ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತಪ್ಪ ದೇಗುಲ ಲೋಕಾರ್ಪಣೆ ಆರಂಭ

Published 10 ಜೂನ್ 2024, 4:23 IST
Last Updated 10 ಜೂನ್ 2024, 4:23 IST
ಅಕ್ಷರ ಗಾತ್ರ

ಸೋಮವಾರಪೇಟೆ: ಐಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮುತ್ತಪ್ಪ ದೇವರ ದೇವಾಲಯದ ಲೋಕಾರ್ಪಣೆ, ಪುನರ್ ಪ್ರತಿಷ್ಠಾಪನೆ ಉತ್ಸವ ಶನಿವಾರ ಪ್ರಾರಂಭವಾಯಿತು.

ಮುತ್ತಪ್ಪ ದೇವರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ ಕೇರಳದ ಪ್ರಸಿದ್ದ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಮಹೇಶ್, ಗೌರವಾಧ್ಯಕ್ಷ ಮಚ್ಚಂಡ ಬೆಳ್ಳಿಯಪ್ಪ, ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್, ಖಜಾಂಚಿ ರಾಧಾಕೃಷ್ಣ, ಸಲಹೆಗಾರರಾದ ಎನ್.ಎ. ಪ್ರಭಾಕರ್, ನಿರ್ದೇಶಕರುಗಳಾದ ಜಿ.ಕೆ. ನವೀನ್ ಕುಮಾರ್, ಭಾಸ್ಕರ್ ಹಾಗೂ ಗ್ರಾಮಸ್ಥರು ಇದ್ದರು.

 ಭಾನುವಾರ ಸಂಜೆಯಿಂದ ವಿವಿಧ ದೇವರು ವೆಳ್ಳಾಟಂ ನಡೆಯಲಿದೆ.  ಸೋಮವಾರ ಬೆಳಿಗ್ಗೆ 3 ಗಂಟೆಯಿಂದ ಶ್ರೀ ಗುಳಿಗಪ್ಪ, ಮುತ್ತಪ್ಪ, ತಿರುವಪ್ಪ, ಕುಟ್ಟಿಚಾತನ್, ಪೋದಿ ಕೋಲ ಮತ್ತು ಗುರು ಶ್ರೀ ದರ್ಪಣ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT