ಮಡಿಕೇರಿ: ತಾಲ್ಲೂಕಿನ ಮರಗೋಡು ವೈಷ್ಣವಿ ಫುಟ್‌ಬಾಲ್ ಕ್ಲಬ್ ಮತ್ತು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಸಹಯೋಗದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಡಿ.12ರಿಂದ ನಾಲ್ಕು ದಿನಗಳ ಕಾಲ ಮರಗೋಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ 4ನೇ ವರ್ಷದ ಹೊನಲು ಬೆಳಕಿನ ಹುತ್ತರಿ ಕಪ್ ಫುಟ್‌ಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಂದ್ಯಾವಳಿಗೆ ತಂಡಗಳ ನೋಂದಣಿ ಮುಕ್ತವಾಗಿದ್ದು ಮೊದಲು ನೋಂದಾಯಿಸಿಕೊಂಡ 30 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗತ್ತದೆ. 7+2 ಆಟಗಾರರ ಪಂದ್ಯಾವಳಿ ನಾಕೌಟ್ ಮಾದರಿಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಬಡುವಂಡ್ರ ದುಷ್ಯಂತ್ ಮಾತನಾಡಿ, ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿ ಆಗಿರುವುದರಿಂದ ತಂಡಗಳಿಗೆ ನೋಂದಣಿ ಶುಲ್ಕ ₹2,500 ನಿಗದಿಪಡಿಸಲಾಗಿದೆ. ನೋಂದಣಿಗೆ ಡಿಸೆಂಬರ್ ಐದು ಕೊನೆಯ ದಿನವಾಗಿದ್ದು, ನೋಂದಣಿ ಮಾಡಿಕೊಂಡ ತಂಡಗಳನ್ನು ಮಾತ್ರ ಟೈಸ್ ಹಾಕಲು ಪರಿಗಣಿಸಲಾಗುತ್ತದೆ ಎಂದರು.

ಅಂತರರಾಷ್ಟ್ರೀಯ ಪಂದ್ಯಾವಳಿ ಮಾದರಿಯಲ್ಲೇ ಪಂದ್ಯಾವಳಿಗಳು ನಡೆಯಲಿದ್ದು, ಆಟಗಾರರು ಸಂಪೂರ್ಣ ಕಿಟ್ ಧರಿಸಿ ಆಡುವುದು ಕಡ್ಡಾಯ. ಮಾಹಿತಿಗೆ ಮೊಬೈಲ್: 94826 31474, 94831 34495 ಸಂಪರ್ಕಿಸಲುದುಷ್ಯಂತ್ ಕೋರಿದರು.

ಸಂಘದ ಸದಸ್ಯ ಗೋಪಾಲ್ ಸೋಮಯ್ಯ ಮಾತನಾಡಿ, ಸಂಜೆ 5ರಿಂದ ರಾತ್ರಿ 11ರ ವರೆಗೆ ಪಂದ್ಯಾವಳಿ ನಡೆಯಲಿದೆ. ಕೊಡಗು ಜಿಲ್ಲೆಯ ಮಂಗಳೂರು, ಕೇರಳ, ಮೈಸೂರು ಹಾಗೂ ಹಾಸನದಿಂದ ತಂಡಗಳು ಆಗಮಿಸುವ ನಿರೀಕ್ಷೆ ಇದೆ ಎಂದರು.

ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ₹ 30 ಸಾವಿರ ನಗದು ಹಾಗೂ ರನ್ನರ್ ಅಪ್ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ₹20 ಸಾವಿರ ನಗದು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಕೊಂಪುಳಿ ಕಿರಣ್, ಚೇತನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.