ಮಡಿಕೇರಿ: ಅಲ್ಲಿ ಮಹಿಳೆಯರದ್ದೇ ಕಲರವ... ಎಲ್ಲಿ ನೋಡಿದರು ಬಣ್ಣ ಬಣ್ಣದ ಸೀರೆ ತೊಟ್ಟವರೇ... ಅವರದ್ದೇ ಹಾಡು, ಅವರದ್ದೇ ನೃತ್ಯ... ಮಡಿಕೇರಿ ದಸರಾ ಅಂಗವಾಗಿ ಭಾನುವಾರ ನಡೆದ 5ನೇ ವರ್ಷದ ಮಹಿಳಾ ದಸರಾದ ಚಿತ್ರಣವಿದು. ಮಹಿಳೆಯರು ಓಡಾಡುತ್ತಾ, ಹಾಡುತ್ತಾ, ಅಭಿನಯಿಸುವ ಮೂಲಕ ದಸರಾ ಸಂಭ್ರಮಕ್ಕೆ ಸಾಕ್ಷಿಯಾದರು.

ಆಕರ್ಷಿಸಿದ ಸ್ಪರ್ಧೆಗಳು: ರೊಟ್ಟಿ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ, ಬಾಂಬ್ ಇನ್ ದಿ ಸಿಟಿ, ಸಾಂಪ್ರದಾಯಿಕ ಉಡುಗೆಯಲ್ಲಿನ ಛದ್ಮವೇಷ ಸ್ಪರ್ಧೆ, ಲಗೋರಿ, ಚನ್ನಮಣೆ, ಹಗ್ಗಜಗ್ಗಾಟ, ಸೀರೆಗೆ ರೇಟ್ ನಿಗದಿ ಸ್ಪರ್ಧೆಗಳೂ ಆಕರ್ಷಿಸಿದವು.

ಜಾನಪದ ಗೀತೆ ಗಾಯನ ಹಾಗೂ ಏಕಪಾತ್ರಾಭಿನಯ ನಡೆಸಲಾಯಿತು. ಉತ್ಸಾಹದಿಂದ ಭಾಗವಹಿಸಿದ ಹಿರಿಯರು ನೆರೆದಿದ್ದವರ ಮನಗೆದ್ದರು.

ಮೆಹಂದಿ ಹಾಕಿಸಿಕೊಂಡರು: ಕಾರ್ಯಕ್ರಮಕ್ಕೆ ಮೆಹಂದಿ ಹಾಕಿಸಿಕೊಳ್ಳುವ ಮೂಲಕ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸೇರಿದಂತೆ ಅಧಿಕಾರಿಗಳು ಚಾಲನೆ ನೀಡಿದರು.

ವೇದಿಕೆಯಲ್ಲಿ ಜನ್ಮ ದಿನಾಚರಣೆ: ದಸರಾ ವೇದಿಕೆಯಲ್ಲೇ ವೀಣಾ ಅಚ್ಚಯ್ಯ ಅವರ ಜನ್ಮ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು.

ವಾಲಗತಾಟ್‌ಗೆ ಹೆಜ್ಜೆ:

ವಾಲಗತಾಟ್‌ಗೆ ನೂರಾರು ಮಹಿಳೆಯರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಗಮನ ಸೆಳೆದರು. ಮಹಿಳೆಯರು ಮಕ್ಕಳು ಹೆಚ್ಚಿನ ಮೆರುಗನ್ನು ನೀಡಿದರು. ಮಹಿಳಾ ಮತ್ತು ಮಕ್ಕಳ ಇಲಾಖೆ ನೇತೃತ್ವದಲ್ಲಿ ವಿವಿಧ ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳಿ 50ಕ್ಕೂ ಹೆಚ್ಚು ಸಂತೆ ಮಳಿಗೆಗಳು ಮೈದಾನದಲ್ಲಿ ಕಂಡು ಬಂದವು.

ಮಳಿಗೆಗಳನ್ನು ಸಿರಿಧಾನ್ಯ ಉತ್ಪನ್ನ, ಕ್ಯಾಂಟೀನ್, ಗೃಹೋಪಯೋಗಿ ಹಾಗೂ ಅಲಂಕಾರಿಕ ವಸ್ತುಗಳು, ವಿವಿದ ಬಟ್ಟೆಗಳು ರೇಷ್ಮೆ ಸೀರೆ ಸೇರಿದಂತೆ ಹಣ್ಣು ತರಕಾರಿಗಳು, ದವಸ ದಾನ್ಯ ಸಾಮಗ್ರಿ, ವೈನ್‌ಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ, ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಪತ್ರಕರ್ತೆ ಸವಿತಾ ರೈ, ಕನ್ನಂಡ ಕವಿತಾ ಬೊಳ್ಳಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಅರುಂಧತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.