ನಾಪೋಕ್ಲು: ‘ಇಗ್ಗುತ್ತಪ್ಪ ದೇವಡ ಪುತ್ತರಿ ನಮ್ಮೆ ಪೊಯಿಲೆ ಪೊಯಿಲೆ’ ಇದು ಇಲ್ಲಿಗೆ ಸಮೀಪದ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್ನಲ್ಲಿ ಭಾನುವಾರ ಕೇಳಿಬಂದ ಹುತ್ತರಿ ಕೋಲಾಟದ ಉದ್ಘೋಷಗಳು.

ಇಲ್ಲಿನ ನೂರಂಬಾಡ ಮಂದ್ನಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡ ಗ್ರಾಮಸ್ಥರು ಕೋಲಾಟದ ಸಂಭ್ರಮಕ್ಕೆ ಸಾಕ್ಷಿಯಾದರು.

ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್ನಲ್ಲಿ ಗ್ರಾಮಸ್ಥರು ಒಟ್ಟಾಗಿ ನಡೆಸಿದ ಸಾಂಪ್ರದಾಯಿಕ ‘ಪುತ್ತರಿ ಕೋಲಾಟ’ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಹಬ್ಬದ ಸಂಭ್ರಮವನ್ನು ವಿಸ್ತರಿಸಿತು. ನಾಪೋಕ್ಲು, ಬೇತು ಮತ್ತು ಕೋಕೇರಿ ಗ್ರಾಮಗಳನ್ನು ಒಳಗೊಂಡಂತೆ ನಡೆಯುವ ಐತಿಹಾಸಿಕ ನೂರಂಬಾಡ ಕೋಲ್ ಮಂದ್ನಲ್ಲಿ ಪುತ್ತರಿ ಕೋಲಾಟಕ್ಕೂ ಮುನ್ನ ಬೇತು ಮಕ್ಕಿ ಶಾಸ್ತಾವು ದೇವಾಲಯದಿಂದ ಸಂಪ್ರದಾಯದಂತೆ ತಕ್ಕ ಮುಖ್ಯಸ್ಥರು ದೇವರ ತಿರುವಾಭರಣದೊಂದಿಗೆ ಕಾಪಾಳ ವೇಷಧಾರಿಗಳು ಮತ್ತು ಕೊಂಬು ಕೊಟ್ಟ್ ವಾಲಗದೊಂದಿಗೆ ಬೆಳಿಗ್ಗೆ ಮೆರವಣಿಗೆಯ ಮೂಲಕ ನೂರಂಬಾಡ ಮಂದ್ ನತ್ತ ಹೆಜ್ಜೆ ಹಾಕಿದರು.

ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಮೆರವಣಿಗೆಯ ನಡುವೆ ಕುರುಂಬರಾಟ್ ಬನದಲ್ಲಿ ವಿಶ್ರಾಂತಿಯನ್ನು ಪಡೆದು ಮಧ್ಯಾಹ್ನ ನೂರಂಬಾಡ ಮಂದ್ಗೆ ತಿರುವಾಭರಣದೊಂದಿಗೆ ಆಗಮಿಸಿದ ಗ್ರಾಮದ ತಕ್ಕಮುಖ್ಯಸ್ಥರನ್ನು ಗ್ರಾಮದ ತಕ್ಕಮುಖ್ಯಸ್ಥರು ಶ್ರೀ ಮಹದೇವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿ ಸ್ವಾಗತಿಸಿದರು.

ಬಳಿಕ, ಪುತ್ತರಿ ಕೋಲಾಟಕ್ಕೆ ಚಾಲನೆ ದೊರಕಿತು. ನಾದಕ್ಕೆ ತಕ್ಕಂತೆ ಮೂರು ಗ್ರಾಮದ ತಕ್ಕಮುಖ್ಯಸ್ಥರು ಗ್ರಾಮಸ್ಥರು ಮಂದ್ಗೆ ಪ್ರದಕ್ಷಿಣೆ ಬಂದು ಕೋಲಾಟ ನಡೆಸಿದರು. ‘ಇಗ್ಗುತ್ತಪ್ಪ ದೇವಡ ಪುತ್ತರಿ ನಮ್ಮೆ ಪೊಯಿಲೆ ಪೊಯಿಲೆ’ ‘ಬಪ್ಪಕ ಪುತ್ತರಿ ಬಣ್ಣತೆ ಬಾತ್ ಪೊಯಿಲೆ ಪೊಯಿಲೆ, ಪೋಪಕ ಪುತ್ತರಿ ಎಣ್ಣತೆ ಪೋಚಿ ಪೊಯಿಲೆ ಪೊಯಿಲೆ....’ಉದ್ಘೋಷ ಮಂದ್ ನುದ್ದಕ್ಕೂ ಪಸರಿಸಿತು.

ಗ್ರಾಮಸ್ಥರ ಉತ್ಸಾಹ, ಹಷೋದ್ಘಾರಗಳ ನಡುವೆ ನೂರಂಬಾಡ ಮಂದ್ ಪುತ್ತರಿ ಕೋಲಾಟ ಸಂಭ್ರಮದಿಂದ ನೆರವೇರಿತು. ನಾಡ್ ಮಂದ್ನಲ್ಲಿ ದೊಡ್ಡ ಕೋಲು ಮತ್ತು ಸಣ್ಣ ಕೋಲು ಎಂದು ಎರಡು ದಿನ ಕೋಲಾಟ ನಡೆಸಿ ನಂತರ ಮಕ್ಕಿ ದೇವಾಲಯದಲ್ಲಿ ಕೋಲು ಒಪ್ಪಿಸುವ ಪದ್ಧತಿಯೊಂದಿಗೆ ಪುತ್ತರಿ ಕೋಲಾಟಕ್ಕೆ ತೆರೆ ಎಳೆಯಲಾಗುವುದು.

ಮೂರ್ನಾಡಿನಲ್ಲಿ ಮನಸೆಳೆದ ಕೋಲಾಟ:

ಸುಗ್ಗಿ ಹಬ್ಬವಾದ ಪುತ್ತರಿ ಹಬ್ಬದ ಕೋಲಾಟ ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ ಮೈದಾನದಲ್ಲಿ ಸಡಗರ ಸಂಭ್ರಮದಿಂದ ಭಾನುವಾರ ನಡೆಯಿತು.

ಆರು ಗ್ರಾಮಗಳ ಗ್ರಾಮಸ್ಥರು ಊರ ತಕ್ಕ್. ನಾಡತಕ್ಕ್ ಮುಖ್ಯಸ್ಥರೊಂದಿಗೆ ಕೊಡವ ಸಂಪ್ರದಾಯಿಕ ಉಡುಪಿನಲ್ಲಿ ಓಲಗದೊಂದಿಗೆ ಕಪಾಳ ವೇಷಧಾರಿಗಳೊಂದಿಗೆ ಮಧ್ಯಾಹ್ನ ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ಗೆ ಆಗಮಿಸಿದರು.

ಐಕೊಳ, ಬಾಡಗ, ಕಾಂತೂರು, ಕೋಡಂಬೂರು, ಮುತ್ತಾರುಮುಡಿ ಹಾಗೂ ಕಿಗ್ಗಾಲು ಗ್ರಾಮಸ್ಥರು ಒಟ್ಟಾಗಿ ಸಂಪ್ರದಾಯದಂತೆ ಮೂರು ಸುತ್ತು ಕೋಲು ಹೊಡೆದು ಸಂಭ್ರಮಿಸಿದರು. ಕಾಪಾಳ ವೇಷಧಾರಿಗಳು ನೆರೆದ ಸಾರ್ವಜನಿಕರ ಗಮನ ಸೆಳೆದರು.

ಮೂರ್ನಾಡಿನಲ್ಲಿ ಕೋಲಾಟದ ಸಂಭ್ರಮ ಸಂಪ್ರದಾಯದಂತೆ 3 ಸುತ್ತು ಕೋಲು ಹೊಡೆದು ಸಂಭ್ರಮ ಮಹದೇವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.