ಪತ್ರಿಕಾ ವಿತರಕರು ಪತ್ರಿಕೆಗಳನ್ನು ವಿಂಗಡಿಸಿಕೊಳ್ಳಲು ಪಡುತ್ತಿರುವ ಕಷ್ಟ ಕುರಿತು ಸೆ. 4ರಂದು ‘ಪ್ರಜಾವಾಣಿ’ ಪ್ರಕಟಿಸಿದ್ದ ವಿಶೇಷ ವರದಿ.
‘ಪ್ರಜಾವಾಣಿ ವರದಿ’
ಪ್ರಸ್ತಾವ ಸಭೆಯಲ್ಲಿ ಮಾತನಾಡಿದ ಕೊಡಗು ಪತ್ರಿಕಾ ಭವನದ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ಅವರು ‘ಪ್ರಜಾವಾಣಿ’ಯಲ್ಲಿ ಗುರುವಾರ ಪ್ರಕಟವಾದ ಪತ್ರಿಕಾ ವಿತರಕರಿಗೆ ಸೂಕ್ತ ಸ್ಥಳಾವಕಾಶ ಇಲ್ಲ ಎಂಬ ವರದಿಯನ್ನು ಪ್ರಸ್ತಾಪಿಸಿದರು. ‘ಮಳೆ ಗಾಳಿ ಎನ್ನದೆ ಪತ್ರಿಕಾ ವಿತರಣೆಯಲ್ಲಿ ತೊಡಗಿಸಿಕೊಂಡಿರುವ ವಿತರಕರ ಅನಕೂಲಕ್ಕಾಗಿ ನಗರದಲ್ಲಿ ‘ಪತ್ರಿಕಾ ವಿತರಕರ ಭವನ’ ನಿರ್ಮಾಣ ಅವಶ್ಯಕವಾಗಿದೆ. ಇಂತಹ ಭವನ ಇದ್ದಲ್ಲಿ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೆಲಸ ಕಾರ್ಯಗಳನ್ನು ವಿತರಕರ ಪತ್ರಿಕೆಯ ಕೆಲಸ ಕಾರ್ಯಗಳನ್ನು ಅಲ್ಲಿ ನಡೆಸಲು ಅನುಕೂಲವಾಗುತ್ತದೆ. ಈ ಕುರಿತು ‘ಪ್ರಜಾವಾಣಿ’ ಇಂದು ವರದಿ ಮಾಡಿದೆ’ ಎಂದು ತಿಳಿಸಿದರು.