ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದರಡು ತಿಂಗಳುಗಳಿಂದ ವಿಪರೀತ ಮಳೆ ಬಂದು, ಕೂಲಿ ಕೆಲಸ ಮಾಡುವವರಿಗೆ ಕೆಲಸವೇ ಸಿಗಲಿಲ್ಲ. ಇದರಿಂದ ಅವರ ಬದುಕಿನ ನಿರ್ವಹಣೆ ತೀರಾ ಸಂಕಷ್ಟಮಯವಾಗಿದೆ.
ಇಂತಹ ಹೊತ್ತಿನಲ್ಲಿ ಮೈಕ್ರೋ ಫೈನಾನ್ಸ್ ಸಾಲ ನೀಡುತ್ತಿರುವ ಸಂಸ್ಥೆಗಳು, ಜಿಲ್ಲೆಯ ಹಣಕಾಸು ಸಂಸ್ಥೆಗಳು ಹಾಗೂ ಗಿರವಿ ಸಂಸ್ಥೆಗಳು ತಾವು ನೀಡಿರುವ ಸಾಲದ ಕಂತುಗಳನ್ನು ಸೆಪ್ಟೆಂಬರ್ ತಿಂಗಳ 15ರ ನಂತರ ವಸೂಲು ಮಾಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.