ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನೀಮಿಯ ಶೈಲಿಯಲ್ಲಿ ವ್ಯಕ್ತಿ ಅಪಹರಣ; 9 ಮಂದಿ ಅಂತರಜಿಲ್ಲಾ ಡಕಾಯಿತರ ಬಂಧನ

48 ಗಂಟೆಗಳ ಅವಧಿಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು
Published 8 ಏಪ್ರಿಲ್ 2024, 5:25 IST
Last Updated 8 ಏಪ್ರಿಲ್ 2024, 5:25 IST
ಅಕ್ಷರ ಗಾತ್ರ

ಕುಶಾಲನಗರ: ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ 9 ಮಂದಿಯ ಅಂತರಜಿಲ್ಲಾ ಡಕಾಯಿತರ ತಂಡವನ್ನು ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಕೇವಲ 48 ಗಂಟೆಗಳ ಅವಧಿಯಲ್ಲೇ ಹೆಡೆಮುರಿ ಕಟ್ಟಿದ್ದಾರೆ. ಜೊತೆಗೆ, ಅಪಹರಣಗೊಂಡಿದ್ದ ಕಣಿವೆ ಬಸವನಹಳ್ಳಿ ಗ್ರಾಮದ ಹೇಮಂತ್ ಎಂಬುವವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಮೈಸೂರಿನ ರಾಜೀವ್ ನಗರದ ಯಾಸಿನ್ (21), ರುಕ್ಸಾನಾ ಪತಿ ಯಾಸಿನ್ (23), ಗೌಸಿಯ ನಗರದ
ಸಹಬಾಜ್ (28), ಅಬ್ಸಲ್ (21), ರೇಣುಕಾದೇವಿ ಬ್ಲಾಕ್‌ನ ಸುಹೇಲ್ ಅಹಮ್ಮದ್ (30), ಪಿರಿಯಾಪಟ್ಟಣದ ಯಾಸಿನ್ (23), ಮೈಸೂರಿನ ಗೌಸಿಯಾನಗರದ ಪೈಜಲ್ ಖಾನ್ (23), ರಾಜೀವ್ ನಗರದ ಮುದಾಸಿರ್ (24) ಬಂಧಿತರು. ಮೈಸೂರಿನ ಗೌಸಿಯ ನಗರದ ಪಿಳ್ಳೆ ಆಲಿಯಾಸ್ ಖುರಾನ್ ತಪ್ಪಿಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ₹ 5.5 ಲಕ್ಷ ಮೌಲ್ಯದ ಸ್ಥಾರ್ಪಿಯೋ ವಾಹನ ₹ 1.82 ಸಾವಿರ ಮೌಲ್ಯದ 30 ಗ್ರಾಂ ತೂಕದ ಚಿನ್ನಾಭರಣ, ₹ 50 ಸಾವಿರ ಮೌಲ್ಯದ 2 ಮೊಬೈಲ್‌, ಹೇಮಂತ್ ಅವರಿಗೆ ಸೇರಿದ ₹ 5.5  ಲಕ್ಷ ಮೌಲ್ಯದ ದ್ವಿಚಕ್ರ ವಾಹನ, ಆರೋಪಿ ರುಕ್ಸಾನಾ ಕೃತ್ಯಕ್ಕೆ ಉಪಯೋಗಿಸಿದ ₹ 30 ಸಾವಿರ ಮೌಲ್ಯದ ದ್ವಿಚಕ್ರ ವಾಹನ, ನಗದು ₹ 5 ಸಾವಿರ, ಆರೋಪಿತಗಳಿಗೆ ಸೇರಿದ 7 ಮೊಬೈಲ್‌ಗಳು ಸೇರಿ ಒಟ್ಟು ₹ 5.97.ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

‘ಇದೊಂದು ಅತ್ಯಂತ ಸಿನಿಮೀಯ ಶೈಲಿಯ ಪ್ರಕರಣವಾಗಿತ್ತು. ಅಪರೂಪದ ಸಾಕಷ್ಟು ಸವಾಲಿನ ಪ್ರಕರಣವೂ ಎನಿಸಿತ್ತು. ಅಪಹರಣಗೊಂಡಿದ್ದ ವ್ಯಕ್ತಿಯ ಜೀವವನ್ನು ಉಳಿಸುವ ಜವಾಬ್ದಾರಿಯೂ ಇತ್ತು. ಆದರೆ, ಈ ಎಲ್ಲ ಸವಾಲುಗಳನ್ನು ನಮ್ಮ ಪೊಲೀಸರು ಯಶಸ್ವಿಯಾಗಿ ನಿಭಾಯಿಸಿದರು. ಆರೋಪಿಗಳನ್ನು ಬಂಧಿಸಿದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏನಿದು ಘಟನೆ?

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಸಮೀಪ ಹೇಮಂತ್ ಅವರನ್ನು ಸ್ಕಾರ್ಪಿಯೊ ವಾಹನದಲ್ಲಿ ಸಿನಿಮೀಯ ಶೈಲಿಯಲ್ಲಿ ಅಪಹರಿಸಿ ₹ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ, ಆತನಿಂದ ಚಿನ್ನಾಭರಣ, ನಗದು, ಎಟಿಎಂ ಕಾರ್ಡ್ ಹಾಗೂ ಮೊಬೈಲ್‌ಗಳನ್ನು ಬಲವಂತದಿಂದ ದೋಚಿಕೊಂಡು ಪರಾರಿಯಾಗಿದ್ದರು. ದೂರು ಸ್ವೀಕರಿಸುತ್ತಿದ್ದಂತೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್‌, ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್‌.ವಿ.ಗಂಗಾಧರಪ್ಪ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಬಿ.ಜಿ.ಪ್ರಕಾಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT