮೇಲೆ ಹರಿಯುತ್ತಿರುವುದರಿಂದ ರಸ್ತೆ ಜಲಾವೃತಗೊಂಡಿದೆ.
ವಿರಾಜಪೇಟೆ ಪಟ್ಟಣಕ್ಕೂ ನೀರು ನುಗ್ಗಿದ್ದು ಬಹುತೇಕ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.
ಭಾಗಮಂಡಲದಲ್ಲಿ ಪ್ರವಾಹ ಸ್ಥಿತಿ ಇದೆ. ಭಗಂಡೇಶ್ವರ ದೇಗುಲದ ಒಳಕ್ಕೆ ನೀರು ನುಗ್ಗಿದೆ. ಹಲವು ಗ್ರಾಮಗಳ ಸಂಪರ್ಕಗಳ ಕಡಿತವಾಗಿದೆ. ಕರಿಕೆ - ಪಾಣತ್ತೂರು ಮಾರ್ಗದಲ್ಲಿ ಭೂಕುಸಿತವಾಗಿ ರಸ್ತೆ ಬಂದ್ ಆಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.