ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅಬ್ಬರಿಸುತ್ತಿದ್ದ ಆರಿದ್ರಾ ಮಳೆ ಶುಕ್ರವಾರ ಶಾಂತವಾಯಿತು. ಗಾಳಿಯ ಅಬ್ಬರವೂ ಕಡಿಮೆಯಾಗಿ, ಮಳೆಯ ಬಿರುಸೂ ಕಡಿಮೆಯಾಯಿತು. ಇದರಿಂದ ಮಳೆಯಿಂದ ಬಸವಳಿದಿದ್ದ ಜನರು ನಿಟ್ಟುಸಿರುಬಿಟ್ಟರು.

ನದಿ, ತೊರೆಗಳು ಭೋರ್ಗರೆಯುತ್ತಿದ್ದರೂ ಮಳೆ ಕಡಿಮೆಯಾಗಿರುವುದು ನದಿ ತೀರದ ನಿವಾಸಿಗಳಲ್ಲಿ ತುಸು ನೆಮ್ಮದಿ ತಂದಿದೆ. ಆದರೆ, ಮತ್ತೆ ಎಲ್ಲಿ ಮಳೆ ಆರಂಭವಾಗುವುದೋ ಎಂಬ ಆತಂಕದಲ್ಲಿ ಅವರಿದ್ದಾರೆ.

ಪ್ರವಾಹಪೀಡಿತವಾಗಿದ್ದ ನಾಪೋಕ್ಲು ಹೋಬಳಿಯಲ್ಲಿ ಹಲವು ರಸ್ತೆಗಳಿಗೆ ನುಗ್ಗಿದ್ದ ನದಿ ನೀರು ನಿಧಾನವಾಗಿ ಇಳಿಕೆಯಾಗುತ್ತಿದೆ. ಆದರೂ, ಇನ್ನೂ ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತಿದೆ.

ಮತ್ತೊಂದೆಡೆ, ಪೊನ್ನಂಪೇಟೆ ಭಾಗದಲ್ಲೂ ಮಳೆ ಇಳಿಮುಖವಾಗಿದ್ದರೂ ಲಕ್ಷ್ಮಣತೀರ್ಥ ಹಾಗೂ ಬರಪೊಳೆ ನದಿಗಳ ಉಬ್ಬರ ಕಡಿಮೆಯಾಗಿಲ್ಲ. ಗದ್ದೆಗಳಲ್ಲಿ ಆವರಿಸಿಕೊಂಡಿರುವ ನದಿ ನೀರು ಇನ್ನೂ ಸಾಗರದಂತೆ ಕಾಣಿಸುತ್ತಿದೆ.

ಇತ್ತ ಮಡಿಕೇರಿಯಲ್ಲಿ ಗುರುವಾರ ಸಂಜೆ ಕುಂಭದಲ್ಲಿ ನೀರನ್ನು ಸುರಿದಂತೆ ಒಮ್ಮೆಗೆ ಒಂದೆರಡು ಗಂಟೆಗಳ ಮಳೆ ಅಬ್ಬರಿಸಿ ಆತಂಕವನ್ನು ತೊಂದೊಡ್ಡಿದ ಬಳಿಕ ಶಾಂತವಾಯಿತು. ಬಿರುಸಿನ ಗಾಳಿಯ ತೀವ್ರತೆ ಕಡಿಮೆಯಾಗಿದ್ದರು ಆಗೊಮ್ಮ, ಈಗೊಮ್ಮೆ ಗಾಳಿ ಬಿರುಸಿನಿಂದ ಇನ್ನೂ ಬೀಸುತ್ತಿದೆ. ಒಂದೆರಡು ಗಂಟೆಗಳ ಕಾಲ ಬಿಡುವು ನೀಡುತ್ತಾ ಮಳೆಯೂ ಸಾಧಾರಣವಾಗಿ ಸುರಿಯುತ್ತ ನೆಲವನ್ನು ಆರಲು ಬಿಟ್ಟಿಲ್ಲ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿದಿರುವುದರಿಂದ ಹಾಗೂ ಬಿಸಿಲು ಬಾರದಿರುವುದರಿಂದ ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಚಳಿ ವ್ಯಾಪಿಸಿದೆ. ಶೀತಮಯವಾದ ಗಾಳಿ ಬೀಸುತ್ತಿರುವುದು ಜನರನ್ನು ಇನ್ನಷ್ಟೂ ನಡುಗಿಸಿದೆ. ಬಿಸಿಲಿಗಾಗಿ ಜನರು ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಲಕ್ಷ್ಮಣ ತೀರ್ಥ ಪ್ರವಾಹಕ್ಕೆ ಮುಳುಗಿದ ಸೇತುವೆ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಲಕ್ಷ್ಮಣತೀರ್ಥ ನದಿಪಾತ್ರದಲ್ಲಿ ನೀರು ಸಾಗರಂತೆ ಆಗಿದೆ. ನದಿ ಉಗಮವಾಗುವ ಶ್ರೀಮಂಗಲ ಇರ್ಪು ಬ್ರಹ್ಮಗಿರಿ ಪರ್ವತದ ತಪ್ಪಲಿನಿಂದ ಹಿಡಿದು ಕೊಡಗು ಜಿಲ್ಲೆಯಿಂದ ಹೊರಬೀಳುವವರೆಗಿನ ಬಾಳೆಲೆ ನಿಟ್ಟೂರು ಜಾಗಲೆವರಗೂ ಲಕ್ಷ್ಮಣತೀರ್ಥ ಪ್ರವಾಹದ ಕಬಂಧ ಬಾಹುಗಳನ್ನು ಚಾಚಿದೆ. ಶ್ರೀಮಂಗಲ ಭಾಗದಲ್ಲಿ ನದಿ ಪ್ರವಾಹಕ್ಕೆ ನಾಲ್ಕೇರಿ ಶ್ರೀಮಂಗಲ ನಡುವಿನ ಸಂಪರ್ಕ ಸೇತುವೆ ಮುಳುಗಿದ್ದರೆ ಬಾಳೆಲೆ ಭಾಗದಲ್ಲಿ ಕೊಟ್ಟಗೇರಿ ಬಾಳೆಲೆ ನಡುವಿನ ಸೇತುವೆಯೂ ನೀರಿನಲ್ಲಿ ಮುಳುಗಿ ಸಂಚಾರಕ್ಕೆ ಅಡ್ಡಿಯಾಗಿದೆ. ಮತ್ತೊಂದೆಡೆ ಬಲ್ಯಮಂಡೂರು ಹರಿಹರ ನಡುವಿನ ಗದ್ದೆ ಬಯಲು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕಾನೂರು ವಡ್ಡರಮಾಡು ಭಾಗದ ಗದ್ದೆಗಳು ನಿರಿನಲ್ಲಿ ಮುಳುಗಿದ್ದರೆ ಬಾಳೆಲೆ ಕೊಟ್ಟಗೇರಿ ನಿಟ್ಟೂರು ಜಾಗಲೆ ನಡುವಿನ ಗದ್ದೆ ಬಯಲು ಸಾಕ್ಷಾತ್ ಸಮುದ್ರದಂತೆ ಕಂಡು ಬರುತ್ತಿದೆ. ಬಾಳೆಲೆ ನಿಟ್ಟೂರು ನಡುವಿನ ಲಕ್ಷ್ಮಣತೀರ್ಥ ನದಿ ಸೇತುವೆ ದಾಟಿ ಹೋಗುವಾಗ ನೀರಿನ ಹರವು ಮತ್ತು ಗಾಳಿಯ ರಭಸ ಕಂಡು ಭಯವಾಗುತ್ತದೆ. ಆದರೆ ಈ ಭಾಗದಲ್ಲಿ ಸೇತುವೆ ಎತ್ತರ ಹೆಚ್ಚಿರುವುದರಿಂದ ರಸ್ತೆ ಸಂಪರ್ಕ ಕಡಿತವಾಗುವ ಆತಂಕ ದೂರವಾಗಿದೆ. ಕೊಟ್ಟಗೇರಿ ಬಾಳೆಲೆ ನಡುವೆ ನೀರಿನಲ್ಲಿ ಮುಳುಗಿರುವ ರಸ್ತೆ ಪ್ರವಾಹವನ್ನು ಬಾಳೆಲೆ ಕಂದಾಯ ಅಧಿಕಾರಿಗಳು ವೀಕ್ಷಿಸಿದರು.

ನೀರಿನ ಮಟ್ಟ ಇಳಿಕೆ: ರಸ್ತೆಗಳು ಜಲಾವೃತ

ಸಿದ್ದಾಪುರ: ಕರಡಿಗೋಡು ಗುಹ್ಯ ಭಾಗದಲ್ಲಿ ಕಾವೇರಿ ನದಿ ನೀರಿನ ಮಟ್ಟ ಕೊಂಚ ಇಳಿಕೆಯಾಗಿದ್ದು ಕೆಲವು ರಸ್ತೆಗಳು ಇನ್ನೂ ಜಲಾವೃತವಾಗಿವೆ. ಕರಡಿಗೋಡು ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಶುಕ್ರವಾರ ಮಧ್ಯಾಹ್ನದ ನಂತರ ನದಿ ನೀರು ಕೊಂಚ ಇಳಿಕೆಯಾಗಿದೆ. ಕರಡಿಗೋಡು-ಚಿಕ್ಕನಹಳ್ಳಿ ರಸ್ತೆ ಜಲಾವೃತವಾಗಿದೆ. ಗುಹ್ಯ ಗ್ರಾಮದ ಅಗಸ್ತ್ಯೇಶ್ವರ ದೇವಾಲಯ ರಸ್ತೆ ಜಲಾವೃತವಾಗಿದ್ದು ಕಕ್ಕಟ್ಟುಕಾಡು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೂಡುಗದ್ದೆ ಅಯ್ಯಪ್ಪ ದೇವಾಲಯದ ಬಳಿ ನದಿಯು ರಸ್ತೆಯ ಮಟ್ಟದಲ್ಲಿ ಹರಿಯುತ್ತಿದ್ದು ಅಪಾಯದ ಸ್ಥಿತಿಯಲ್ಲಿದೆ. ಸಾರ್ವಜನಿಕರು ನದಿಯ ಸಮೀಪದಕ್ಕೆ ತೆರಳದಂತೆ ಕಂದಾಯ ಇಲಾಖೆ ಮುನ್ಸೂಚನೆ ನೀಡಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ವರ್ಣಮಾಲ ಕಲ್ಯಾಣ ಮಂಟಪದಲ್ಲಿ ಪರಿಹಾರ ಕೇಂದ್ರ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ನೆಲ್ಯಹುದಿಕೇರಿ ಭಾಗದ ಕುಂಬಾರಗುಂಡಿಯ ಅಕ್ಕಿಣಿ ಕರ್ಪ ಎಂಬವರ ನದಿ ದಡದ ಗುಡಿಸಲಿಗೆ ನೀರು ನುಗ್ಗಿದ್ದು ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕರ್ಪ ಹಾಗೂ ಕುಟುಂಬಸ್ಥರು ಈ ಹಿಂದೆಯೇ ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಬೆಟ್ಟದಕಾಡು ಕುಂಬಾರಗುಂಡಿ ಬರಡಿ ಭಾಗದಲ್ಲಿ ಪ್ರವಾಹದ ಭೀತಿ ಮುಂದುವರೆದಿದ್ದು ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.