ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಜ ಪಯಣಕ್ಕೆ ದುಬಾರೆಯಿಂದ ಮೂರು ಆನೆ

Published 21 ಆಗಸ್ಟ್ 2024, 7:43 IST
Last Updated 21 ಆಗಸ್ಟ್ 2024, 7:43 IST
ಅಕ್ಷರ ಗಾತ್ರ

ಕುಶಾಲನಗರ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರದಿಂದ ಮಂಗಳವಾರ ಗಜಪಯಣಕ್ಕೆ ಮೂರು ಸಾಕಾನೆಗಳನ್ನು ಬೀಳ್ಕೊಡಲಾಯಿತು.

ಧನಂಜಯ, ಗೋಪಿ ಹಾಗೂ ಕಂಜನ್ ಸಾಕಾನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಮೊದಲ ತಂಡಕ್ಕೆ ಕಳುಹಿಸಿಕೊಡಲಾಯಿತು.

ಕಾವೇರಿ ನದಿ ದಂಡೆ ಮೇಲಿರುವ ಶಿಬಿರದಲ್ಲಿ ಮೂರು ಸಾಕಾನೆಗಳಿಗೆ ಮಾವುತರು ಪೂಜೆ ಸಲ್ಲಿಸಿ ಹಣ್ಣುಗಳನ್ನು ನೀಡಿ ನಂತರ ಲಾರಿಗಳ ಮೂಲಕ ಮೈಸೂರಿಗೆ ಪ್ರಯಾಣ ಬೆಳೆಸಿದರು.

ಆನೆಗಳೊಂದಿಗೆ ಮಾವುತರಾದ ಜೆ.ಸಿ. ಭಾಸ್ಕರ್, ನವೀನ್ ಕುಮಾರ್, ಭೋಜಪ್ಪ, ಜೆ.ಡಿ.ವಿಜಯ, ಕಾವಾಡಿಗರಾದ ಶಿವು, ಮಣಿ, ಬಿ.ಪಿ.ಭರತ್, ಮಣಿಕಂಠ ಹಾಗೂ ಕುಟುಂಬದವರು ತೆರಳಿದರು.

ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ದುಬಾರೆ ಉಪ ವಲಯ ಅರಣ್ಯಾಧಿಕಾರಿಗಳು, ವನ್ಯಜೀವಿ ವಿಭಾಗದ ವೈದ್ಯರು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT