ಸೂರ್ಯೋದಯಕ್ಕೂ ಹತ್ತಿಯ ಉಂಡೆಗಳಂತೆ ಆವರಿಸಿದ್ದ ಮೋಡ ಮಂಜುಗಳು ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಸೆರೆಯಾಯಿತು
ಪ್ರಜಾವಾಣಿ ಚಿತ್ರ: ರಂಗಸ್ವಾಮಿ
ಮುಖ್ಯಮಂತ್ರಿಗೆ ಪತ್ರ ಬರೆಯುವೆ: ರಾಜಾಸೀಟ್‌ಗೆ ಬರುವವರು ಅದರ ನಿಸರ್ಗದ ಸೌಂದರ್ಯ ವೀಕ್ಷಣೆಗಾಗಿ ಮಾತ್ರ. ಇಲ್ಲಿ ಹಣ ಸಂಪಾದನೆಗಾಗಿ ಮಾತ್ರ ಗಾಜಿನ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿನ ನಿಸರ್ಗದ ಸೌಂದರ್ಯ ರಕ್ಷಣೆ ಮಾಡಬೇಕು. ಕೂಡಲೇ ಈ ಗಾಜಿನ ಸೇತುವೆ ನಿರ್ಮಾಣ ಪ್ರಸ್ತಾವವನ್ನು ಕೈಬಿಡಬೇಕು. ಈ ಸಂಬಂಧ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವೆ
ಎಂ.ಸಿ.ನಾಣಯ್ಯ ಕಾಂಗ್ರೆಸ್‌ನ ಹಿರಿಯ ಮುಖಂಡ ಮತ್ತು ಮಾಜಿ ಕಾನೂನು ಸಚಿವ.
ಪ್ರತಿಭಟನೆಗೂ ಸಿದ್ಧ; ಸಂಸದ ರಾಜಾಸೀಟ್‌ನಲ್ಲಿ ಗಾಜಿನ ಸೇತುವೆಯಂತಹ ನಿರ್ಮಾಣ ಕಾಮಗಾರಿಗಳು ಖಂಡಿತವಾಗಿಯೂ ಬೇಡ. ಇದಕ್ಕೆ ಸ್ಥಳೀಯರ ವಿರೋಧ ಇದೆ. ಸ್ಥಳೀಯರ ಅಭಿಪ್ರಾಯವನ್ನು ಗೌರವಿಸಬೇಕು. ಗಾಜಿನ ಸೇತುವೆ ವಿರುದ್ಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವೆ. ಮಾತ್ರವಲ್ಲ ಪ್ರತಿಭಟನೆಗೂ ಸಿದ್ಧವಿದ್ದೇನೆ
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದ
ಗಾಜಿನ ಸೇತುವೆ ಬೇಡ: ಕೊಡಗಿನಲ್ಲಿ ಗಾಜಿನ ಸೇತುವೆಯಂತಹ ಪ್ರವಾಸೋದ್ಯಮ ಚಟುವಟಿಕೆಗಳು ಬೇಡ. ಇಲ್ಲಿನ ಪರಿಸರವನ್ನು ಎಲ್ಲರೂ ರಕ್ಷಿಸಬೇಕು
ಕರ್ನಲ್ ಸಿ.ಪಿ.ಮುತ್ತಣ್ಣ ಪರಿಸರ ಆರೋಗ್ಯ ಫೌಂಡೇಷನ್‌ನ ಸಂಸ್ಥಾಪಕ.
ಕೌನ್ಸಿಲ್ ಸಭೆಯಲ್ಲಿ ಚರ್ಚೆ: ಗಾಜಿನ ಸೇತುವೆ ನಿರ್ಮಾಣದ ವಿಷಯವನ್ನು ಮಡಿಕೇರಿ ನಗರಸಭೆಯ ಗಮನಕ್ಕೆ ತಂದಿಲ್ಲ. ಇಲ್ಲಿ ಗಾಜಿನ ಸೇತುವೆ ಖಂಡಿತ ಬೇಡ. ಕೂಡಲೇ ಈ ನಿರ್ಮಾಣ ಪ್ರಸ್ತಾವವನ್ನು ಕೈಬಿಡಬೇಕು. ಈ ಕುರಿತು ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಗುವುದು ಮಹೇಶ್ ಜೈನಿ ಮಡಿಕೇರಿ ನಗರಸಭೆಯ ಉಪಾಧ್ಯಕ್ಷ.
ಸರ್ಕಾರದ ನಿರ್ಧಾರವನ್ನು ಜಾರಿಗೊಳಿಸುತ್ತಿದ್ದೇವೆ ರಾಜಾಸೀಟ್ ಉದ್ಯಾನದಲ್ಲಿ ಗಾಜಿನ ಸೇತುವೆ ನಿರ್ಮಾಣ ಮಾಡಬೇಕೆನ್ನುವುದು ಸರ್ಕಾರದ ನಿರ್ಧಾರ. ಅದನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದ್ದೇವೆ.