ಮಡಿಕೇರಿ: ತಾಲ್ಲೂಕಿನ ಕಕ್ಕಬ್ಬೆಯ ಸಮೀಪ ಇರುವ ನಾಲ್ಕುನಾಡು ಅರಮನೆ ಸಹ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಪೂರ್ವವಾದ ತಾಂತ್ರಿಕ ನೈಪುಣ್ಯತೆಯಿಂದ ಕೂಡಿರುವ ಇಲ್ಲಿನ ವಾಸ್ತುಶಿಲ್ಪ ಇಂದಿಗೂ ಪ್ರಚಾರಕ್ಕೆ ಸಿಗದೇ ಎಲೆಮರೆಯ ಕಾಯಂತಿದೆ. ಬರುವ ಪ್ರವಾಸಿಗರಿಗೆ ಕಟ್ಟಡವೊಂದನ್ನು ನೋಡಿದಂತೆ ಭಾಸವಾಗುತ್ತಿದೆ. ಈ ಅರಮನೆಯ ಕುರಿತು ಇನ್ನಷ್ಟು ಪ್ರಚಾರ ಮಾಡುವ ಅಗತ್ಯ ಇದೆ.

ಮಡಿಕೇರಿಯ ಕೋಟೆಯೊಳಗಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಸೇರಿದ ವಸ್ತುಸಂಗ್ರಹಾಲಯಕ್ಕೆ ಪ್ರತಿ ತಿಂಗಳು 15–20 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದರೆ, ಬಹಳಷ್ಟು ವಾಸ್ತುಶಿಲ್ಪದ ವಿಶೇಷಗಳು ಹಾಗೂ ತಾಂತ್ರಿಕ ನೈಪುಣ್ಯತೆ ಹೊಂದಿರುವ ನಾಲ್ಕುನಾಡು ಅರಮನೆಗೆ ಪ್ರತಿ ತಿಂಗಳು ಕೇವಲ 3–5 ಸಾವಿರ ಮಂದಿ ಪ್ರವಾಸಿಗರು ಮಾತ್ರವೇ ಭೇಟಿ ನೀಡುತ್ತಿದ್ದಾರೆ.

ಮುಖ್ಯವಾಗಿ, ಇಂತಹದೊಂದು ಅರಮನೆ ಇದೆ ಎಂಬುದೇ ಹೆಚ್ಚಿನ ಪ್ರವಾಸಿಗರಿಗೆ ತಿಳಿಯುತ್ತಿಲ್ಲ. ಇಲ್ಲಿನ ಕೋಟೆಗೆ ಅಥವಾ ರಾಜಾಸೀಟ್ ಹಾಗೂ ಇನ್ನಿತರ ಪ್ರವಾಸಿ ಸ್ಥಳಗಳಿಗೆ ಆಗಮಿಸುವ ಪ್ರವಾಸಿಗರಿಗೆ ಮಡಿಕೇರಿಯಿಂದ 40 ಕಿ.ಮೀ ದೂರದಲ್ಲೊಂದು ಅಪೂರ್ವ ಅರಮನೆ ಇದೆ ಎಂಬುದರ ಮಾಹಿತಿ ನೀಡುವಂತಹ ಕೆಲಸ ಆಗಬೇಕಿದೆ. ದಾರಿ ಮಧ್ಯೆ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕಿದೆ.

ಇದರ ವಾಸ್ತುಶಿಲ್ಪದ ಶೈಲಿ, ಐತಿಹಾಸಿಕ ಮಹತ್ವದ ವಿವರಗಳ ಫಲಕಗಳನ್ನು ಮಡಿಕೇರಿಯಲ್ಲಿರುವ ಪ್ರವಾಸಿ ತಾಣಗಳಲ್ಲಿ ಹಾಕಬೇಕಿದೆ. ಅಥವಾ ಕರಪತ್ರಗಳನ್ನು ಹಂಚಬೇಕಿದೆ. ಹಾಗಾದಾಗ ಮಾತ್ರ ನಾಲ್ಕುನಾಡು ಅರಮನೆಗೂ ಹೆಚ್ಚಿನ ಪ್ರಚಾರ ಸಿಕ್ಕಿ, ಹೆಚ್ಚಿನ ಪ್ರವಾಸಿಗರು ಅಲ್ಲಿಗೆ ಭೇಟಿ ಕೊಡುವಂತಾಗುತ್ತದೆ.

ನಾಲ್ಕುನಾಡು ಅರಮನೆಯ ಮಹತ್ವ

ಕೊಡಗನ್ನು ಆಳಿದ ಹಾಲೇರಿ ಅರಸರಲ್ಲಿ ದೊಡ್ಡ ವೀರರಾಜೇಂದ್ರ ಅವರು 1792ರಲ್ಲೇ ಈ ಅರಮನೆಯನ್ನು ನಿರ್ಮಿಸಿದರು ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ದಾಖಲೆಗಳು ಹೇಳುತ್ತವೆ. ಶತ್ರುಗಳಿಂದ ತಮ್ಮ ಕುಟುಂಬವನ್ನು ಗೌಪ್ಯವಾಗಿ ಹಾಗೂ ಸುರಕ್ಷಿತವಾಗಿಡಲು ನಿರ್ಮಿಸಿದರು ಎಂದು ಹೇಳಲಾಗುತ್ತದೆ. 1796ರಲ್ಲಿ ದೊಡ್ಡವೀರರಾಜೇಂದ್ರ ಹಾಗೂ ಮಹದೇವಮ್ಮಾಜಿ ಅವರ ವಿವಾಹ ನಡೆದಿದ್ದು ಇದೇ ಅರಮನೆಯಲ್ಲೇ. 1834ರಲ್ಲಿ ಕೊಡಗಿನ ಕೊನೆಯ ದೊರೆ ಚಿಕ್ಕವೀರ ರಾಜೇಂದ್ರ ಅವರನ್ನು ಬ್ರಿಟಿಷರು ಸೆರೆ ಹಿಡಿದಿದ್ದು ಇದೇ ಅರಮನೆಯಿಂದಲೇ.

ನಾಲ್ಕು ಅಡಿ ಎತ್ತರದ ಜಗಳಿಯ ಮೇಲೆ ಕಟ್ಟಿದ 2 ಅಂತಸ್ತಿನ ಅರಮನೆ ಇದಾಗಿದೆ. ಇಲ್ಲಿರುವ ಮರದ ಕಂಬಗಳು, ಕಿಟಕಿ ಹಾಗೂ ಬಾಗಿಲುಗಳು ಅತ್ಯಂತ ಸುಂದರ ಕೆತ್ತನೆಗಳಿಂದ ಕೂಡಿವೆ. ಮುಖ್ಯ ಪ್ರವೇಶದ್ವಾರಕ್ಕೆ ಹಸ್ತಿಸೋಪಾನ, ಎಡಬಲಗಳಲ್ಲಿ ಬ್ರಹ್ಮಕಾಂತ ಮಾದರಿಯ ಉಬ್ಬುಕೆತ್ತನೆಯ ಕಂಬಗಳು ಹಾಗೂ ಸುಂದರ ಭಿತ್ತಿಚಿತ್ರವನ್ನು ನೋಡಲು ಕಣ್ಣುಗಳು ಸಾಲದು ಎನ್ನಿಸುತ್ತವೆ.

ಒಳಗೆ ಮರದ ಚಾವಣಿಯ ವಿಶಾಲ ಪಡಸಾಲೆ, ದರ್ಬಾರ್ ಹಾಲ್ನ ಸುಂದರ ಕೆತ್ತನೆಗಳು, ಎಲ್ಲಕ್ಕಿಂತ ಮಿಗಿಲಾಗಿ ಕಮಲದ ಕೆತ್ತನೆಗಳು ಮತ್ತೊಮ್ಮೆ ನೋಡಬೇಕೆನಿಸುವಂತಿವೆ. ಅರಮನೆಯ ಭಿತ್ತಿಯ ಮೇಲೆ ಅಂಬಾರಿ, ನವರಾತ್ರಿ ಉತ್ಸವದ ಸೈನಿಕರ ಸಾಲುಗಳು, ರಾಣಿಯರ ಮತ್ತು ಪ್ರಾಣಿಗಳ ಚಿತ್ರಗಳು ಮನಮೋಹಕವಾಗಿವೆ.

ನೆಲಮಾಳಿಗೆಯಲ್ಲಿರುವ ಎರಡು ಕತ್ತಲೆ ಕೋಣೆಗಳು, ನೆಲಮಾಳಿಗೆಯ ಮಧ್ಯಭಾಗದ ಗೋಡೆಯಲ್ಲಿರುವ ಒಂದು ರಂಧ್ರದಿಂದ ನೋಡಿದರೆ ಅರಮನೆಯ ಹೊರಭಾಗ ತುಂಬ ದೂರದವರೆಗೆ ಕಾಣಿಸುವಂತಹ ವ್ಯವಸ್ಥೆ, ಮುಖ್ಯದ್ವಾರದಲ್ಲಿ ಪ್ರವೇಶಿಸುವ ವ್ಯಕ್ತಿಗೆ ಇದೇ ರಂಧ್ರದ ಮೂಲಕ ಗುಂಡು ಹೊಡೆಯಬಹುದಾದ ವ್ಯವಸ್ಥೆ ಇವೆಲ್ಲವೂ ಈ ಅರಮನೆಯ ಅದ್ಬುತ ವಾಸ್ತುಶಿಲ್ಪಕ್ಕೆ ಕೈಗನ್ನಡಿಯಂತಿವೆ.

ಸುರಂಗಮಾರ್ಗ ಸೇರಿದಂತೆ ಇನ್ನೂ ಅನೇಕ ಬಗೆಯ ವಿಶೇಷಗಳಿರುವ ಈ ಅರಮನೆಗೆ ಬೇಕಿದೆ ಕಾರ್ಯಕಲ್ಪ, ಇನ್ನಷ್ಟು ಪ್ರಚಾರ.

ಕೋಟೆಯೊಳಗಿರುವ ವಸ್ತುಸಂಗ್ರಹಾಲಯದಲ್ಲಿ ನಾಲ್ಕುನಾಡು ಅರಮನೆಯ ಛಾಯಾಚಿತ್ರ ಹಾಕಿದ್ದು ಬರುವ ಪ್ರವಾಸಿಗರಿಗೆ ಅರಮನೆ ಕುರಿತು ಮಾಹಿತಿ ನೀಡುತ್ತಿದ್ದೇವೆ
ಬಿ.ಪಿ.ರೇಖಾ ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.