ನಾಪೋಕ್ಲು: ಹೋಬಳಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಶನಿವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಯಿತು.

ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಮಳೆ ಸುರಿಯಿತು. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಕಾರ್ಮೋಡ ಕವಿದು ಗುಡುಗು ಮಿಂಚು ಸಹಿತ ಮಳೆ ಸುರಿಯಿತು.

ಸಮೀಪದ ಪಾಲೂರು, ಕುಂಬಳ ದಾಳು, ಹೊದ್ದೂರು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಕೈಕಾಡು, ಕೊಳಕೇರಿ, ಕುಂಜಿಲ, ಚೆಯ್ಯಂಡಾಣೆ ಭಾಗಗಳಲ್ಲಿ ಪ್ರತಿದಿನ ಮಧ್ಯಾಹ್ನ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಬೆಳೆಗಾರರು ಕಾಫಿ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ಸಿದ್ಧತೆ ನಡೆಸಿದ್ದಾರೆ. ಕಾಫಿ ಗಿಡಗಳ ಬುಡ ಸ್ವಚ್ಛಗೊಳಿಸುವ ಕೆಲಸದಲ್ಲಿ ಕಾರ್ಮಿಕರು ನಿರತರಾಗಿದ್ದಾರೆ. ಧಾರಾಕಾರ ಮಳೆಯಿಂದಾಗಿ ನದಿ, ತೋಡು ಹಾಗೂ ಕೆರೆಗಳಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

ಅಂಗಡಿಗೆ ನುಗ್ಗಿದ ನೀರು
ನಾಪೋಕ್ಲು: ಭಾಗಮಂಡಲ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಬಿರುಸಿನ ಮಳೆ ಆಯಿತು. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮನೆಗಳ ಮುಂದೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಸಮಸ್ಯೆ ಆಯಿತು.

ಭಾಗಮಂಡಲದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯಿಂದ ರಸ್ತೆ ಕೆಸರುಮಯವಾಯಿತು. ಚರಂಡಿ ಮಣ್ಣನ್ನು ರಸ್ತೆ ಬದಿ
ಸುರಿದಿರುವುದರಿಂದ ಮಳೆ ಬಂದಾಗ ರಸ್ತೆ ಕಾಣದಂತಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಸಮರ್ಪಕವಾಗಿ ನಡೆಯದೆ ವಿಳಂಬ ಆಗುತ್ತಿದ್ದು, ಸ್ಥಳೀಯರು ಪ್ರತಿ ದಿನ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಮೂರು ದಿನಗಳಿಂದ ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಆಗುತ್ತಿದ್ದು, ಅಂಗಡಿಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಮಳೆ ಬಂದಾಗ ರಸ್ತೆಗಳಲ್ಲಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರು ಪರದಾಡುತ್ತಿದ್ದಾರೆ.

ಮಳೆಗಾಲ ಹಾಗೂ ನೀರಿನ ಹರಿವಿನ ಬಗ್ಗೆ ಗೊತ್ತಿಲ್ಲ. ವ್ಯವಸ್ಥಿತ ಯೋಜನೆಯಿಲ್ಲದೆ ಮೇಲ್ಸೇತುವೆ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು, ವ್ಯಾಪಾರಸ್ಥರು ದೂರುತ್ತಾರೆ.

ಶನಿವಾರಸಂತೆ ವರದಿ
ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಶನಿವಾರ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಉತ್ತಮ ಮಳೆ ಸುರಿಯಿತು.

ಸಂಜೆ 4.15 ರಿಂದ ಆರಂಭವಾಗಿ 5.30 ರವರೆಗೂ ಬಿಡುವು ನೀಡದೆ ಸುರಿಯಿತು. ನಂತರವೂ ಮಳೆ ಹನಿ ಜಿನುಗುತ್ತಲೇ ಇತ್ತು.ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು ಒಂದು ಇಂಚು ಮಳೆಯಾಗಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 85 ಸೆಂಟ್ ಮಳೆಯಾಗಿದೆ. ಲಾಕ್ಡೌನ್ ಕಾರಣ ಮನೆಯಲ್ಲೇ ಇದ್ದ ಕೃಷಿಕರು, ಸಂಜೆ ಸುರಿದ ಮಳೆಯಿಂದ ಖುಷಿ ವ್ಯಕ್ತಪಡಿಸಿದರು. ಕೃಷಿ ಚಟುವಟಿಕೆಗೆ ಮಳೆಯ ಅಗತ್ಯವಿತ್ತು, ಕಾಫಿ ತೋಟದಲ್ಲಿ ಚಿಗುರು ತೆಗೆವ, ಮರ ಕಸಿ ಮಾಡುವ ಕೆಲಸ
ನಡೆದಿದೆ.

‘ಉದ್ದಿಮೆದಾರರು, ವ್ಯಾಪಾರಿಗಳಲ್ಲಿ ಲಾಕ್ಡೌನ್ ಚಿಂತೆ ಮೂಡಿಸಿದೆ. ಆದರೆ, ರೈತರಿಗೆ ಕೃಷಿ ಕೆಲಸಕ್ಕೆ ಅನುಕೂಲ ಕಲ್ಪಿಸಿದಂತಾಗಿದೆ’ ಎನ್ನುತ್ತಾರೆ ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ.ಮೋಹನ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.