ನಾಪೋಕ್ಲು: ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ಉತ್ಸವಕ್ಕೆ ಭರದ ಸಿದ್ಧತೆಗಳಾಗುತ್ತಿವೆ. ವಾರ್ಷಿಕ ಉತ್ಸವದ ಅಂಗವಾಗಿ ಸಾಂಪ್ರದಾಯಿಕ ಆಚರಣೆಗಳಿಗೆ ದೇಗುಲ ಸಿದ್ಧಗೊಳ್ಳುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಉತ್ಸವದ ಅಂಗವಾಗಿ ನಾಯಿ ಹರಕೆ ಸಲ್ಲಿಸಲಾಗುತ್ತದೆ.

ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಣ್ಣಿನ ನಾಯಿಯ ಆಕೃತಿಗಳ ಹರಕೆ ಹೊತ್ತವರು ಸೇರಿ ಸಂಬಂಧಪಟ್ಟವರು ಹರಕೆಯ ನಾಯಿಗಳ ಪ್ರತಿಕೃತಿಗಳನ್ನು ಸ್ವೀಕರಿಸಿ ದೇವಾಲಯಕ್ಕೆ ಹೊತ್ತುತಂದು, ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಆಚರಣೆ ಕೈಗೊಳ್ಳುವರು. ಹರಕೆಯ ನಾಯಿ ಒಪ್ಪಿಸುವ ಒಂದು ದಿನ ಮುಂಚಿತವಾಗಿ ಸಂಬಂಧಿಸಿದ ಕುಟುಂಬದ ಪುರುಷರು ದೇವಾಲಯದ ಸಮೀಪ ಕಲ್ಲಿನ ಒಲೆ ನಿರ್ಮಿಸಿ ಸೌದೆ ಸಂಗ್ರಹಿಸಿಡುವರು. ನಿರ್ದಿಷ್ಟ ಕುಟುಂಬದ ಮಹಿಳೆಯರು ದೇವಾಲಯದ ಸಮೀಪದ ಮನೆಯಲ್ಲಿ ತಂಗಿದ್ದು ಮುಂಜಾನೆ ತಣ್ಣೀರು ಸ್ನಾನದೊಂದಿಗೆ ರೊಟ್ಟಿ ತಯಾರಿಸುವುದರೊಂದಿಗೆ ವಿವಿಧ ಸಾಂಪ್ರದಾಯಿಕ ಆಚರಣೆಗಳು ನೆರವೇರಲಿವೆ.

ಪ್ರತಿವರ್ಷ ಡಿಸೆಂಬರ್ 18-19ರಂದು ಮಕ್ಕಿಶಾಸ್ತಾವು ದೇವಾಲಯದ ವಾರ್ಷಿಕ ಉತ್ಸವ ನಡೆಯುತ್ತದೆ. ಅದಕ್ಕೂ ಮುನ್ನ ಸಂಕ್ರಮಣದ ದಿನ ಹರಕೆಯ ನಾಯಿಗಳನ್ನು ಒಪ್ಪಿಸಲಾಗುತ್ತದೆ. ಪಟ್ಟಣಕ್ಕೆ ಸಮೀಪದಲ್ಲಿರುವ ಬೇತು ಗ್ರಾಮದ ಶಾಸ್ತಾವು ದೇವಾಲಯದ ಮೆಟ್ಟಿಲುಗಳನ್ನೇರಿ ಎತ್ತರದ ಸಮತಟ್ಟು ಸ್ಥಳಕ್ಕೆ ಬಂದರೆ ಸುಮಾರು ಐದು ಅಡಿ ಎತ್ತರದ ವೃತ್ತಾಕಾರದ ಕಟ್ಟೆ ಕಾಣಸಿಗುತ್ತದೆ. ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿ ಶಾಸ್ತಾವು ದೇವರು. ದೇವರಿಗೆ ಕೊಡೆ ಹಿಡಿದಂತೆ ತೋರುವ ಹಲಸಿನ ಮರವಿದೆ. ಸುತ್ತಲೂ ಸಹಸ್ರಾರು ಹರಕೆಯ ನಾಯಿಗಳು ವೀಕ್ಷಕರನ್ನು ಅಚ್ಚರಿಯಲ್ಲಿ ಮುಳುಗಿಸುತ್ತವೆ. ನಿಸರ್ಗದ ಮಡಿಲಿನಲ್ಲಿರುವ ಈ ದೇಗುಲದಲ್ಲಿ ವರ್ಷಕ್ಕೆರಡು ಬಾರಿ ಆಕರ್ಷಕ ಹಬ್ಬ ಜರುಗುತ್ತದೆ. ಅದೇ ಇಲ್ಲಿನ ಪ್ರಮುಖ ಆಕರ್ಷಣೆ. ಅಧಿಕ ಭಕ್ತರು ಸೇರಿ ಸಂಭ್ರಮಿಸುವ ಭಿನ್ನ ಆಚರಣೆಗಳ ಹಬ್ಬಗಳಲ್ಲಿ ಮುಖ್ಯ ಹಬ್ಬವು ಮೇ ತಿಂಗಳಿನಲ್ಲಿ ಜರುಗಿದರೆ ಕಿರುಹಬ್ಬವು ಡಿಸೆಂಬರ್ನಲ್ಲಿ ನಡೆಯುತ್ತದೆ. ಡಿಸೆಂಬರ್ ತಿಂಗಳ ಹಬ್ಬದಲ್ಲಿ ನಾಯಿ ಹರಕೆ ವಿಶೇಷ.

ಧನುಸಂಕ್ರಮಣದ ದಿನ ನಾಯಿ ಹಾಕುವ ಕಾರ್ಯಕ್ರಮ ಜರುಗುತ್ತದೆ. ಹಬ್ಬಕ್ಕಿಂತ ಒಂದು ತಿಂಗಳು ಮೊದಲು ವೃಶ್ಚಿಕ ಮಾಸದಲ್ಲಿ ಹರಕೆಯ ನಾಯಿಗಳನ್ನು ತಯಾರಿಸಲಾಗುತ್ತದೆ. ಒಂದು ಜೊತೆ ನಾಯಿ ತಯಾರಿಸಲು ₹400 ನೀಡಬೇಕು. ಸಾಂಪ್ರದಾಯಿಕ ಆಚರಣೆಯ ಬಳಿಕ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ನಾಯಿ ಹರಕೆ ಸಲ್ಲಿಸುತ್ತಾರೆ. ಇದಕ್ಕೂ ಮೊದಲು ಗ್ರಾಮದ ಕುಟುಂಬಸ್ಥರು ನಿರ್ದಿಷ್ಟವಾಗಿ ನಾಯಿ ಹರಕೆ ಸಲ್ಲಿಸುವ ಪದ್ಧತಿಯಿದೆ. ದೇವಾಲಯದ ಸುತ್ತಲೂ ಹರಕೆ ರೂಪದಲ್ಲಿ ಸಲ್ಲಿಸಿದ ನಾಯಿಗಳ ಪ್ರತಿಕೃತಿ ಈ ತಾಣಕ್ಕೆ ವಿಶಿಷ್ಟ ಮೆರುಗು ನೀಡಿದೆ.

ಮೂರು ದಶಕಗಳಿಗೂ ಹಿಂದಿನಿಂದ ನಾಯಿ ತಯಾರಿಸುತ್ತಿದ್ದು, ಸಮೀಪದ ಬಲಮುರಿ ಗ್ರಾಮದಿಂದ ಮಣ್ಣು ತರಲಾಗುತ್ತಿದೆ. ತಯಾರಿಸಿದ ಮೂರ್ತಿಗಳನ್ನು ನೆರಳಿನಲ್ಲಿ ಒಣಗಿಸಬೇಕು. ಸಂಪ್ರದಾಯದ ಪ್ರಕಾರ ಊರಿನ ಮಂದಿ 24 ನಾಯಿಗಳನ್ನು ದೇವಾಲಯದಲ್ಲಿ ಒಪ್ಪಿಸುತ್ತಾರೆ. ಇತ್ತೀಚೆಗೆ ನಾಯಿ ತಯಾರಿಸಲು ಅಗತ್ಯವಾದ ನುಣುಪು ಮಣ್ಣು ಸಿಗುತ್ತಿಲ್ಲ ಎಂದು ಕೊಳಕೇರಿಯ ನಾಯಿ ತಯಾರಕ ಡಿ.ಆರ್.ಶಂಕರ್ ಹೇಳಿದರು.

ಧರ್ಮಸ್ಥಳದಿಂದ ತಂದ ಹರಕೆಯ ನಾಯಿ

ಕೆಲವು ವರ್ಷಗಳ ಹಿಂದೆ ಸುಮಾರು ₹1.20 ಲಕ್ಷ ವೆಚ್ಚದಲ್ಲಿ ಧರ್ಮಸ್ಥಳದಿಂದ ಹೊಸದಾಗಿ ಹರಕೆಯ ನಾಯಿಗಳನ್ನು ತರಿಸಲಾಗಿದ್ದು ದೇವಾಲಯದಲ್ಲಿ ಇರಿಸಲಾಗಿದೆ. ಭಕ್ತರು ಈ ಹಿಂದೆ ಸಲ್ಲಿಸಿದ್ದ ಹರಕೆಯ ನಾಯಿಗಳನ್ನು ಉತ್ಸವದ ಸಂದರ್ಭದಲ್ಲಿ ಬದಲಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಜೆಟ್ಟೀರ ಶ್ಯಾಂ ಬೋಪಣ್ಣ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.