ಸುಂಟಿಕೊಪ್ಪ: ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ 26ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಮಿಡ್ ಸಿಟಿ ಸುಂಟಿಕೊಪ್ಪ ಮತ್ತು ಎನ್.ವೈ.ಸಿ ಕೊಡಗರಹಳ್ಳಿ ತಂಡಗಳು ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದವು.

ಮೊದಲ ಪಂದ್ಯವು ಮಿಡ್ ಸಿಟಿ ಸುಂಟಿಕೊಪ್ಪ ಮತ್ತು ಫ್ರೆಂಡ್ಸ್ ಎಫ್ಸಿ ಬೀಟಿಕಟ್ಟೆ ತಂಡಗಳ ನಡುವೆ ನಡೆಯಿತು. ಮಿಡ್ ಸಿಟಿ ತಂಡದ ರಾಷ್ಟಮಟ್ಟದ ಅನುಭವಿ ಯುವ ಆಟಗಾರರನ್ನು ಹೊಂದಿದ್ದು, ಹೊಂದಾಣಿಕೆಯ ಆಟಕ್ಕೆ ಒತ್ತು ನೀಡಿ ಬೀಟಿಕಟ್ಟೆ ತಂಡವನ್ನು ತನ್ನ ಆಕರ್ಷಕ ಆಟದ ಮೂಲಕ ಕಟ್ಟಿಹಾಕಿ ಚೆಂಡನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿತು.

ಪಂದ್ಯದ ಮೊದಲಾರ್ಧದ 12ನೇ ನಿಮಿಷದಲ್ಲಿ ಮಿಡ್ ಸಿಟಿ ತಂಡದ ಮುನ್ನಡೆ ಆಟಗಾರ ದಿವಾಕರ್ ಅವರು ಮೊದಲ ಗೋಲನ್ನು ಹೊಡೆಯುವುದರ ಮೂಲಕ ತಂಡಕ್ಕೆ ಮುನ್ನಡೆಯನ್ನು ತಂದುಕೊಟ್ಟರು. ಆನಂತರ ಪಂದ್ಯದ 18ನೇ ನಿಮಿಷದಲ್ಲಿ ಮುಸ್ತಾಕ್ ಅವರು ಹೊಡೆದ ಚೆಂಡು ಗೋಲ್ ಕೀಪರ್ ಕಣ್ಣು ತಪ್ಪಿಸಿ ಗೋಲ್ ಪಟ್ಟಿಯೊಳಗೆ ನುಸುಳುವುದರ ಮೂಲಕ ಮಿಡ್ ಸಿಟಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದರೊಂದಿಗೆ ಮಿಡ್ ಸಿಟಿ ತಂಡ ಮೊದಲಾರ್ಧದಲ್ಲಿ 2–0 ಗೋಲುಗಳ ಮುನ್ನಡೆ ಪಡೆದುಕೊಂಡಿತು.

ದ್ಚಿತೀಯಾರ್ಧದಲ್ಲಿ ಮಿಡ್ ಸಿಟಿ ಸಂಪೂರ್ಣವಾಗಿ ಚೆಂಡಿನ ಮೇಲೆ ಹತೋಟಿ ಸಾಧಿಸಿತು. ಉತ್ತಮ ಪಾಸ್ಗಳ ಮೂಲಕ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಿದ ಮಿಡ್ ಸಿಟಿ ತಂಡದ ಆಟಗಾರರು ಪಂದ್ಯದ ಎರಡನೇ ನಿಮಿಷದಲ್ಲಿ ದಿವಾಕರ್, 4ನೇ ನಿಮಿಷದಲ್ಲಿ ಪಾಂಡ್ಯನ್ ಗೋಲು ಬಾರಿಸಿದರು. ಬೀಟಿಕಟ್ಟೆ ತಂಡದ ಆಟಗಾರ ಪ್ರೀತಂ ಅವರು ಆಟಗಾರರನ್ನು ಕಣ್ತಪ್ಪಿಸಿ ಆಕರ್ಷಕವಾದ ಗೋಲನ್ನು ಹೊಡೆದರು. ಆದರೆ ಬಿರುಸಿನ ಆಟಕ್ಕೆ ಒತ್ತು ನೀಡಿದ ಮಿಡ್ ಸಿಟಿ ತಂಡ 18ನೇ ನಿಮಿಷದಲ್ಲಿ ವಿಜು, 19ನೇ ನಿಮಿಷದಲ್ಲಿ ಸಾಧಿಕ್ ಗೋಲು ಹೊಡೆಯುವುದರ ಮೂಲಕ ತಂಡಕ್ಕೆ ಜಯ ತಂದುಕೊಡುವುದರ ಮೂಲಕ ಮಿಡ್ ಸಿಟಿ ಸುಂಟಿಕೊಪ್ಪ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ದಿನದ ಎರಡನೇ ಪಂದ್ಯವು ನೇತಾಜಿ ಯುವಕ ಸಂಘ ಕೊಡಗರಹಳ್ಳಿ ಮತ್ತು ಆಲ್ ಸ್ಟಾರ್ ಎಫ್.ಸಿ ಗೋಣಿಕೊಪ್ಪ ತಂಡಗಳ ನಡುವೆ ನಡೆಯಿತು. ಎರಡು ತಂಡದಲ್ಲೂ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಆಟಗಾರರು ಇದ್ದು, ಉತ್ತಮ ಪ್ರದರ್ಶನದ ಮೂಲಕ ಜನರ ಚಪ್ಪಾಳೆ ಗಿಟ್ಟಿಸಿತು. ಎರಡು ತಂಡದ ಆಟಗಾರರು ಗೋಲುಪಟ್ಟಿಗೆ ಚೆಂಡನ್ನು ಹೊಡೆಯುವುದರ ಮೂಲಕ ಎಲ್ಲರನ್ನು ತುದಿಗಾಲಿನಲ್ಲಿ ನಿಲ್ಲಿಸಿದರು. ಕ್ಷಣಕ್ಷಣಕ್ಕೂ ರೋಚಕತೆಯಿಂದ ಕೂಡಿತ್ತು. ಸಮಬಲದ ಪ್ರದರ್ಶನದಿಂದ ಮೊದಲಾರ್ಧದಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ.

ದ್ವಿತೀಯಾರ್ಧದಲ್ಲಿ ಗೋಣಿಕೊಪ್ಪ ತಂಡದ ಆಕರ್ಷಕ ಹೊಂದಾಣಿಕೆಯ ಆಟದ ನಡುವೆ ತಂಡದ ಆಟಗಾರರು ಮಾಡಿದ ಸಣ್ಣ ತಪ್ಕಿನಿಂದ ಕೊಡಗರಹಳ್ಳಿ ತಂಡಕ್ಕೆ ಟ್ರೈ ಬ್ರೇಕರ್ ಅವಕಾಶ ಲಭಿಸಿತು. ಈ ಅವಕಾಶವನ್ನು ಬಳಸಿಕೊಂಡ ತಂಡದ ಪುನೀತ್ ಅವರು ಗೋಲು ಹೊಡೆಯುವುದರ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಈ ಗೋಲಿನಿಂದ ಎದೆಗುಂದದ ಗೋಣಿಕೊಪ್ಪ ತಂಡ ತನ್ನದೇ ಚಾಕಚಕ್ಯತೆಯ ಮೂಲಕ ಹಂತ ಹಂತವಾಗಿ ಕೊಡಗರಹಳ್ಳಿ ತಂಡದ ಗೋಲು ಪಟ್ಟಿಯೊಳಗೆ ಚೆಂಡು ಹೊಡೆಯುವ ಮೂಲಕ ಮನರಂಜನೆ ನೀಡಿದರು. ಇದೇ ವೇಳೆ ಗೋಣಿಕೊಪ್ಪ ತಂಡದ ಮುನ್ನಡೆ ಆಟಗಾರ ಮದನ್ 15 ನಿಮಿಷದಲ್ಲಿ ಹೊಡೆದ ಆಕರ್ಷಕ ಗೋಲ್ನಿಂದ ತಂಡ ಸಮಬಲ ಕಾಯ್ದುಕೊಂಡಿತು.

ನಂತರ ಯಾವುದೇ ಗೋಲು ಬಾರದ ಹಿನ್ನಲೆಯಲ್ಲಿ ಟ್ರೈ ಬ್ರೇಕರ್ ಅಳವಡಿಸಲಾಯುತು. ಈ ಟ್ರೈ ಬ್ರೇಕರ್ನಲ್ಲಿ ಎನ್.ವೈ.ಸಿ ಕೊಡಗರಹಳ್ಳಿ ತಂಡವು 3–2 ಗೋಲುಗಳಿಂದ ಗೋಣಿಕೊಪ್ಪ ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಹಿರಿಯ ಆಟಗಾರ ಹಸನ್ ಕುಂಞ ಚೆಂಡು ಒದೆಯುವುದರ ಮೂಲಕ ಫುಟ್ಬಾಲ್ ಪಂದ್ಯಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಬಿಬಿವೈಸಿ ಅಧ್ಯಕ್ಷ ಆಲಿಕುಟ್ಟಿ, ಗೌರವಾಧ್ಯಕ್ಷ ಟಿ.ವಿ.ಪ್ರಸನ್ನ, ಪದಾಧಿಕಾರಿಗಳಾದ ಶೈಲೇಂದ್ರ, ಬಿ.ಕೆ.ಪ್ರಶಾಂತ್, ಅನಿಲ್ ಕುಮಾರ್, ಜಾನ್ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ಶಬೀರ್, ರಫೀಕ್ ಖಾನ್, ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಉದ್ಯಮಿ ಧನುಕಾವೇರಪ್ಪ, ಕಬಡ್ಡಿ ಆಟಗಾರ ಜಗನ್ನಾಥ್ ನಾಕೂರು, ಉದ್ಯಮಿ ಕೆ.ಐ.ಶರೀಫ್, ವಾಸುದೇವ ಇತರರು ಇದ್ದರು.

ಇಂದಿನ ಪಂದ್ಯಗಳು: ಮಧ್ಯಾಹ್ನ 3 ಗಂಟೆಗೆ ಮೋಗ್ರಲ್ ಎಫ್ಸಿ ಕುಂಬ್ಳ ಮತ್ತು ಸ್ವರ್ಣ ಎಫ್ಸಿ ಮಂಡ್ಯ, ಸಂಜೆ 4 ಗಂಟೆಗೆ ಮಂಗಳೂರು ಎಫ್.ಸಿ ಮಂಗಳೂರು ಮತ್ತು ಇಂಡಿಪೆಂಡೆಂಟ್ ಎಫ್.ಸಿ.ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.