ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಕಳೆಗಟ್ಟಿದ ಸಂಕ್ರಾಂತಿ ಸಂಭ್ರಮ

ಎಳ್ಳು ಬೆಲ್ಲ ಬೀರಿ ಶುಭಾಶಯ ಕೋರಿದ ಜನರು, ಮಡಿಕೇರಿಯ ಮುತ್ತಪ್ಪ ದೇಗುಲದಲ್ಲಿ ವಿಶೇಷ ಪೂಜಾ ಉತ್ಸವ
Published 15 ಜನವರಿ 2024, 15:24 IST
Last Updated 15 ಜನವರಿ 2024, 15:24 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂತಸ, ಸಂಭ್ರಮಗಳಿಂದ ಸಂಕ್ರಾಂತಿ ಹಬ್ಬವನ್ನು ಸೋಮವಾರ ಜನರು ಆಚರಿಸಿದರು. ಮಕ್ಕಳು, ಯುವತಿಯರಿಗೆ ಎಳ್ಳು ಬೆಲ್ಲ ಬೀರುವ ಸಂಭ್ರಮ ಒಂದೆಡೆ, ಮಹಿಳೆಯರಿಗೆ ಸಿಹಿ ಅಡುಗೆ ತಯಾರಿಸುವ ಸಡಗರ ಮತ್ತೊಂದೆಡೆ, ಧಾರ್ಮಿಕ ಶ್ರದ್ಧೆಯುಳ್ಳವರಿಗೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುವ ಧಾವಂತ...

ಇವೆಲ್ಲವೂ ಮುಪ್ಪುರಿಗೊಂಡಂತೆ ಕಂಡು ಬಂದಿದ್ದು ಕೊಡಗು ಜಿಲ್ಲೆಯ ಸಂಕ್ರಾಂತಿ ಸಂಭ್ರಮದಲ್ಲಿ.

ಮಡಿಕೇರಿಯ ಮುತ್ತಪ್ಪಸ್ವಾಮಿ ದೇಗುಲದಲ್ಲಿ ಸೋಮವಾರ ಸಂಕ್ರಾಂತಿ ಪ್ರಯುಕ್ತ ಕುಟ್ಟಿಚಾತನ್ ಮುತ್ತಪ್ಪ ಗುಳಿಗ ದೇವರ ವೆಳ್ಳಾಟಗಳು ವಿಜೃಂಭಣೆಯಿಂದ ನಡೆದವು
ಮಡಿಕೇರಿಯ ಮುತ್ತಪ್ಪಸ್ವಾಮಿ ದೇಗುಲದಲ್ಲಿ ಸೋಮವಾರ ಸಂಕ್ರಾಂತಿ ಪ್ರಯುಕ್ತ ಕುಟ್ಟಿಚಾತನ್ ಮುತ್ತಪ್ಪ ಗುಳಿಗ ದೇವರ ವೆಳ್ಳಾಟಗಳು ವಿಜೃಂಭಣೆಯಿಂದ ನಡೆದವು

ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆಲವು ಯುವತಿಯರು, ಮಕ್ಕಳು ಎಳ್ಳು ಬೆಲ್ಲ ಬೀರಿ ಹಬ್ಬ ಆಚರಿಸಿದರು. ಮನೆಯ ಮುಂದೆ ಆಕರ್ಷಕವಾದ ರಂಗೋಲಿ ಹಾಕಿದ್ದು ಬಹುತೇಕ ಕಡೆ ಕಂಡು ಬಂತು. ಸಂಜೆಯಾಗುತ್ತಿದ್ದಂತೆ ಹೊಸ ಬಟ್ಟೆ ತೊಟ್ಟ ಮಕ್ಕಳು, ಯುವತಿಯರು ಅಕ್ಕಪಕ್ಕದ ಮನೆಯವರಿಗೆ, ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಿಗೆ ಹೋಗಿ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಹಾಗೂ ಕಬ್ಬುಗಳನ್ನು ನೀಡಿ ಶುಭ ಹಾರೈಸಿದರು.

ಮಡಿಕೇರಿಯ ಮುತ್ತಪ್ಪಸ್ವಾಮಿ ದೇಗುಲದ ಆವರಣದಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಸೋಮವಾರ ಸಂಕ್ರಾಂತಿ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪೂಜೆ ಸಲ್ಲಿಸಿದರು
ಮಡಿಕೇರಿಯ ಮುತ್ತಪ್ಪಸ್ವಾಮಿ ದೇಗುಲದ ಆವರಣದಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಸೋಮವಾರ ಸಂಕ್ರಾಂತಿ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪೂಜೆ ಸಲ್ಲಿಸಿದರು

ಮನೆಗಳಲ್ಲಿ ಸಿಹಿ ಪೊಂಗಲ್, ಕಿಚಡಿ, ಪಾಯಸ ಸೇರಿದಂತೆ ವಿವಿಧ ಬಗೆಯ ವಿಶೇಷ ಅಡುಗೆಗಳನ್ನು ತಯಾರಿಸಿ, ಸವಿದರು. ಜತೆಗೆ, ಬಂಧು, ಬಾಂಧವರನ್ನೂ ಆಹ್ವಾನಿಸಿ ಔತಣ ನೀಡಿದರು.

ಮಡಿಕೇರಿಯ ಮುತ್ತಪ್ಪಸ್ವಾಮಿ ದೇಗುಲದ ಆವರಣದಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಸೋಮವಾರ ಸಂಕ್ರಾಂತಿ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪೂಜೆ ಸಲ್ಲಿಸಿದರು
ಮಡಿಕೇರಿಯ ಮುತ್ತಪ್ಪಸ್ವಾಮಿ ದೇಗುಲದ ಆವರಣದಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಸೋಮವಾರ ಸಂಕ್ರಾಂತಿ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪೂಜೆ ಸಲ್ಲಿಸಿದರು

ಇನ್ನು ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಅಯ್ಯಪ‍್ಪಸ್ವಾಮಿ ದೇಗುಲಗಳಲ್ಲಿ ವಿಶೇಷ ಆರಾಧನೆಗಳು ಜರುಗಿದವು.

ಮಡಿಕೇರಿಯ ಮುತ್ತಪ್ಪಸ್ವಾಮಿ ದೇಗುಲದಲ್ಲಿ ಸೋಮವಾರ ಸಂಕ್ರಾಂತಿ ಪ್ರಯುಕ್ತ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು
ಮಡಿಕೇರಿಯ ಮುತ್ತಪ್ಪಸ್ವಾಮಿ ದೇಗುಲದಲ್ಲಿ ಸೋಮವಾರ ಸಂಕ್ರಾಂತಿ ಪ್ರಯುಕ್ತ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು

ಮಡಿಕೇರಿಯ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಅಯ್ಯಪ‍್ಪ ದೇವಾಲಯವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಸೋಮವಾರ ಬೆಳಿಗ್ಗೆಯಿಂದಲೇ ನಿರ್ಮಾಲ್ಯ ವಿಸರ್ಜನೆ, ಉಷಾ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ನಂತರ, ಮುತ್ತಪ್ಪ ಹಾಗೂ ಸುಬ್ರಹ್ಮಣ್ಯ ದೇವರ ಪೂಜೆಗಳೊಂದಿಗೆ ವಿವಿಧ ಅಭಿಷೇಕಗಳು ಜರುಗಿದವು. ನಂತರ, ಕುಟ್ಟಿಚಾತನ್, ಮುತ್ತಪ್ಪ, ಗುಳಿಗ ದೇವರ ವೆಳ್ಳಾಟಂ ವಿಜೃಂಭಣೆಯಿಂದ ನಡೆಯಿತು. ಅಯ್ಯಪ್ಪ ದೇವರ ಅಲಂಕಾರ ಪೂಜೆ, ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ನಡೆದು, ಮಹಾಮಂಗಳಾರತಿ, ಪ್ರಸಾದ ವಿತರಣೆಗಳು ನಡೆದವು. ಈ ಬಾರಿ ತುಲಾಭಾರ ಸೇವೆ ಏರ್ಪಡಿಸಿದ್ದು ವಿಶೇಷ ಎನಿಸಿದೆ. ಸಂಜೆ ಭಜನೆ, ಅಲಂಕಾರ ಪೂಜೆ, ಪಡಿಪೂಜೆ, ದೀಪಾರಾಧನೆಗಳ ಬಳಿಕ ಪ್ರಸಾದ ವಿತರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT