ಸೋಮವಾರಪೇಟೆ: ಇಲ್ಲಿನ ಜೆಸಿಐ ಭಾರತ ನಡೆಸಿಕೊಂಡು ಬರುತ್ತಿರುವ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (ನ್ಯಾಷನಲ್ ಲೆವಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಷನ್) ಮಂಗಳವಾರ ಸಂತ ಜೊಸೇಫ್‌ರ ಪದವಿ ಕಾಲೇಜಿನಲ್ಲಿ ನಡೆಯಿತು.
ತಾಲ್ಲೂಕಿನ 14 ಶಾಲೆಗಳ 700ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರ ಮಟ್ಟದ ಈ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ₹ 40 ಸಾವಿರ, ದ್ವಿತೀಯ ₹ 20 ಸಾವಿರ, ತೃತೀಯ ₹ 10 ಸಾವಿರ ಮತ್ತು ಆಕರ್ಷಕ ಟ್ರೋಫಿಯನ್ನು ಜೆಸಿಐ ಭಾರತ ನೀಡುವುದು. ರಾಜ್ಯಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ ₹ 7500, ದ್ವಿತೀಯ ₹ 5000, ತೃತೀಯ ₹ 3000 ಮತ್ತು ಆಕರ್ಷಕ ಟ್ರೋಫಿಯನ್ನು ಜೆಸಿಐ ವಲಯ ಮಟ್ಟದಲ್ಲಿ ನೀಡಲಾಗುವುದು ಎಂದು ಪರೀಕ್ಷೆಯ ನೇತೃತ್ವ ವಹಿಸಿದ್ದ ಜೆಸಿಐ ಅಧ್ಯಕ್ಷೆ ಎಂ.ಎ. ರುಬೀನಾ ತಿಳಿಸಿದರು.
ಈ ಸಂದರ್ಭ ಜೆಸಿಐನ ಕಾರ್ಯದರ್ಶಿ ಜಗದಾಂಬಾ ಗುರುಪ್ರಸಾದ್, ಜೂನಿಯರ್ ಜೆಸಿ ಚೇರ್ ಪರ್ಸನ್ ರಿಶಾ, ಕೆ.ಎ. ಪ್ರಕಾಶ್, ವಿನುತ್ ಸುದೀಪ್, ರವಿಕುಮಾರ್, ನೆಲ್ಸನ್, ಲಿಕ್ಕಿ ವಿಕೇಶ್ ಮತ್ತು ಶಾಲೆಯ ಶಿಕ್ಷಕರು ಇದ್ದರು.