ಮೂವರು ಸ್ನೇಹಿತರ ರಕ್ಷಿಸಿ ಸಾಫ್ಟ್‌ವೇರ್‌ ಎಂಜಿನಿಯರ್ ಸಾವು

7

ಮೂವರು ಸ್ನೇಹಿತರ ರಕ್ಷಿಸಿ ಸಾಫ್ಟ್‌ವೇರ್‌ ಎಂಜಿನಿಯರ್ ಸಾವು

Published:
Updated:
Prajavani

ಸೋಮವಾರಪೇಟೆ: ಇಲ್ಲಿನ ಮಲ್ಲಳ್ಳಿ ಜಲಪಾತದಲ್ಲಿ ಭಾನುವಾರ ಮುಳುಗುತ್ತಿದ್ದ ಮೂವರನ್ನು ಸ್ನೇಹಿತರನ್ನು ರಕ್ಷಿಸಿದ ಸಾಫ್ಟ್‌ವೇರ್‌ ಎಂಜಿನಿಯರ್‌ ನೀರಿನಿಂದ ಮೇಲೆ ಬರಲು ಸಾಧ್ಯವಾಗದೇ ತಾನೇ ಪ್ರಾಣ ಬಿಟ್ಟಿದ್ದಾರೆ.

ಬೆಂಗಳೂರಿನ ಆ್ಯಕ್ಸೆಂಚರ್‌ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ಸ್ಕಂದ (25) ಮೃತಪಟ್ಟವರು. ಮೈಸೂರಿನ ವಿವೇಕಾನಂದ ನಗರದ ನಿವಾಸಿ.  

ಬೆಂಗಳೂರಿನಿಂದ 11 ಮಂದಿ ಸ್ನೇಹಿತರು ಜಲಪಾತ ವೀಕ್ಷಣೆಗೆ ಭಾನುವಾರ ಬಂದಿದ್ದರು. ಜಲಪಾತದ ತಳಭಾಗದಲ್ಲಿರುವ ‘ಮರಣಬಾವಿ’ ಎಂದೇ ಕರೆಸಿಕೊಳ್ಳುವ ಹೊಂಡದ ಸಮೀಪಕ್ಕೆ ಎಲ್ಲರೂ ತೆರಳಿದ್ದಾರೆ. ಅಲ್ಲಿ ಮೂವರು ಸೂಚನಾ ಫಲಕವನ್ನು ಲೆಕ್ಕಿಸದೇ ಹೊಂಡದಲ್ಲಿ ಸ್ನಾನಕ್ಕೆ ಇಳಿದು ಮುಳುಗುತ್ತಿದ್ದರು. ಸಹಾಯಕ್ಕಾಗಿ ಅಂಗಲಾಚುತ್ತಿದ್ದರು.

ಸ್ನೇಹಿತರು ಅಪಾಯದಲ್ಲಿ ಸಿಲುಕಿರುವುದನ್ನು ಗಮನಿಸಿ ಸ್ಕಂದ ಅವರು ನೀರಿಗೆ ಇಳಿದು ಮೂವರನ್ನೂ ರಕ್ಷಿಸಿದ್ದಾರೆ. ಕೊನೆಗೆ ಅವರಿಗೇ ಮೇಲೆ ಬರಲು ಆಗದೇ ಸ್ನೇಹಿತರೆದುರೇ ಪ್ರಾಣ ಕಳೆದುಕೊಂಡಿದ್ದಾರೆ.

ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 6

  Sad
 • 2

  Frustrated
 • 6

  Angry

Comments:

0 comments

Write the first review for this !